IPL ಹರಾಜಿನಲ್ಲಿ 11.5 ಕೋಟಿ ಪಡೆದ ಲಿವಿಂಗ್‌ಸ್ಟೋನ್ ಶೂನ್ಯಕ್ಕೆ ಔಟ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ವಿದೇಶಿ ಆಟಗಾರರಲ್ಲಿ ಒಬ್ಬನಾದ ಇಂಗ್ಲೆಂಡ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರನ್ನು 11.5 ಕೋಟಿ ರೂ.ಗೆ ಈ ಸ್ಫೋಟಕ ಆಲ್‌ರೌಂಡರ್‌ನನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆದ್ರೀಗ ಈ ಭಾರೀ ಮೊತ್ತಕ್ಕೆ ಹರಾಜಾಗಿ ಮೂರು ದಿನ ಸಹ ಕಳೆದಿಲ್ಲ. ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಸತತವಾಗಿ ಲಿವಿಂಗ್ ಸ್ಟೋನ್ಆ ಪ್ಲಾಪ್ ಆಗುತ್ತಿದ್ದಾರೆ. ಅವರು ಪೇಶಾವರ್ ಝಲ್ಮಿ ಪರ ಆಡಿದ ಲಿವಿಂಗ್ ಸ್ಟೋನ್ ಡಕೌಟ್ ಆದರು. ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ ಮೂರು ಎಸೆತಗಳನ್ನು ಎದುರಿಸಿದ್ರು, ಆದ್ರೆ ಖಾತೆ ತೆರೆಯುವ ಮುನ್ನವೇ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಲಿವಿಂಗ್ ಸ್ಟನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಪೇಶಾವರ್ ಝಲ್ಮಿಗಾಗಿ ಋತುವಿನ ತನ್ನ ಮೊದಲ ಪಂದ್ಯದಲ್ಲಿ 16 ಎಸೆತಗಳಲ್ಲಿ 24 ರನ್‌ಗಳಿಸಿದ ನಂತರ, ಲಿವಿಂಗ್‌ಸ್ಟೋನ್ 6 ಮತ್ತು 0 ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಅದ್ರಲ್ಲೂ ಮೆಗಾ ಐಪಿಎಲ್ ಒಪ್ಪಂದವನ್ನು ಪಡೆದ ನಂತರ ಅವರ ಡಕ್ ಔಟ್ ಆಗಿದ್ದಾರೆ.
ನಸೀಮ್ ಶಾ ಅವರ ಬೌಲಿಂಗ್‌ನಲ್ಲಿ ಲಿವಿಂಗ್‌ಸ್ಟನ್ ಅವರ ಆಫ್ ಸ್ಟಂಪ್ ಬ್ಯಾಟ್ ಕೆಳಗಿಳಿಯುವ ಮುನ್ನವೇ ಎಸೆಯಲ್ಪಟ್ಟಿತು. ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ಫ್ಲಾಪ್ ಆದರು. ಕರಾಚಿ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಲಿವಿಂಗ್‌ಸ್ಟನ್ ಕೇವಲ ಆರು ರನ್ ಗಳಿಸಿದ್ದರು.
ಲಿಯಾಮ್ ಲಿವಿಂಗ್‌ಸ್ಟನ್ ಪಿಎಸ್‌ಎಲ್‌ನಲ್ಲಿ ಉತ್ತಮ ಆರಂಭವನ್ನು ಹೊಂದಿದ್ದರು. ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರು 16 ಎಸೆತಗಳಲ್ಲಿ 24 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಸ್ಟ್ರೈಕ್ ರೇಟ್ 150ಕ್ಕಿಂತ ಹೆಚ್ಚಿತ್ತು.
ಈ ವರ್ಷದ ಐಪಿಎಲ್‌ನ ಮೆಗಾ ಹರಾಜಿನಲ್ಲಿ ಲಿಯಾಮ್ ಲಿವಿಂಗ್‌ಸ್ಟನ್ ನಾಲ್ಕನೇ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಇಶಾಂತ್ ಕಿಶನ್ ಅವರನ್ನು ಮರಳಿ ಪಡೆಯಲು ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇದುವರೆಗಿನ ಅತಿ ಹೆಚ್ಚು ಬಿಡ್ ಆಗಿದೆ. ಭಾರತದ ವೇಗಿ ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ಖರೀದಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 12.25 ಕೋಟಿ ರೂ.ಗೆ ಶ್ರೇಯಸ್ ಅಯ್ಯರ್‌ನನ್ನ ಖರೀದಿಸುವ ಮೂಲಕ ಈ ಬಾರಿಯ ಮೂರನೇ ದುಬಾರಿ ಆಟಗಾರನಾಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಆಟಗಾರರಲ್ಲಿ ಒಬ್ಬರಾದ ಲಿವಿಂಗ್‌ಸ್ಟೋನ್ ಪಡೆಯಲು ಅನೇಕ ಫ್ರಾಂಚೈಸಿಗಳು ಪ್ರಯತ್ನ ನಡೆಸಿದ್ದವು. ಪಂಜಾಬ್ ಹೊರತಾಗಿ ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಭಾಗವಹಿಸಿದ್ದವು. ಪಂಜಾಬ್ ಎಲ್ಲರನ್ನೂ ಹಿಂದಿಕ್ಕಿತು ಲಿವಿಂಗ್‌ಸ್ಟೋನ್‌ರನ್ನ ಪಡೆಯುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications