ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಮೇರಿ ಕೋಮ್ ಅಭ್ಯಾಸ ಶುರು: ಚಿನ್ನದ ಪದಕದ ಮೇಲೆ ಬಾಕ್ಸರ್‌ನ ಗುರಿ

ಭಾರತದ ಲೆಜೆಂಡರಿ ಮಹಿಳಾ ಬಾಕ್ಸರ್ ಮೇರಿ ಕೋಮ್ ಮತ್ತೆ ತನ್ನ ಅಭ್ಯಾಸ ಶುರು ಮಾಡಿದ್ದು, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕದ ಮೇಲೆ ಗುರಿ ನೆಟ್ಟಿದ್ದಾರೆ.
ಇದೇ ವರ್ಷ ಜುಲೈನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ್ದು, ಆರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರ ಸಂಪೂರ್ಣ ಗಮನ ಈಗ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಮೇಲಿದೆ.
ಇಂಗ್ಲೆಂಡ್‌ನ ಪ್ರಮುಖ ನಗರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಈ ಟೂರ್ನಮೆಂಟ್, ಜುಲೈ 28ರಿಂದ ಆಗಸ್ಟ್ 8ರವರೆಗೂ ನಡೆಯಲಿದೆ. ಭಾರತದ ಹಲವು ಅಥ್ಲಿಟ್‌ಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.
ಸಾಮಾಜಿಕ ಮಾಧ್ಯಮ ಕೂ ನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು, ಮಾಡು ಇಲ್ಲವೇ ಮಡಿ... ಪ್ರಯತ್ನ ಅಥವಾ ಯಾವುದೇ ಶಾರ್ಟ್‌ಕಟ್ ಇಲ್ಲಿಲ್ಲ.. ಕೇವಲ ಕಠಿಣ ಪರಿಶ್ರಮ ಎಂದು ಬರೆದುಕೊಂಡಿದ್ದಾರೆ.
ಪ್ರತಿದಿನ ತಪ್ಪದೇ ಜಿಮ್‌ಗೆ ತೆರಳುವ ಮೇರಿ ಕೋಮ್ ತನ್ನ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ತೂಕದ ವ್ಯಾಯಾಮಗಳಾದ ಪುಷ್-ಅಪ್‌ಗಳು ಮತ್ತು ಸಿಟ್-ಅಪ್‌ಗಳು ಮತ್ತು ಭಾರ ಎತ್ತುವಿಕೆಯೊಂದಿಗೆ ತನ್ನ ಸ್ನಾಯುಗಳನ್ನು ದೃಢವಾಗಿಡಲು ಹೆಚ್ಚಿನ ಸಮಯವನ್ನು ಬಳಸುತ್ತಿದ್ದಾರೆ. ಈ ತರಬೇತಿಯ ನಂತರ, ಅವರು ತನ್ನ ಬಾಕ್ಸಿಂಗ್ ಅಭ್ಯಾಸಕ್ಕೆ ಮರಳುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications