For Quick Alerts
ALLOW NOTIFICATIONS  
For Daily Alerts
 

IPL 2020: ಪಾಯಿಂಟ್ಸ್ ಟೇಬಲ್ ತಳ ಮುಟ್ಟಿದ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌

3 Times IPL Champion CSK Now Bottom Of The Points Table In IPL 2020

ಐಪಿಎಲ್ 13ನೇ ಆವೃತ್ತಿಯಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಬಹುತೇಕ ಈ ಸೀಸನ್‌ನ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದೆ.

ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಹಾಗೂ ಏಳು ಪಂದ್ಯಗಳು ಸೋತ ಪರಿಣಾಮ, ಕೇವಲ ಆರು ಪಾಯಿಂಟ್ಸ್ ಕಲೆಹಾಕಿ ಪಾಯಿಂಟ್ಸ್‌ ಟೇಬಲ್‌ ತಳ ಮುಟ್ಟಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್‌ ಗೆದ್ದ ಚೆನ್ನೈ ಐದು ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿತು. ಇದು ಐಪಿಎಲ್ 2020ರಲ್ಲಿ ತಂಡವೊಂದು ಕಲೆಹಾಕಿದ ಕನಿಷ್ಠ ಮೊತ್ತವಾಗಿದೆ. ಈ ಗುರಿ ಬೆನ್ನಟ್ಟಿದ ಆರ್ಆರ್‌ ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಚೆನ್ನೈ ಟೂರ್ನಿಯಲ್ಲಿ ಏಳನೇ ಸೋಲು ದಾಖಲಿಸಿತು.

ಆರಂಭಿಕ ಪಂದ್ಯ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌, ಗಾಯಾಳುಗಳ ಆಘಾತದ ಜೊತೆಗೆ ಸುರೇಶ್ ರೈನಾರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಭಾರೀ ಹೊಡೆತ ತಿಂದಿತು. ಜೊತೆಗೆ ನಾಯಕ ಧೋನಿ ಕೂಡ ಫಾರ್ಮ್‌ನಲ್ಲಿ ಇಲ್ಲದೆ ಇರುವುದು ಕೂಡ ತಂಡಕ್ಕೆ ನುಂಗಲಾರದ ತುತ್ತಾಯಿತು. ನಾಯಕನೇ ಸ್ಫೂರ್ತಿದಾಯಕ ಪ್ರದರ್ಶನ ನೀಡದೆ ಹೊರತು ತಂಡವನ್ನು ಮೇಲೆತ್ತಲು ಸಾಧ್ಯವಾಗದೆ ಚೆನ್ನೈ ಈ ಬಾರಿ ಹೀನಾಯ ಮುಖಭಂಗ ಅನುಭವಿಸಿದೆ.

ನಾಯಕ ಧೋನಿ ಬ್ಯಾಟಿಂಗ್‌ನಿಂದ ರನ್‌ಗಳ ಕೊರತೆಯ ಜೊತೆಗೆ, ಉತ್ತಮ ಆರಂಭ ಸಿಗದೇ ಇದ್ದಿದ್ದು ಹಾಗೂ ದುರ್ಬಲ ಮಧ್ಯಮ ಕ್ರಮಾಂಕವು ಪ್ರಸ್ತುತ ಸೀಸನ್‌ನಲ್ಲಿ ಮೂರು ಬಾರಿಯ ಚಾಂಪಿಯನ್ನರನ್ನ ಈ ಸ್ಥಿತಿಗೆ ತಂದು ಬಿಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಬಾರಿ ಬಹುತೇಕ ಪ್ಲೇ ಆಫ್ ಕಥೆ ಮುಗಿದಿದ್ದು, ಒಂದು ವೇಳೆ ಉಳಿದೆಲ್ಲಾ ಪಂದ್ಯ ಗೆದ್ದರೂ ಪ್ಲೇ ಆಫ್‌ಗೆ ತಲುಪಲು ಬೇರೆ ತಂಡಗಳ ಸೋಲುಗಳ ಲೆಕ್ಕಾಚಾರವನ್ನು ಎದುರು ನೋಡಬೇಕಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ 2020ರ ಐಪಿಎಲ್ ಸೀಸನ್‌ ಸಿಎಸ್‌ಕೆ ಅಭಿಮಾನಿಗಳ ಪಾಲಿಗೆ ಲೀಗ್‌ನಲ್ಲಷ್ಟೇ ಮುಕ್ತಾಯ ಎಂಬಂತೆ ಗೋಚರಿಸಿದೆ.

Story first published: Tuesday, October 20, 2020, 10:27 [IST]
Other articles published on Oct 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+