ಎರಡನೇ ದಿನದಾಟದ ಅಂತ್ಯ: ಭಾರತ 393, ಶ್ರೀಲಂಕಾ 140/3
ಕೊಲಂಬೋ, ಆಗಸ್ಟ್ 21: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಭೋಜನ ವಿರಾಮದ ನಂತರ ನಿಧಾನಗತಿ ಬ್ಯಾಟಿಂಗ್ ಪ್ರದರ್ಶಿಸಿ ಭಾರತ 393 ರನ್ ಸ್ಕೋರಿಗೆ ಆಲೌಟ್ ಆಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 140/3 ಸ್ಕೋರ್ ಮಾಡಿದೆ.
ಶ್ರೀಲಂಕಾ ಪರ ಕೌಶಲ್ ಸಿಲ್ವಾ 51 ರನ್ ಗಳಿಸಿದರೆ, ವಿದಾಯ ಪಂದ್ಯವಾಡುತ್ತಿರುವ ಕುಮಾರ್ ಸಂಗಕ್ಕಾರ 32ರನ್ ಗಳಿಸಿ ಅಶ್ವಿನ್ ಬಲೆಗೆ ಬಿದ್ದರು. ಉಳಿದಂತೆ ಯಾದವ್, ಮಿಶ್ರಾ ತಲಾ 1 ವಿಕೆಟ್ ಪಡೆದು ಲಂಕಾ ರನ್ ಗಳಿಕೆಗೆ ಬ್ರೇಕ್ ಹಾಕಿದರು.[ಕುಮಾರ ಸಂಗಕ್ಕಾರನಿಗೆ ಟೀಂ ಇಂಡಿಯಾದಿಂದ ಬಹುಪರಾಕ್]

ಪಂದ್ಯದ ಮೊದಲ ದಿನದಂದು ಕೆಎಲ್ ರಾಹುಲ್ ಶತಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅರ್ಧಶತಕ ಕಂಡಿದ ಟೀಂ ಇಂಡಿಯಾಕ್ಕೆ ಎರಡನೇ ದಿನದಂದು ವಿಕೆಟ್ ಕೀಪರ್ ವೃದ್ಧಿಮನ್ ಸಹಾ ಆಸರೆಯಾದರು.24ರನ್ ಗಳಿಸಿ ಕೆಳ ಕ್ರಮಾಂಕದಲ್ಲಿ ಅಮಿತ್ ಮಿಶ್ರಾ ಅವರು ಉತ್ತಮ ಸಾಥ್ ನೀಡಿದರು.[ಮೊದಲ ದಿನದಂದು ಕೆಎಲ್ ರಾಹುಲ್ ಶತಕ]

ಸಹಾ 56ರನ್ (114 ಎಸೆತ, 6X4) ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಎರಡನೇ ದಿನದಂದು ಮೊದಲ 24.4 ಓವರ್ ಗಳಲ್ಲಿ 67 ರನ್ ಮಾತ್ರ ಗಳಿಸಿತು. ಮೊದಲ ದಿನದ ಅಂತ್ಯಕ್ಕೆ 319/6 ಸ್ಕೋರ್ ಗಳಿಸಿದ್ದ ಭಾರತ ಹೆಚ್ಚಿನ ಮೊತ್ತ ದಾಖಲಿಸದಂತೆ ಪ್ರಸಾದ್, ರಂಗಣಾ ಹೆರಾತ್ ತಡೆ ಹಿಡಿದರು.
ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ತಂಡ 63 ರನ್ ಗಳಿಂದ ಗೆದ್ದುಕೊಂಡಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್, ಕೊಲಂಬೋದಲ್ಲಿ ಆಗಸ್ಟ್ 28ರಿಂದ ಆರಂಭವಾಗಲಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications