ಭಾರತ ಹಾಗೂ ಬಾಂಗ್ಲಾದೇಶ ಕದನ ಕುತೂಹಲ
ಬೆಂಗಳೂರು, ಜೂ.09: ಸರಿ ಸುಮಾರು ಐದು ತಿಂಗಳ ನಂತರ ಟೀಂ ಇಂಡಿಯಾ ಐದು ದಿನಗಳ ಪಂದ್ಯಾವಳಿಗೆ ಸಜ್ಜಾಗಿದೆ. ಬುಧವಾರ(ಜೂ.10) ದಿಂದ ಬಾಂಗ್ಲಾದೇಶ ತಂಡವನ್ನು ಫಾತುಲ್ಲಾ ಮೈದಾನದಲ್ಲಿ ಎದುರಿಸಲಿದೆ. ಭಾರತ-ಬಾಂಗ್ಲಾ ಕದನ ಕುತೂಹಲ ಅಂಶಗಳು ಇಲ್ಲಿವೆ.
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಜ.6 ರಿಂದ 10ರ ತನಕ ಟೆಸ್ಟ್ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ನಂತರ ಐಸಿಸಿ ವಿಶ್ವಕಪ್ 2015ರಲ್ಲಿ ಸೆಮಿಫೈನಲ್ ತನಕ ತಲುಪಿತ್ತು. ಟೀಂ ಇಂಡಿಯಾ ಆಟಗಾರರು ನಂತರ ಟಿ20 ಮೂಡ್ ಗೆ ಬದಲಾಗಿ ಐಪಿಎಲ್ 8ರಲ್ಲಿ ಬ್ಯಾಟ್ ಬೀಸಿದ್ದರು. ಮೇ.24ರಂದು ಐಪಿಎಲ್ 2015 ಟೂರ್ನಿ ಮುಕ್ತಾಯವಾಯಿತು. [ಬಾಂಗ್ಲಾ ಪ್ರವಾಸ ವೇಳಾಪಟ್ಟಿ]
ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಆಡಲಿದ್ದು, ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಎಂಎಸ್ ಧೋನಿ ನಿವೃತ್ತಿ ನಂತರ ಮೊದಲ ಬಾರಿಗೆ ಕೊಹ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. [ಭಾರತ ತಂಡ ಪ್ರಕಟ]

ಭಾರತ ಹಾಗೂ ಬಾಂಗ್ಲಾ ಟೆಸ್ಟ್ ಕದನ ಕುತೂಹಲ 10 ಅಂಶ
1. ಬಾಂಗ್ಲಾ ಹಾಗೂ ಭಾರತ 2000ರಿಂದ ಇಲ್ಲಿ ತನಕ 7 ಟೆಸ್ಟ್ ಪಂದ್ಯವನ್ನಾಡಿವೆ. ಫಾತುಲ್ಲಾದ ಖಾನ್ ಶಾಹೇಬ್ ಒಸ್ಮಾನ್ ಅಲಿ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿದೆ. 2006ರಲ್ಲಿ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಈ ಪಂದ್ಯವನ್ನು 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. [ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ]
2. ಬಾಂಗ್ಲಾದೇಶ ವಿರುದ್ಧ ಭಾರತ ಇದುವರೆವಿಗೂ ಟೆಸ್ಟ್ ಪಂದ್ಯ ಸೋತಿಲ್ಲ. ಭಾರತ 6 ಟೆಸ್ಟ್ ಪಂದ್ಯ ಗೆದ್ದಿದ್ದು, 1 ಪಂದ್ಯ ಡ್ರಾ ಆಗಿದೆ. ಬಾಂಗ್ಲಾದೇಶದಲ್ಲಿ ನಡೆದ ಎಲ್ಲಾ ನಾಲ್ಕು ಸರಣಿಯನ್ನು ಭಾರತ ಗೆದ್ದುಕೊಂಡಿದೆ. ವಿಶೇಷವೆಂದರೆ, ಭಾರತದ ನೆಲದಲ್ಲಿ ಬಾಂಗ್ಲಾದೇಶ ಇನ್ನೂ ಟೆಸ್ಟ್ ಪಂದ್ಯವಾಡಿಲ್ಲ. [ಬಾಂಗ್ಲಾದೇಶ ಪ್ರವಾಸದಿಂದ ಕೆಎಲ್ ರಾಹುಲ್ ಔಟ್]
3. 33 ಟೆಸ್ಟ್ ಪಂದ್ಯಗಳ ನಂತರ ವಿರಾಟ್ ಕೊಹ್ಲಿ ಅವರು ಇದೇ ಮೊದಲ ಬಾರಿಗೆ ಟೆಸ್ಟ್ ನಾಯಕರಾಗಿ ಆಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಇದು ಅವರ ಮೊದಲ ಟೆಸ್ಟ್ ಪಂದ್ಯವಾಗಲಿದೆ.
