ಸೈನಾ, ಶ್ರೀಕಾಂತ್ ಇಂಡಿಯಾ ಓಪನ್ ಸೂಪರ್ ಚಾಂಪಿಯನ್ಸ್
ನವದೆಹಲಿ, ಮಾ. 30 : ಶನಿವಾರ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ನಂಬರ್ 1 ಪಟ್ಟಕ್ಕೇರಿದ್ದ ಸೈನಾ ನೆಹ್ವಾಲ್ ಭಾನುವಾರ ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿಯೂ ಕೆ.ಶ್ರೀಕಾಂತ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ಸಂಜೆ ನವದೆಹಲಿಯಲ್ಲಿ ನಡೆದ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ರಾಚನೋಕ್ ಇನ್ತಾನಾನ್ ಅವರನ್ನು 21-16, 21-14 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. [ಅಗ್ರಸ್ಥಾನಕ್ಕೇರಿದ ಸೈನಾ ನೆಹ್ವಾಲ್]

ಮೊದಲ ಸೆಟ್‌ನಲ್ಲೇ ಮುನ್ನಡೆ ಕಾಯ್ದುಕೊಂಡ ಸೈನಾ ನೆಹ್ವಾಲ್ ವಿರಾಮದ ವೇಳೆಗೆ 11-5ರ ಮುನ್ನಡೆ ಗಳಿಸಿದರು. ಆದರೆ, ವಿರಾಮದ ಬಳಿಕ ಇನ್ತಾನಾನ್ ಸತತ 5 ಪಾಯಿಂಟ್ ಕಲೆಹಾಕಿದರು ಅಂತಿಮವಾಗಿ 10-12ಕ್ಕೆ ಮೊದಲ ಸೆಟ್ ಮುಗಿಸಿದರು. ಎರಡನೇ ಸೆಟ್‌ನಲ್ಲಿ ಚುರುಕಾಗಿ ಆಡಿದ ಸೈನಾ ನೆಹ್ವಾಲ್ ಅವರನ್ನು ಭಾರತದ ಅಭಿಮಾನಿಗಳು ಹುರಿದುಂಬಿಸುತ್ತಿದ್ದರು. [ಆಸ್ಟ್ರೇಲಿಯನ್ ಓಪನ್ ಗೆದ್ದ ಸೈನಾ]
ಶ್ರೀಕಾಂತ್ ಚಾಂಪಿಯನ್ : ಪುರುಷರ ವಿಭಾಗದ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ ಸನ್ ಅವರನ್ನು 21-15, 12-21, 21-14 ಸೆಟ್‌ನಿಂದ ಸೋಲಿಸಿದ ಶ್ರೀಕಾಂತ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಮೊದಲ ಸೆಟ್‌ಅನ್ನು 21-15 ರಿಂದ ಗೆದ್ದ ಶ್ರೀಕಾಂತ್ 1-0 ಮುನ್ನಡೆ ಸಾಧಿಸಿದರು. 2ನೇ ಸೆಟ್ ಗೆದ್ದ ವಿಕ್ಟರ್ ಸಮಬಲ ಸಾಧಿಸಿದರು. ಅಂತಿಮ ಸೆಟ್ಅನ್ನು ಶ್ರೀಕಾಂತ್ 21-14 ರಿಂದ ಗೆದ್ದು ಇತಿಹಾಸ ಬರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications