Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಯಸ್ಸಿಗೆ ಸವಾಲೊಡ್ಡಿದ ದಿಗ್ಗಜರು: 40ರ ಹರೆಯದ ಬಳಿಕ ಅತಿ ಹೆಚ್ಚು ಟೆಸ್ಟ್ ಇನ್ನಿಂಗ್ಸ್ ಆಡಿದ 3 ವೇಗಿಗಳು

ಟೆಸ್ಟ್ ಮಾದರಿ ಕ್ರಿಕೆಟ್‌ನ ಅತ್ಯಂತ ಕಠಿಣವಾದ ಮಾದರಿ. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಆಟಗಾರರ ಕೌಶಲ್ಯ, ಸಾಮರ್ಥ್ಯ ತಾಳ್ಮೆ ಎಲ್ಲವೂ ಪರೀಕ್ಷೆಗೆ ಒಳಪಡುತ್ತದೆ. ಈ ಮಾದರಿಯಲ್ಲಿ ದೀರ್ಘ ಕಾಲ ಆಡುವುದು ಕೆಲವೇ ಕೆಲವು ಕ್ರಿಕೆಟಿಗರಿಂದ ಸಾಧ್ಯವಾಗುವ ಸಾಧನೆ. ಅದರಲ್ಲೂ ವೇಗದ ಬೌಲರ್‌ಗಳು ಈ ಮಾದರಿಯಲ್ಲಿ 38 ವರ್ಷಕ್ಕಿಂತ ಮುನ್ನ ನಿವೃತ್ತಿ ಪಡೆಯುವುದು ಸಾಮಾನ್ಯ.

ಆದರೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅಪರೂಪಕ್ಕೆ ಎಂಬಂತೆ ವೇಗಿಗಳು 40ನೇ ವಯಸ್ಸಿನ ನಂತರವೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಯುವ ವೇಹದ ಬೌಲರ್‌ಗಳಿಂದ ಪೈಪೋಟಿ ಎದುರಿಸಿದ್ದರೂ ಅವುಗಳನ್ನು ಮೀರಿ ಯಶಸ್ಸು ಸಾಧಿಸಿದ್ದಾರೆ. ಈ ವರದಿಯಲ್ಲಿ 40ರ ಹರೆಯದ ಬಳಿಕ ಅತಿ ಹೆಚ್ಚು ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ ಮೂವರು ವೇಗಿಗಳ ಬಗ್ಗೆ ಮಾಹಿತಿಯಿದೆ. ಮುಂದೆ ಓದಿ..

3 Pace Bowlers Who Bowled in Most Test Innings After 40 Years of Age In Kannada

ಡೇವ್ ನೌರ್ಸ್- 12 ಇನ್ನಿಂಗ್ಸ್

ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇವ್ ನೌರ್ಸ್ 40ರ ಹರೆಯದ ಬಳಿಕವೂ ಟೆಸ್ಟ್‌ನಲ್ಲಿ ತಂಡದ ಪರವಾಗಿ ಆಡಿದ್ದರು. 40ರ ಹರೆಯದ ಬಳಿಕ 1921-24ರಲ್ಲಿ ಅವಧಿಯಲ್ಲಿ 12 ಇನ್ನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಈ ಪಟ್ಟಿಯಲ್ಲಿ ಬರುವ ದಕ್ಷಿಣ ಆಫ್ರಿಕಾದ ಏಕೈಕ ವೇಗದ ಬೌಲರ್ ಆಗಿದ್ದಾರೆ ನೌರ್ಸ್.

ಭಾರತದ ಮಾಜಿ ವೇಗಿ ಲಾಲಾ ಅಮರ್‌ನಾಥ್

ಭಾರತ ಮಧ್ಯಮ ವೇಗದ ಬೌಲರ್ ಲಾಲಾ ಅಮರ್‌ನಾಥ್ ತಮ್ಮ 40ರ ಹರೆಯದ ಬಳಿಕ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ. 1933ರಿಂದ 1952ರ ಅವಧಿಯಲ್ಲಿ ಲಾಲಾ ಅಮರನಾಥ್ ಭಾರತದ ಪರವಾಗಿ 24 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. 1952ರಲ್ಲಿ ಈಡನ್ ಗಾರ್ಡನ್‌ನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು.

ಇಂಗ್ಲೆಂಡ್ ದಿಗ್ಗ ವೇಗಿ ಜೇಮ್ಸ್ ಆಂಡರ್ಸನ್

ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜೇಮ್ಸ್ ಆಂಡರ್ಸನ್ ಇತ್ತೀಚೆಗಷ್ಟೇ ಭಾರತದ ಲಾಲಾ ಅಮರ್‌ನಾಥ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಆಂಡರ್ಸನ್ 40ರ ಹರೆಯದ ಬಳಿಕ ಅತಿ ಹೆಚ್ಚು ಟೆಸ್ಟ್ ಇನ್ನಿಂಗ್ಸ್ ಆಡಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ 2022ರಲ್ಲಿ 40ರ ಹರೆಯಕ್ಕೆ ಕಾಲಿಟ್ಟಿದ್ದು ಅಲ್ಲಿಂದ ಇಲ್ಲಿಯವರೆಗೆ 15 ಇನ್ನಿಂಗ್ಸ್‌ಗಳಲ್ಲಿ ಆಡಿದ್ದಾರೆ.

ಚುಟುಕು ಮಾದರಿಯಿಂದ ದೂರವುಳಿದು ಟೆಸ್ಟ್ ಮಾದರಿಗೆ ಗಮನಹರಿಸುವ ಜೇಮ್ಸ್ ಆಂಡರ್ಸನ್ ನಿರ್ಧಾರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಶ್ವದಲ್ಲಿ ಲೀಗ್ ಕ್ರಿಕೆಟ್‌ಗಳ ಅಬ್ಬರ ಜೋರಾಗಿರುವ ಇಂಥಾ ಸಂದರ್ಭದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರಂಥಾ ವೇಗಿ ಆರ್ಥಿಕವಾಗಿ ಮತ್ತಷ್ಟು ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶವಿತ್ತು. ಆದರೆ ಜೇಮ್ಸ್ ಆಂಡರ್ಸನ್ ಚುಟುಕು ಮಾದರಿಯನ್ನು ಬಿಟ್ಟು ಕೇವಲ ಟೆಸ್ಟ್ ಕ್ರಿಕೆಟ್‌ನ ಮೇಲೆ ಮಾತ್ರವೇ ಗಮನಹರಿಸಿದ್ದಾರೆ. ಇನ್ನು ಕೂಡ ಆಂಡರ್ಸನ್ ಟೆಸ್ಟ್ ಮಾದರಿಯಲ್ಲಿ ಅತ್ಯುತ್ತಮ ಬೌಲರ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.

Story first published: Wednesday, June 21, 2023, 15:35 [IST]
Other articles published on Jun 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+