4. ಹಾಲಿ ತಂಡದಲ್ಲಿರುವ ಮುರಳಿ ವಿಜಯ್, ಹರ್ಭಜನ್ ಸಿಂಗ್ ಹಾಗೂ ಇಶಾಂತ್ ಶರ್ಮ ಮಾತ್ರ ಬಾಂಗ್ಲಾದೇಶ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ.
5. ಟೀಂ ಇಂಡಿಯಾದ ಸದ್ಯಕ್ಕೆ 101 ಟೆಸ್ಟ್ ಪಂದ್ಯವಾಡಿರುವ ಹರ್ಭಜನ್ ಸಿಂಗ್ ಅವರು ಅತ್ಯಂತ ಅನುಭವಿ ಆಟಗಾರರಾಗಿದ್ದಾರೆ. 2013ರ ನಂತರ ತಂಡಕ್ಕೆ ಮರಳಿದ್ದಾರೆ.

6. ಮಾಜಿ ನಾಯಕ ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ನಿರ್ದೇಶಕ ಹಾಗೂ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
7. ಟೆಸ್ಟ್ ತಂಡ ಎಂದು ಮಾನ್ಯತೆ ಪಡೆದ ನಂತರ ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು 2000ರಲ್ಲಿ ಭಾರತ ವಿರುದ್ಧ ಢಾಕಾದಲ್ಲಿ ಆಡಿತ್ತು. ಟೀಂ ಇಂಡಿಯಾ ಈ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
8. ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಸ್ಕೋರ್ ಹಾಗೂ ಶತಕ ಗಳಿಸಿದ ಆಟಗಾರ ಎನಿಸಿದ್ದಾರೆ. 9 ಇನ್ನಿಂಗ್ಸ್ ನಲ್ಲಿ 5 ಶತಕ ಬಾರಿಸಿದ್ದಾರೆ. 248 ರನ್ ನಾಟೌಟ್ ಅವರ ಅತಿ ಹೆಚ್ಚಿನ ಸ್ಕೋರ್. ಒಟ್ಟಾರೆ 820 ರನ್ ಕಲೆ ಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದು 10 ಇನ್ನಿಂಗ್ಸ್ ನಲ್ಲಿ 3 ಶತಕಗಳೊಂದಿಗೆ 560ರನ್ ಗಳಿಸಿದ್ದಾರೆ.
9. 14 ಇನ್ನಿಂಗ್ಸ್ ಗಳಲ್ಲಿ 31 ವಿಕೆಟ್ ಕಿತ್ತ ಜಹೀರ್ ಖಾನ್ ಶ್ರೇಷ್ಠ ಬೌಲರ್ ಎನಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಇರ್ಫಾನ್ ಪಠಾಣ್ 4 ಇನ್ನಿಂಗ್ಸ್ ನಲ್ಲಿ 18 ವಿಕೆಟ್ ಪಡೆದಿದ್ದಾರೆ.
10. ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 9ನೇ ಸ್ಥಾನದಲ್ಲಿದೆ.
ಈ ಮುಂಚಿನ ಪಂದ್ಯಗಳು, ಫಲಿತಾಂಶ
* 2000- ಭಾರತಕ್ಕೆ 1-0 ಸರಣಿ []
* 2004- ಭಾರತಕ್ಕೆ 2-0 ಸರಣಿ []
* 2007- ಭಾರತಕ್ಕೆ 1-0 ಸರಣಿ []
* 2010- ಭಾರತಕ್ಕೆ 2-0 ಸರಣಿ []
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications