ಜಿಂಬಾಬ್ವೆ vs ಇಂಡಿಯಾ ಮ್ಯಾಚ್ 10 ಅಂಕಿ ಅಂಶ
ಆಕ್ಲೆಂಡ್, ಮಾ.12: ವಿಶ್ವಕಪ್ 2015 ಟೂರ್ನಿಯಲ್ಲಿ ಟೀಂ ಇಂಡಿಯಾ ಆಡುತ್ತಿರುವ ರೀತಿ ಗಮನಿಸಿದರೆ ಲೀಗ್ ಹಂತದ ಕೊನೆಯಲ್ಲಿ ಜಿಂಬಾಬ್ವೆ ವಿರುದ್ಧ ಸುಲಭ ಜಯ ದಾಖಲಿಸುವ ನಿರೀಕ್ಷೆಯಿದೆ. ಶನಿವಾರ(ಮಾ.14, 6.30AM IST) ನಡೆಯಲಿರುವ ಪಂದ್ಯಕ್ಕೂ ಮುನ್ನ ಇಲ್ಲಿ ತನಕ ಪರಸ್ಪರ ಕಾದಾಟದಲ್ಲಿ ಕಂಡು ಬಂದಿರುವ ಸ್ವಾರಸ್ಯಕರ ಅಂಶಗಳು ಇಲ್ಲಿವೆ.
11ನೇ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಧೂಳಿಪಟವಾಗುತ್ತಲೇ ಇದೆ. ಸತತ 5 ಪಂದ್ಯ ಗೆದ್ದಿರುವ ಎಂಎಸ್ ಧೋನಿ ಪಡೆ ಕ್ವಾರ್ಟರ್ ಫೈನಲ್ ನಲ್ಲಿ ಬಹುತೇಕ ಬಾಂಗ್ಲಾದೇಶವನ್ನು ಎದುರಿಸಲಿದೆ. ಕಪಿಲ್ ದೇವ್ ಅವರ 175ರನ್ ಇನ್ನಿಂಗ್ಸ್ ಮೀರಿಸುವ ಇನ್ನಿಂಗ್ಸ್ ಈ ಬಾರಿ ಕಂಡು ಬರುವುದೇ ಕಾದು ನೋಡೋಣ..[ಸಚಿನ್, ದ್ರಾವಿಡ್ ದಿಗ್ಗಜರ ಕ್ಲಬ್ ಸೇರಿದ ಎಂಎಸ್ ಧೋನಿ]

1. ಎರಡು ತಂಡಗಳು ಒಟ್ಟಾರೆ 8 ಬಾರಿ ಎದುರಾಗಿವೆ. ಭಾರತ 7 ಬಾರಿ ಗೆದ್ದು 1ಬಾರಿ ಸೋಲು ಅನುಭವಿಸಿದೆ. ಹಾಲಿ ಟೀಂ ಇಂಡಿಯಾದ ಸದಸ್ಯರು ಒಮ್ಮೆ ಕೂಡಾ ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಅನುಭವವಿಲ್ಲ. 2003ರಿಂದ ಎರಡು ತಂಡಗಳು ಪರಸ್ಪರ ಕಾದಾಡಿಲ್ಲ.
2. 1983ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಎದುರಾಗಿತ್ತು, 11 ಜೂನ್ ರಂದು ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು.
3. ಟೀಂ ಇಂಡಿಯಾದ ಹಾಲಿ ಕೋಚ್ ಡಂಕನ್ ಫ್ಲೆಚರ್ ಅವರು 1983ರಲ್ಲಿ ಭಾರತ ವಿರುದ್ಧ ಸೆಣಸಿದ ಜಿಂಬಾಬ್ವೆ ತಂಡದ ಸದಸ್ಯರಾಗಿದ್ದರು.
4. ಕಪಿಲ್ ದೇವ್ ಅವರ ವೀರಾವೇಶದ 175ರನ್ ಆಟ ವಿಶ್ವಕಪ್ ಇತಿಹಾಸದ ಪುಟದಲ್ಲಿ ಪ್ರಮುಖವಾಗಿ ಉಲ್ಲೇಖವಾಗುತ್ತದೆ. 1983ರಲ್ಲಿ ಕಪಿಲ್ ಬಾರಿಸಿದ ಸ್ಕೋರ್ ಇಲ್ಲಿ ತನಕ ಜಿಂಬಾಬ್ವೆ ವಿರುದ್ಧ ಬಂದಿರುವ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.1996ರಲ್ಲಿ ಸೆಂಚೂರಿಯನ್ ನಲ್ಲಿ ವಿನೋದ್ ಕಾಂಬ್ಳಿ ಶತಕ ಬಾರಿಸಿದ್ದರು. [ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದವರ ಪಟ್ಟಿ]
5. ಭಾರತ ವಿರುದ್ಧ ಜಿಂಬಾಬ್ವೆ ಆಟಗಾರ ಶತಕ ಬಾರಿಸಿಲ್ಲ. ಜಿಂಬಾಬ್ವೆ ಅರ ಕೆವಿನ್ ಕುರನ್ 73ರನ್ ಗಳಿಸಿದ್ದೆ ಸಾಧನೆ.6. ಮದನ್ ಲಾಲ್ ಹಾಗೂ ಜಾವಗಲ್ ಶ್ರೀನಾಥ್ ತಲಾ 6 ವಿಕೆಟ್ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ಪರ ಪೀಟರ್ ರಾಸನ್ 7 ವಿಕೆಟ್ ಪಡೆದು ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದಾರೆ.

7. ಕಪಿಲ್ ದೇವ್ 4 ಇನ್ನಿಂಗ್ಸ್ ನಿಂದ 228 ರನ್ ಗಳಿಸಿ ಲೀಡಿಂಗ್ ಸ್ಕೋರರ್ ಆಗಿದ್ದರೆ, ಜಿಂಬಾಬ್ವೆ ಆಂಡಿ ಫ್ಲವರ್ 4 ಇನ್ನಿಂಗ್ಸ್ ನಲ್ಲಿ 161 ರನ್ ಗಳಿಸಿದ್ದಾರೆ.
8. ಉಭಯ ತಂಡಗಳಿಂದ 5 ಪಂದ್ಯವಾಡಿದ ಆಟಗಾರರು- ಮಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ಕ್ರಿಸ್ ಶ್ರೀಕಾಂತ್, ಬುಶ್ಚಾರ್ಟ್, ಡೇವ್ ಹಟನ್, ಆಂಡಿ ಪೈ ಕ್ರಾಫ್ಟ್ , ಜಾನ್ ಟ್ರಾಕೊಸ್. [ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]
9. ಉಭಯ ತಂಡಗಳು 300 ರನ್ ಗಡಿ ದಾಟಿಲ್ಲ. ಟೀಂ ಇಂಡಿಯಾ ಟಾಪ್ ಸ್ಕೋರ್ 266/8, 1983. ಜಿಂಬಾಬ್ವೆ 252/9, 1999.
10. ಒಟ್ಟಾರೆ ಉಭಯ ತಂಡಗಳು 57 ಬಾರಿ ಸಂಧಿಸಿದ್ದು, ಟೀಂ ಇಂಡಿಯಾ 44 ಬಾರಿ ಗೆಲುವು ಸಾಧಿಸಿದ್ದರೆ 10 ಬಾರಿ ಸೋಲು ಕಂಡಿದೆ. 2 ಪಂದ್ಯಗಳು ಟೈ ಆಗಿದ್ದು ಒಂದು ಪಂದ್ಯ ಫಲಿತಾಂಶ ಬಂದಿಲ್ಲ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications