ಸಿಡ್ನಿ, ಜ.6: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಶತಕ ಹಾಗೂ ಕ್ರಿಸ್ ರೋಜರ್ಸ್ ಅರ್ಧಶತಕದ ನೆರವಿನಿಂದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ವಾರ್ನರ್ ಹೊಡೆತಕ್ಕೆ ಟೀಂ ಇಂಡಿಯಾ ಬೌಲರ್ ಗಳು ತತ್ತರಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಆಸೀಸ್ ತಂಡ 348/2 ಸ್ಕೋರ್ ಮಾಡಿದೆ.
ನಾಲ್ಕನೇ ಟೆಸ್ಟ್ ನ ಮೊದಲ ದಿನದ ಅಂತ್ಯಕ್ಕೆ ಶೇನ್ ವ್ಯಾಟ್ಸನ್ 61 ರನ್ ಹಾಗೂ ನಾಯಕ ಸ್ಮಿತ್ 82 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಭಾರತದ ಪರ ಮಹಮ್ಮದ್ ಶಮಿ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಗಳಿಸಿದರು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಭೋಜನ ವಿರಾಮ ವೇಳೆಗೆ ವಿಕೆಟ್ ನಷ್ಟವಿಲ್ಲದೆ 123 ರನ್ ಗಳಿಸಿದ್ದ ರೋಜರ್ಸ್ ಹಾಗೂ ವಾರ್ನರ್ ಜೋಡಿ ಚಹಾ ವಿರಾಮದ ವೇಳೆಗೆ 60 ಓವರ್ ಗಳಲ್ಲಿ 242/2 ಸ್ಕೋರ್ ಮಾಡಲು ನೆರವಾದರು.

ಆದರೆ, ತಂಡದ ಮೊತ್ತ 200 ಆಗಿದ್ದಾಗ ಡೇವಿಡ್ ವಾರ್ನರ್ ಅವರು ಆರ್ ಅಶ್ವಿನ್ ಎಸೆತದಲ್ಲಿ ಮುರಳಿ ವಿಜಯ್ ಗೆ ಕ್ಯಾಚಿತ್ತು ಔಟಾಗಿದ್ದಾರೆ. ವಾರ್ನರ್ 101 ರನ್ (114 ಎ,16 ಬೌಂ),ಕ್ರಿಸ್ ರೋಜರ್ಸ್ 95 ರನ್ (160 ಎ, 13 ಬೌಂಡರಿ) ಗಳಿಸಿ ಶಮಿ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.
ಇತ್ತೀಚಿನ ವರದಿಗಳು ಬಂದಾಗ ನಾಯಕ ಸ್ಮಿತ್ 63 ಹಾಗೂ ಮೊದಲ ಬಾರಿಗೆ ಲಯಕ್ಕೆ ಮರಳಿರುವ ಶೇನ್ ವಾಟ್ಸನ್ 50 ರನ್ ಗಳಿಸಿ ಆಡುತ್ತಿದ್ದರು. 80 ಓವರ್ ಗಳಲ್ಲಿ 317/2 ಸ್ಕೋರ್ ಮಾಡಿತ್ತು. [ಅಡಿಲೇಡ್ ಟೆಸ್ಟ್: ಮತ್ತೆ ಶತಕ ಸಿಡಿಸಿದ ಡೇವಿಡ್ ವಾರ್ನರ್]
ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಮೇಲೆ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಹಲವು ಬದಲಾವಣೆ ಕಂಡು ಬಂದಿದ್ದು, ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರಾ ಅವರನ್ನು ಆಡುವ 11 ಆಟಗಾರರ ಪಟ್ಟಿಯಿಂದ ಹೊರಹಾಕಲಾಗಿದೆ.