Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021 ಟಿ20 ವಿಶ್ವಕಪ್‌ ಭಾರತದ ಬದಲು ಯುಎಇಗೆ ಸ್ಥಳಾಂತರಗೊಳ್ಳಲಿ: ಪಿಸಿಬಿ

2021 T20 World Cup in India could be shifted to UAE: PCB

ಇಸ್ಲಮಾಬಾದ್: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಇಂಟರ್‌ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20ಐ ವಿಶ್ವಕಪ್ ಟೂರ್ನಿ ಭಾರತದ ಬದಲಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಳ್ಳಬೇಕು ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಭಾರತದಲ್ಲಿ ಅನಿಶ್ಚಿತತೆಯಿದೆ. ಹೀಗಾಗಿ 2021ರ ವಿಶ್ವಕಪ್‌ಗೆ ಆತಿಥ್ಯತೆ ವಹಿಸಲು ಭಾರತಕ್ಕೆ ಆಗುತ್ತದೆಯೋ ಇಲ್ಲವೋ. ಆದ್ದರಿಂದ ಪ್ರತಿಷ್ಠಿತ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸೋದು ಒಳ್ಳೇದು ಎಂದು ವಾಸಿಮ್ ಖಾನ್ ಅಭಿಪ್ರಾಯಿಸಿದ್ದಾರೆ.

'ವಿಶ್ವ ಟಿ20 ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಹೌದು, ಭಾರತದಲ್ಲಿ ಏರುತ್ತಿರುವ ಕೋವಿಡ್-19 ಪ್ರಕರಣಗಳ ಕಾರಣದಿಂದಲೇ ಈ ಅನಿಶ್ಚಿತತೆ ಕಾಡುತ್ತಿದೆ. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿ ಯುಎಇಯಲ್ಲಿ ನಡೆಸಬೇಕು,' ಎಂದು ಸಂದರ್ಶನವೊಂದರಲ್ಲಿ ವಾಸಿಮ್ ಹೇಳಿದ್ದಾರೆ.

ಕೊರೊನಾ ಪ್ರಕರಣಗಳ ಕಾರಣಕ್ಕಾಗಿಯೇ 13ನೇ ಆವೃತ್ತಿಯ ಐಪಿಎಲ್ ಅನ್ನು ಯುಎಇಯಲ್ಲಿ ನಡೆಸಲಾಯ್ತು. ಸದ್ಯ ಭಾರತದಲ್ಲಿ ಯಾವುದೇ ಟೂರ್ನಿಗಳು ನಿರ್ಧಾರವಾಗಿಲ್ಲ. ಪ್ರಸ್ತುತ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಏಕದಿನ ಸರಣಿ ಆಡುತ್ತಿದೆ.

Story first published: Monday, November 30, 2020, 23:49 [IST]
Other articles published on Nov 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+