
ಸೂಪರ್ 8ರಲ್ಲಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್
2021 ಮತ್ತು 2022ರ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಮೊದಲ ಸುತ್ತನ್ನು ಸೂಪರ್ 12 ಎಂದು ಆಡಿಸಲಾಗಿತ್ತು. ಆದರೆ ಮುಂದಿನ ಪಂದ್ಯಾವಳಿಯಲ್ಲಿ ಪ್ರತಿ ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಮುನ್ನಡೆಯುತ್ತವೆ. ನಂತರ ಆ ತಂಡಗಳನ್ನು ಪ್ರತಿ ನಾಲ್ಕು ತಂಡಗಳಿಗೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
ಎರಡು ಗುಂಪುಗಳ ಸೂಪರ್ 8 ಹಂತದಲ್ಲಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಹಂತ ತಲುಪುತ್ತವೆ. ಅನಂತರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಮೊದಲ ಎರಡು ಸ್ಥಾನ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ
ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಮುಂದಿನ ಆವೃತ್ತಿಯಲ್ಲಿ 12 ತಂಡಗಳು ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಆತಿಥೇಯ ರಾಷ್ಟ್ರಗಳಾಗಿರುವ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಳ್ಳುತ್ತವೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಅಗ್ರ ಎಂಟು ತಂಡಗಳು ಮತ್ತು ಸೂಪರ್ 12 ಗುಂಪಿನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಮುಂದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿವೆ.

ಭಾರತ ಸೇರಿದಂತೆ ಹಲವು ತಂಡಗಳಿಗೆ 2024ರ ವಿಶ್ವಕಪ್‌ನಲ್ಲಿ ಸ್ಥಾನ ಖಚಿತ
2024ರ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ಪಾಕಿಸ್ತಾನ, ಭಾರತ ಸೇರಿದಂತೆ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ಸ್ಥಾನ ಖಚಿತಪಡಿಸಿಕೊಂಡಿವೆ.
2024ರ ವಿಶ್ವಕಪ್‌ನ ಅಂತಿಮ ಎಂಟು ಸ್ಥಾನಗಳನ್ನು ಆಯಾ ತಂಡಗಳ ದ್ವಿಪಕ್ಷೀಯ ಸರಣಿಗಳ ಪ್ರದರ್ಶನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

12 ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿದ ಜಿಂಬಾಬ್ವೆ
"ದಕ್ಷಿಣ ಆಫ್ರಿಕಾ ತಂಡವು ತಮ್ಮ ಮೊದಲ ಎಂಟು ಸ್ಥಾನಗಳ ಮೂಲಕ 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದರೆ, ಜಿಂಬಾಬ್ವೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಜಿಂಬಾಬ್ವೆ ತಂಡ ಸೂಪರ್ 12 ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಗಳಿಸಿದ್ದರಿಂದ, ಪ್ರಾದೇಶಿಕ ಸರಣಿಗಳ ಮೂಲಕ ಅರ್ಹತೆ ಗಿಟ್ಟಿಸಿಕೊಳ್ಳಲು ಹಿಂತಿರುಗಿಸಲಾಗುತ್ತದೆ," ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಎರಡು ಅರ್ಹತಾ ಸ್ಥಾನಗಳನ್ನು ಹೊಂದಿದ್ದು, ಅಮೆರಿಕ ಮತ್ತು ಪೂರ್ವ-ಏಷ್ಯಾ ಪೆಸಿಫಿಕ್ ಪ್ರದೇಶಗಳಿಗೆ ಒಂದು ಸ್ಥಾನ ಮೀಸಲಿದೆ. ಈ ಮೂಲಕ ಕ್ರಿಕೆಟ್ ಅನ್ನು ಸರ್ವವ್ಯಾಪಿ ಮಾಡುವುದು ಐಸಿಸಿ ಉದ್ದೇಶವಾಗಿದೆ.


Click it and Unblock the Notifications
