ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸೈನಾ, ಶ್ರೀಕಾಂತ್ ಮುನ್ನಡೆ

ನಾನ್ಜಿಂಗ್, ಜುಲೈ 31: ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಚೀನಾದ ನಾನ್ಜಿಂಗ್ ನಲ್ಲಿ ಮಂಗಳವಾರ ನಡೆದ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಕ್ರಮವಾಗಿ ವನಿತಾ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ವನಿತಾ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಟರ್ಕಿಯ ಅಲೈ ಡೆಮಿರ್ಬಾಗ್ ಅವರನ್ನು 21-17, 21-8ರ ನೇರ ಸೆಟ್ ನಿಂದ ಸೋಲಿಸಿದರು. ಮೂರನೇ ಸುತ್ತಿನಲ್ಲಿ ಸೈನಾ, ಇಂಡೋನೇಷ್ಯಾದ ರಾಚ್ಟಾನೋಕ್ ಇಂಟನಾನ್ ಅವರನ್ನು ಎದುರುಗೊಳ್ಳಲಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಕಿದಂಬಿ ಶ್ರೀಕಾಂತ್ ಅವರು ಶ್ರೇಯಾಂಕಿತರಲ್ಲದ ಐರಿಷ್ ಆಟಗಾರ ನಾತ್ ಗುಯೇನ್ ಅವರನ್ನು 21-15, 21-16ರಿಂದ ಮಣಿಸಿದರು. ಇಬ್ಬರ ನಡುವೆ 37 ನಿಮಿಷಗಳ ಕಾದಾಟ ನಡೆಯಿತು. ಶ್ರೇಯಾಂಕಿತರಲ್ಲದಿದ್ದರೂ ಗುಯೇನ್, ಶ್ರೀಕಾಂತ್ ಗೆ ಪೈಪೋಟಿ ನೀಡಿ ಗಮನ ಸೆಳೆದರು.
ಸೋಮವಾರ (ಜು. 30) ನಡೆದ ಪಂದ್ಯದಲ್ಲೂ ಭಾರತದ ಎಚ್ಎಸ್ ಪ್ರಣಯ್, ಸಮೀರ್ ವರ್ಮಾ, ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ ಮುನ್ನಡೆ ಸಾಧಿಸಿತ್ತು. ಭಾರತದ ಸ್ಟಾರ್ ಪ್ಲೇಯರ್ ಪಿವಿ ಸಿಂಧು ಕೂಡ ಫಾರ್ಮ್ ನಲ್ಲಿದ್ದು, ಪಂದ್ಯದ ಮುಕ್ತಾಯದ ವೇಳೆ ಭಾರತ ತಂಡಕ್ಕೆ ಹೆಚ್ಚು ಪದಕಗಳು ಲಭಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications