ಮಲೇಷ್ಯಾ ಮಾಸ್ಟರ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸೈನಾ, ಶ್ರೀಕಾಂತ್

ಕೌಲಾಲಂಪುರ್, ಜನವರಿ 17: ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಗುರುವಾರ (ಜನವರಿ 17) ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಪೈನಲ್‌ಗೆ ಪ್ರವೇಶಿಸಿದ್ದಾರೆ (ಚಿತ್ರ ಕೃಪೆ: ಬ್ಯಾಡ್ಮಿಂಟನ್ ಫೋಟೋ).
ಮಹಿಳಾ ಸಿಂಗಲ್ಸ್ ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ಅವರು ಹಾಂಕಾಂಗ್‌ನ ಪೂಯಿ ಯಿನ್ ಯಿಪ್ ಅವರನ್ನು 21-14, 21-16ರ ಅಂತರದಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇಬ್ಬರ ನಡುವೆ 39 ನಿಮಿಷಗಳ ಕಾದಾಟ ನಡೆಯಿತು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಅವರು ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಎದುರು 23-21, 8-21, 21-18ರ ಅಂತರದ ಗೆಲುವನ್ನಾಚರಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್, ಕೊರಿಯನ್ ಆಟಗಾರ ಸನ್ ವಾನ್ ಹೋ ಎದುರು ಸೆಣಸಾಡಲಿದ್ದಾರೆ.
Story first published: Thursday, January 17, 2019, 17:35 [IST]
Other articles published on Jan 17, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications