ಲಂಕಾ ಮೇಲೆ ಹಿಡಿತ ಸಾಧಿಸಲು ನೆರವಾದ ಅಶ್ವಿನ್, ಧವನ್
ಗಾಲೆ(ಶ್ರೀಲಂಕಾ), ಆಗಸ್ಟ್ 12: ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಬುಧವಾರ ಆರಂಭಗೊಂಡಿದೆ. ಟಾಸ್ ಗೆದ್ದ ಏಂಜೆಲೋ ಮ್ಯಾಥ್ಯೂಸ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿ 183 ರನ್ ಗಳ ಅಲ್ಪಮೊತ್ತ ಆಲೌಟ್ ಆಗಿದೆ. ದಿನದ ಅಂತ್ಯಕ್ಕೆ ಭಾರತ 128//2 ಸ್ಕೋರ್ ಮಾಡಿದೆ.
ಭಾರತದ ಇನ್ನಿಂಗ್ಸ್: 183 ರನ್ ಗಳ ಮೊತ್ತಕ್ಕೆ ಶ್ರೀಲಂಕಾ ಆಲೌಟ್ ಆದ ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 128//2 ಸ್ಕೋರ್ ಮಾಡಿದೆ. ಶಿಖರ್ ಧವನ್ 53ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 45ರನ್ ಗಳಿಸಿದ್ದಾರೆ. ರೋಹಿತ್ ಶರ್ಮ 9 ರನ್ ಹಾಗೂ ಕೆಎಲ್ ರಾಹುಲ್ ಅವರು 7 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿದ್ದು ಫಲ ನೀಡಿದೆ. ಹರ್ಭಜನ್ ಸಿಂಗ್ ಒಬ್ಬರನ್ನು ಬಿಟ್ಟರೆ ಉಳಿದ ಎಲ್ಲಾ ಬೌಲರ್ ಗಳಿಗೂ ವಿಕೆಟ್ ಸಿಕ್ಕಿದೆ. ಆರ್ ಅಶ್ವಿನ್ 6 ವಿಕೆಟ್ (6-46) ಪಡೆದು ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಮೊದಲ ದಿನದ ಭೋಜನ ವಿರಾಮದ ವೇಳೆಗೆ 23 ಓವರ್ ಗಳಲ್ಲಿ ಶ್ರೀಲಂಕಾ ತಂಡ 65/5 ಸ್ಕೋರ್ ಮಾಡಿತ್ತು. ಭೋಜನ ವಿರಾಮದ ನಂತರ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಚಹಾ ವಿರಾಮದ ವೇಳೆಗೆ ಅಲ್ಪಮೊತ್ತಕ್ಕೆ ಕುಸಿಯಿತು.
ಲಂಕಾ ಇನ್ನಿಂಗ್ಸ್: ಇಶಾಂತ್ ಶರ್ಮ ಹಾಗೂ ವರುಣ್ ಅರೋನ್ ತಲಾ ಒಂದು ವಿಕೆಟ್ ಪಡೆದು ಆರಂಭಿಕ ಆಟಗಾರರನ್ನು ಪೆವಿಲಿಯನ್ ಗೆ ಕಳಿಸಿದ್ದಾರೆ. [ಬ್ರಾಡ್ಮನ್ ದಾಖಲೆ ಹಿಂದೆ ಬಿದ್ದ ಕುಮಾರ್ ಸಂಗಕ್ಕಾರ]

ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ ಕುಮಾರ್ ಸಂಗಕ್ಕಾರ 5 ರನ್ ಗಳಿಸಿ ಅಶ್ವಿನ್ ವಿಕೆಟ್ ಒಪ್ಪಿಸಿದ್ದಾರೆ. ಕೆಎಲ್ ರಾಹುಲ್ ಅವರು ಸಂಗಕ್ಕಾರ ಅವರಿತ್ತ ಕ್ಯಾಚ್ ಸುಲಭವಾಗಿ ತೆಗೆದುಕೊಂಡರು. [ಕೊಹ್ಲಿಗೆ ದ್ರಾವಿಡ್ ನೀಡಿದ ಸಲಹೆಯೇನು?]
ಶ್ರೀಲಂಕಾ ವಿರುದ್ಧ 1993ರಿಂದ ಇಲ್ಲಿ ತನಕ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2010ರಲ್ಲಿ ಲಂಕಾ ಪ್ರವಾಸ ಕೈಗೊಂಡಿದ್ದ ಎಂಎಸ್ ಧೋನಿ ಅವರ ತಂಡ ಸರಣಿಯನ್ನು 1-1 ರಲ್ಲಿ ಸಮನಾಗಿಸಿಕೊಂಡಿತ್ತು. [ಮೊದಲ ಟೆಸ್ಟ್ ಪಂದ್ಯಕ್ಕೆ ಮುರಳಿ ವಿಜಯ್ ಅಲಭ್ಯ]

ಟೀಂ ಇಂಡಿಯಾದ ಆಡುವ XIನಲ್ಲಿ ಚೇತೇಶ್ವರ್ ಪೂಜಾರಾ ಅವರಿಗೆ ಸ್ಥಾನ ಸಿಕ್ಕಿಲ್ಲ. ಗಾಯಗೊಂಡು ಮೊದಲ ಟೆಸ್ಟ್ ನಿಂದ ಹೊರಗುಳಿದಿರುವ ಮುರಳಿ ವಿಜಯ್ ಅನುಪಸ್ಥಿತಿಯಲ್ಲಿ ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಅವರು ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಉಳಿದಂತೆ ಹರ್ಭಜನ್ ಸಿಂಗ್, ಆರ್ ಅಶ್ವಿನ್ ಹಾಗೂ ಅಮಿತ್ ಮಿಶ್ರಾ ಮೂವರು ಸ್ಪಿನ್ ದಾಳಿ ನಡೆಸಲಿದ್ದಾರೆ.[ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]
ತಂಡಗಳು:
ಭಾರತ: ವಿರಾಟ್ ಕೊಹ್ಲಿ(ಭಾರತ), ಶಿಖರ್ ಧವನ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಹರ್ಭಜನ್ ಸಿಂಗ್, ಆರ್ ಅಶ್ವಿನ್, ಇಶಾಂತ್ ಶರ್ಮ, ಅಮಿತ್ ಮಿಶ್ರಾ, ವರುಣ್ ಅರೋನ್.
ಶ್ರೀಲಂಕಾ: ಏಂಜೆಲೋ ಮ್ಯಾಥ್ಯೂಸ್ (ನಾಯಕ), ಲಹಿರು ತಿರುಮನ್ನೆ (ಉಪ ನಾಯಕ), ಕೌಶಲ್ ಸಿಲ್ವಾ, ದಿಮುತ್ ಕರುನಾರತ್ನೆ, ಕುಮಾರ್ ಸಂಗಕ್ಕಾರ, ದಿನೇಶ್ ಚಂಡಿಮಾಲ್, ಜೆಹಾನ್ ಮುಬಾರಕ್, ರಂಗಣ ಹೇರಾತ್, ತಾರಿಂದು ಕೌಶಲ್, ನುವಾನ್ ಪ್ರದೀಪ್, ಧಮಿಕಾ ಪ್ರಸಾದ್. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications