ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೈನಾಗೆ 3ನೇ ಪ್ರಶಸ್ತಿ ಕಿರೀಟ, ಶ್ರೀಕಾಂತ್ ಗೂ ಮುಕುಟ

ಬೆಂಗಳೂರು, ನ. 16 : ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಭಾರತದ ಉದಯೋನ್ಮುಖ ಆಟಗಾರ ಕೆ. ಶ್ರೀಕಾಂತ್ ಸಹ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಟ್ಟಿರುವ ಸೈನಾ ಫೈನಲ್ ನಲ್ಲಿ ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ವಿಜಯದ ನಗೆ ಬೀರಿದರು. 21-12, 22-20 ನೇರ ಸೆಟ್ ಗಳಿಂದ ಯಮಗುಚಿಗೆ ಸೋಲುಣಿಸಿದ ಸೈನಾ ಈ ವರ್ಷದ ಪ್ರತಿಷ್ಠಿತ ಮೂರನೇ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಲ್ಲದೇ ಚೀನಾ ಓಪನ್ ಸೂಪರ್ ಸಿರೀಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.[ಆಸ್ಟ್ರೇಲಿಯನ್ ಓಪನ್ ಗೆದ್ದ 'ಸೂಪರ್' ಸೈನಾ]

ಒಟ್ಟು 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ಆಕಾನೆ ಯಮಗುಚಿಗೆ ನೇರ ಸೆಟ್ ಗಳ ಸೋಲುಣಿಸಿದರು. ಮೊದಲ ಸೆಟ್ ಆರಂಭದಲ್ಲಿ ಆಕಾನೆ ಯಮಗುಚಿ ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದರು. ಅಲ್ಲದೇ 7-4ರ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ನಂತರ ತಮ್ಮ ಎಂದಿನ ಆಟದ ಲಯಕ್ಕೆ ಮರಳಿದ ಸೈನಾ ಎದುರಾಳಿಗೆ ಯಾವ ಹಂತದಲ್ಲೂ ಗೆಲುವಿನ ಸಮೀಪ ಸುಳಿಯಲು ಬಿಡಲಿಲ್ಲ.

ಆಟದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಹೈದ್ರಾಬಾದ್ ಆಟಗಾರ್ತಿ, ಸ್ಮಾಶ್ ಮತ್ತು ಸ್ಟ್ರೋಕ್ ಗಳ ಮೂಲಕ ಮೌಲ್ಯಯುತ ಅಂಕ ಕಲೆಹಾಕಿದರು. ಎದುರಾಳಿಯ ತಪ್ಪುಗಳನ್ನು ತನ್ನ ಲಾಭಕ್ಕೆ ಬಳಸಿಕೊಂಡ ಸೈನಾ ಚಾಂಪಿಯನ್ ಪಟ್ಟ ಅಲಂಕರಿಸಿದರು.[ಅಮೆರಿಕದಲ್ಲಿ ದಕ್ಷಿಣ ಕನ್ನಡದ ಸೋದರಿಯರ ಸಾಧನೆ]

srikanth

ಶ್ರೀಕಾಂತ ಸಾಮ್ರಾಟ
ಎರಡು ಬಾರಿ ಒಲಿಂಪಿಕ್ ಮತ್ತು ಐದು ಬಾರಿ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಚೀನಾದ ಲಿನ್ ಡಾನ್ ವಿರುದ್ಧ ಪುರುಷರ ಫೈನಲ್ ನಲ್ಲಿ ಜಯಗಳಿಸಿದ ಶ್ರೀಕಾಂತ್ ಭಾರತದ ಗೌರವ ಹೆಚ್ಚಿಸಿದ್ದಾರೆ. 46 ನಿಮಿಷ ಕಾಲ ನಡೆದ ಅಂತಿಮ ಹಣಾಹಣಿಯಲ್ಲಿ ಶ್ರೀಕಾಂತ್ 21-19, 21-17 ನೇರ ಸೆಟ್ ಗಳಿಂದ ವಿಜಯ ಸಾಧಿಸಿದರು. ಈ ಮೂಲಕ ಇದೇ ಪ್ರಥಮ ಬಾರಿಗೆ ಭಾರತದ ಪುರುಷ ಷಟರ್ ಒಬ್ಬರು ಸೂಪರ್ ಸಿರೀಸ್ ಗೆದ್ದ ಶ್ರೇಯಕ್ಕೆ ಪಾತ್ರರಾದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X