For Quick Alerts
ALLOW NOTIFICATIONS  
For Daily Alerts
 

ಬ್ರಾಡ್ಮನ್ ದಾಖಲೆ ಹಿಂದೆ ಬಿದ್ದ ಕುಮಾರ್ ಸಂಗಕ್ಕಾರ

By Mahesh

ಬೆಂಗಳೂರು, ಆಗಸ್ಟ್ 04: ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಕುಮಾರ್ ಸಂಗಕ್ಕಾರ ಅವರು ತಮ್ಮ ವಿದಾಯದ ಸರಣಿಯಲ್ಲಿ ಹಲವು ದಾಖಲೆಗಳನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಭಾರತ ವಿರುದ್ಧ ಕೊಲೊಂಬೊದಲ್ಲಿ 2ನೇ ಟೆಸ್ಟ್ ಪಂದ್ಯವೇ ಇವರ ವೃತ್ತಿ ಬದುಕಿನ ಕೊನೆ ಪಂದ್ಯವಾಗಲಿದೆ.

37 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಕುಮಾರ್ ಸಂಗಕ್ಕಾರ ಅವರು ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯದ ನಂತರ ನಿವೃತ್ತಿ ಹೊಂದುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.[ಕೊಹ್ಲಿಗೆ ದ್ರಾವಿಡ್ ನೀಡಿದ ಸಲಹೆಯೇನು?]

ಸರಣಿಯ ಮೊದಲ ಟೆಸ್ಟ್ ಪಂದ್ಯ ಗಾಲೆಯಲ್ಲಿ ಆಗಸ್ಟ್ 12 ರಂದು ಆರಂಭವಾಗಲಿದೆ. ಸಂಗಕ್ಕಾರ ಅವರ ವಿದಾಯದ ಪಂದ್ಯ ಆಗಸ್ಟ್ 20ರಂದು ಕೊಲೊಂಬೋದಲ್ಲಿ ಶುರುವಾಗಲಿದೆ. ಕುಮಾರ್ ಸಂಗಕ್ಕಾರ ಅವರು ಈಗ ತಮ್ಮ ವೃತ್ತಿ ಬದುಕಿನ ಕೊನೆ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆ ಮುರಿಯುವ ಸನ್ನಾಹದಲ್ಲಿದ್ದಾರೆ.[ಶ್ರೀಲಂಕಾ ಸರಣಿಗೆ ಪತ್ನಿ ಜತೆ ತೆರಳುವಂತಿಲ್ಲ]

Can Sangakkara equal Bradman's record in India Test series?

5 ದಿನಗಳ ಪಂದ್ಯಗಳ ಮಾದರಿಯಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ದಾಖಲೆ ಬ್ರಾಡ್ಮನ್ ಹೆಸರಿನಲ್ಲಿದೆ. 52 ಟೆಸ್ಟ್ ಪಂದ್ಯಗಳಲ್ಲಿ ಬ್ರಾಡ್ಮನ್ 12 ಡಬ್ಬಲ್ ಸೆಂಚುರಿ ಬಾರಿಸಿದ್ದರು. ಸಂಗಕ್ಕಾರ ಸದ್ಯಕ್ಕೆ 11 ದ್ವಿಶತಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. [ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ]

2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಾಲೆಯಲ್ಲಿ ತಮ್ಮ ವೃತ್ತಿ ಬದುಕಿನ ಮೊದಲ ಟೆಸ್ಟ್ ಪಂದ್ಯವಾಡಿದ್ದ ಸಂಗಕ್ಕಾರ ಅವರು ಇಲ್ಲಿ ತನಕ 132 ಪಂದ್ಯಗಳಲ್ಲಿ ಲಂಕಾ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. 12,305 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಶತಕ ಗಳಿಕೆ ಪಟ್ಟಿಯಲ್ಲಿ 38 ಸೆಂಚುರಿಯೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. [ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]

ಟಾಪ್ 5 ದ್ವಿಶತಕ ಗಳಿಸಿದ ಬ್ಯಾಟ್ಸ್ ಮನ್:
* 12- ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ)
11- ಕುಮಾರ್ ಸಂಗಕ್ಕಾರ (ಶ್ರೀಲಂಕಾ)
9- ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
7- ವಾಲಿ ಹಮ್ಮಂಡ್ (ಇಂಗ್ಲೆಂಡ್), ಮಹೇಲ ಜಯವರ್ದನೆ (ಶ್ರೀಲಂಕಾ)
6- ಮಾರ್ವನ್ ಅಟಪಟ್ಟು (ಶ್ರೀಲಂಕಾ), ವಿರೇಂದ್ರ ಸೆಹ್ವಾಗ್ (ಭಾರತ), ಜಾವೇದ್ ಮಿಯಾಂದಾದ್ (ಪಾಕಿಸ್ತಾನ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಸಚಿನ್ ತೆಂಡೂಲ್ಕರ್ (ಭಾರತ)

ಅತಿ ಹೆಚ್ಚು ಶತಕ ಬಾರಿಸಿದವರು:

51- ಸಚಿನ್ ತೆಂಡೂಲ್ಕರ್ (ಭಾರತ)
45- ಜಾಕ್ವೆಸ್ ಕಾಲೀಸ್ (ದಕ್ಷಿಣ ಆಫ್ರಿಕಾ)
41-ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
38- ಕುಮಾರ್ ಸಂಗಕ್ಕಾರ (ಶ್ರೀಲಂಕಾ)
36 - ರಾಹುಲ್ ದ್ರಾವಿಡ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+