Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

1st ಟಿ20: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹರಾರೆ, ಜುಲೈ 17: ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅವರು ಜಿಂಬಾಬ್ವೆ ಪ್ರವಾಸದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದಿದ್ದಲ್ಲದೆ ನಾಯಕತ್ವದಲ್ಲಿ ಮೊದಲ ಟಿ 20 ಪಂದ್ಯವನ್ನು ಜಯಸಿದ್ದಾರೆ. ಭಾರತ ನೀಡಿದ್ದ 179 ರನ್ ಗಳ ಮೊತ್ತವನ್ನು ಬೆನ್ನಟ್ಟಿದ್ದ ಅತಿಥೇಯ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿ ಸೊಲೊಪ್ಪಿಕೊಂಡಿತು. ಮುಂದಿನ ಟಿ20 ಪಂದ್ಯ ಜುಲೈ 19ರಂದು ನಡೆಯಲಿದೆ.


ಜಿಂಬಾಬ್ವೆ ಇನ್ನಿಂಗ್ಸ್:
ಆರಂಭಿಕ ಆಟಗಾರರಾದ ಮಸಕಡ್ಜ 28 ರನ್ ಹಾಗೂ ಛಿಭಾಭಾ 23 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರೂ ಹರ್ಭಜನ್ ಸಿಂಗ್ ಸ್ಪಿನ್ ದಾಳಿಗೆ ಸಿಲುಕಿದ ಜಿಂಬಾಬ್ವೆ ಲಾಭ ಪಡೆಯುವಲ್ಲಿ ವಿಫಲವಾಯಿತು. [ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ]

ಕೊವೆಂಟ್ರಿ 10 ರನ್ ಗಳಿಸಿ ಔಟಾದರೆ, ನಾಯಕ ಚಿಗುಂಬುರಾ 1 ರನ್ ಮಾತ್ರ ಹೊಡೆದರು. ಹರ್ಭಜನ್ ಸಿಂಗ್ 2 ಹಾಗೂ ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಜಿಂಬಾಬ್ವೆ ಬ್ಯಾಟಿಂಗ್ ಬೆನ್ನಲುಬು ಮುರಿದರು. ಅಂತಿಮವಾಗಿ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 124/7 ರನ್ ಗಳಿಸಿತು. ಈ ಮೂಲಕ ಭಾರತ 54 ರನ್ ಗಳ ಅಂತರದ ಜಯ ಲಭಿಸಿತು.[ತಂಡಕ್ಕೆ ಆಯ್ಕೆಯಾದ ಸಂತಸದಲ್ಲಿ ಸಂಜು ಸಾಮ್ಸನ್]

Robin Uthappa

ಭಾರತದ ಇನ್ನಿಂಗ್ಸ್ : ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮನೀಶ್ ಪಾಂಡೆ ಸೇರಿ ಐವರು ಆಟಗಾರರು ಮೊದಲ ಟಿ 20 ಪಂದ್ಯವನ್ನಾಡುತ್ತಿರುವುದು ವಿಶೇಷವಾಗಿತ್ತು.

ಭಾರತದ ಪರ ನಾಯಕ ಅಜಿಂಕ್ಯ ರಹಾನೆ 33 ರನ್ (32 ಎಸೆತ, 2x4, ಮುರಳಿ ವಿಜಯ್ 34 ರನ್ (19 ಎಸೆತ, 5x4,1x6) ಉತ್ತಮ ಆರಂಭ ಒದಗಿಸಿದರು. [ಪಂದ್ಯಗಳನ್ನು ಅಂಗೈನಲ್ಲಿ ನೋಡಿ]

ರಾಬಿನ್ ಉತ್ತಪ್ಪ 35 ಎಸೆತಗಳಲ್ಲಿ 2 ಬೌಂಡರಿ ಇದ್ದ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಮನೀಶ್ ಪಾಂಡೆ 19, ಬಿನ್ನಿ 6 ಎಸೆತಗಳಲ್ಲಿ 11 ರನ್ ಗಳಿಸಿ ತಮ್ಮ ಕೊಡುಗೆ ನೀಡಿದರು. ಭಾರತ 20 ಓವರ್ ಗಳಲ್ಲಿ 178ರನ್ ಗಳಿಸಿತು. ಜಿಂಬಾಬ್ವೆ ಪರ ಮೊಫೊಫು 33 ರನ್ನಿತ್ತು 3 ವಿಕೆಟ್ ಕಿತ್ತರು.

India opt to bat first with 5 debutants

ಟಾಸ್ ವರದಿ: ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅವರು ಜಿಂಬಾಬ್ವೆ ಪ್ರವಾಸದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಏಕದಿನ ಕ್ರಿಕೆಟ್ ಸರಣಿ ಗೆದ್ದಿರುವ ಭಾರತ ಶುಕ್ರವಾರ (ಜುಲೈ 17) ದಂದು ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿಥೇಯ ಜಿಂಬಾಬ್ವೆಯನ್ನು ಎದುರಿಸಿತು. ಕರ್ನಾಟಕದ ಮನೀಶ್ ಪಾಂಡೆ, ವೇಗಿ ಸಂದೀಶ್ ಶರ್ಮ, ಕೇದಾರ್ ಜಾಧವ್, ಅಲ್ ರೌಂಡರ್ ಗಳಾದ ಸ್ಟುವರ್ಟ್ ಬಿನ್ನಿ ಹಾಗೂ ಅಕ್ಷರ್ ಪಟೇಲ್ ಅವರಿಗೆ ಇದು ಅವರ ವೃತ್ತಿ ಬದುಕಿನ ಮೊದಲ ಟಿ20 ಪಂದ್ಯವಾಗಿತ್ತು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+