ಭಾರತ 'ಎ' ತಂಡಕ್ಕೆ 'ಗುರು' ಬಲ ನೆಲಕಚ್ಚಿದ ಬಾಂಗ್ಲಾ
ಬೆಂಗಳೂರು, ಸೆ.16: ಗುರ್ ಕೀರತ್ ಸಿಂಗ್ ಮನ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ 'ಎ' ತಂಡದ ವಿರುದ್ಧದ ಪ್ರಥಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ 'ಎ' ತಂಡ ಸುಲಭ ಜಯ ದಾಖಲಿಸಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ 'ಎ' ತಂಡ 96ರನ್ ಗಳ ಜಯ ಗಳಿಸಿದೆ.
ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಪಡೆದುಕೊಂಡ ಭಾರತ 'ಎ' ತಂಡ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 322/7 ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ 'ಎ ' ತಂಡ 42.3 ಓವರ್ ಗಳಲ್ಲಿ 226ರನ್ ಗಳಿಗೆ ಆಲೌಟ್ ಆಗಿ ಸೊಲೊಪ್ಪಿಕೊಂಡಿತು. [ದ್ರಾವಿಡ್ ಕೋಚಿಂಗ್ ನಲ್ಲಿ ಧೋನಿ ಸದ್ಯಕ್ಕೆ ಆಡುತ್ತಿಲ್ಲ!]

ಗುರ್ ಕೀರತ್ ಬ್ಯಾಟಿಂಗ್ ನಲ್ಲಿ ಮಿಂಚಿ ಅರ್ಧಶತಕ ಬಾರಿಸಿದ್ದಲ್ಲದೆ ಬೌಲಿಂಗ್ ನಲ್ಲಿ 7.3 ಓವರ್ ಗಳಲ್ಲಿ 5/29 ಗಳಿಸಿ ಭಾರತ 'ಎ' ಗೆಲುವಿಗೆ ಕಾರಣರಾದರು, ಇದು ಗುರ್ ಕೀರತ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ಈ ಪಂದ್ಯದಲ್ಲಿ ಗುರ್ ಕೀರತ್ ಅಲ್ಲದೆ ಕರ್ನಾಟಕದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಅವರು ಮಾರಕ ಬೌಲಿಂಗ್ ಮಾಡಿ ಬಾಂಗ್ಲಾದೇಶ 'ಎ' ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಇದರಿಂದಾಗಿ 5.4 ಓವರ್ ಗಳಲ್ಲಿ 34/3 ಸ್ಕೋರ್ ಮಾಡಿದ್ದ ಬಾಂಗ್ಲಾ ನಂತರ 16.3 ಓವರ್ ಗಳಲ್ಲಿ 87/5 ಗಳಿಸಿ ದುಃಸ್ಥಿತಿ ತಲುಪಿತ್ತು. [ಅಂತೂ ಇಂತೂ ಗುರುಬಲ ಬಂತು]
ಲಿಟ್ಟನ್ ದಾಸ್ 75ರನ್ (75ಎಸೆತ, 8x4, 2x6) ಹಾಗೂ ನಾಸಿರ್ ಹುಸೇನ್ 52 ರನ್ (71 ಎ, 2x4,2x6) 6ನೇ ವಿಕೆಟ್ ಗೆ 120 ರನ್ ಜೊತೆಯಾಟ ಪ್ರದರ್ಶಿಸಿದ್ದು ಫಲ ನೀಡಲಿಲ್ಲ. 25 ವರ್ಷ ವಯಸ್ಸಿನ ಪಂಜಾಬಿನ ಗುರ್ ಕೀರತ್ ಅವರು ಲಿಟ್ಟನ್ ಹಾಗೂ ನಾಸೀರ್ ವಿಕೆಟ್ ಜೊತೆಗೆ ಕೆಳ ಕ್ರಮಾಂಕದ ಆಟಗಾರರ ವಿಕೆಟ್ ಕಿತ್ತು ಬಾಂಗ್ಲಾ ಸೋಲಿನ ಕಹಿ ಉಣ್ಣುವಂತೆ ಮಾಡಿದರು.

ಭಾರತ ಎ ಪರ ಗುರ್ ಕೀರತ್ 65ರನ್ ಹಾಗೂ ಸಂಜು ಸಾಮ್ಸನ್ 73ರನ್ ಅಲ್ಲದೆ, ಕರ್ನಾಟಕದ ಮಾಯಾಂಕ್ ಅಗರವಾಲ್ 56, ರಿಷಿ ಧವನ್ ಅಜೇಯ 56 ರನ್ ಗಳಿಸಿ ಉಪಯುಕ್ತ ಆಟವಾಡಿದರು. ಸ್ಟಾರ್ ಆಟಗಾರ ಸುರೇಶ್ ರೈನಾ ಅವರು 16ರನ್ ಗಳಿಸಿ ವಿಫಲರಾದರು. ಎರಡನೇ ಏಕದಿನ ಪಂದ್ಯ ಕೆಎಸ್ ಸಿಎ ಮೈದಾನದಲ್ಲಿ ಸೆಪ್ಟೆಂಬರ್ 18 (ಶುಕ್ರವಾರ) ನಡೆಯಲಿದೆ.
ಭಾರತ ಎ 50 ಓವರ್ ಗಳಲ್ಲಿ 322/7
ಮಾಯಾಂಕ್ ಅಗರವಾಲ್ 56(70 ಎ, 8x40, ರಿಷಿ ಧವನ್ ಅಜೇಯ 56, ಗುರ್ ಕೀರತ್ 65ರನ್(58ಎ, 9x4) ಹಾಗೂ ಸಂಜು ಸಾಮ್ಸನ್ 73ರನ್ (76 ಎಸೆತ, 8x4), ನಾಸೀರ್ ಹುಸೇನ್ 2/51)
ಬಾಂಗ್ಲಾದೇಶ ಎ 42.3 ಓವರ್ ಗಳಲ್ಲಿ 226 ಆಲೌಟ್
ಲಿಟನ್ ದಾಸ್ 75, ನಾಸೀರ್ ಹುಸೇನ್ 52, ಗುರ್ ಕೀರತ್ 5/29, ಎಸ್ ಅರವಿಂದ್ 3/29, ಧವನ್ 2/51)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications