ಮಹಿಳಾ ವಿಶ್ವ ಬಾಕ್ಸಿಂಗ್: ಫೈನಲ್ ಹಂತಕ್ಕೇರಿದ ಭಾರತದ ನಿಖತ್ ಜರೀನ್

ಟರ್ಕಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯರು ಹೆಮ್ಮೆ ಪಡುವಂತಾ ಸುದ್ದಿ ಬಂದಿದೆ. ಭಾರತದ ಬಾಕ್ಸರ್ ನಿಖತ್ ಜರೀನ್ ಈ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ ನಿಖತ್ ಜರೀನ್ ಚಿನ್ನದ ಪದಕಕ್ಕಾಗಿ ನಡೆಯುವ ಹೋರಾಟಕ್ಕೆ ಅರ್ಹತೆ ಸಂಪಾದಿಸಿದ್ದಾರೆ. 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಜರೀನ್ ಬ್ರೆಜಿಲ್‌ನ ಡಿ ಅಲ್ಮೇಡಾ ಕ್ಯಾರೊಲಿನ್ ವಿರುದ್ಧ ನಡೆದ ಸೆಮಿಫೈನಲ್ ಹೋರಾಟದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮನೀಶಾ ಮೌನ್ ಮತ್ತು ಪರ್ವೀನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಬುಧವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದ ಬಳಿಕ ನಿಖತ್ ಜರೀನ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದ್ದಾರೆ. ಚಿನ್ನದ ಪದಕ್ಕಾಗಿ ಅವರು ಇನ್ನು ಕೇವಲ ಒಂದು ಗೆಲುವನ್ನಷ್ಟೇ ದಾಖಲಿಸಬೇಕಿದೆ.

ಈ ಗೆಲುವಿನೊಂದಿಗೆ ನಿಖತ್ ಜರೀನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ವಿಶ್ವ ಬಾಕ್ಸಿಂಗ್ ಸ್ಪರ್ಧೆಯ ಫೈಣಲ್ ಸೆಣೆಸಾಟದಲ್ಲಿ ಅವರು ಥಾಯ್ಲೆಂಡ್‌ನ ಜುಟಮಾಸ್ ಜಿಟ್‌ಪಾಂಗ್ ಅವರನ್ನು ಎದುರಿಸಲಿದ್ದಾರೆ.
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ಜರೀನ್ 52 ಕೆಜಿ ಸ್ಪರ್ಧೆಯ ಕೊನೆಯ-ನಾಲ್ಕು ಬೌಟ್‌ಗಳಲ್ಲಿ 5-0 ಅಂತರದಿಂದ ಎದುರಾಳಿಯನ್ನು ಕೆಡವುವಲ್ಲಿ ಯಶಸ್ವಿಯಾದರು. ಆರು ಬಾರಿಯ ಚಾಂಪಿಯನ್ ಎಂಸಿ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಸಿ ಅವರು ವಿಶ್ವ ಮಟ್ಟದಲ್ಲಿ ಬಾಕ್ಸಿಂಗ್ ಪ್ರಶಸ್ತಿಗಳನ್ನು ಗೆದ್ದ ಭಾರತೀಯ ಮಹಿಳಾ ಬಾಕ್ಸರ್‌ಗಳಾಗಿದ್ದು ಇದೀಗ ಹೈದರಾಬಾದ್ ಮೂಲದ ಜರೀನ್ ಕೂಡ ಈ ಶ್ರೇಷ್ಠ ಬಾಕ್ಸರ್‌ಗಳನ್ನು ಹೊಂದಿರುವ ವಿಶೇಷ ಸಾಧಕರ ಪಟ್ಟಿಗೆ ಸೇರುವ ಅವಕಾಶವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications