ಕ್ರಿಕೆಟ್ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!

ಬೆಂಗಳೂರು: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ. ಆದರೆ ಇಲ್ಲಿ ಕ್ರಿಕೆಟ್ ಆಟಕ್ಕಿರುವಷ್ಟು ಕ್ರೇಝ್ ಬೇರಾವ ಕ್ರೀಡೆಗೂ ಇಲ್ಲ. ನಮ್ಮಲ್ಲಿ ಕ್ರಿಕೆಟ್‌ಗೆ ಹುಚ್ಚು ಅಭಿಮಾನಿಗಳು ಇದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಈ ದೇಶದ ಅತ್ಯಾಕರ್ಷಣೀಯ ಆಟವಾಗಿ ಬೆಳೆಯುತ್ತಿದೆ. ವಿಶ್ವ ಮಟ್ಟದ ಕ್ರೀಡೆಯಲ್ಲಿ ಭಾರತ ಮಿನುಗಲು ಕ್ರಿಕೆಟ್ ಕೂಡ ಒಂದು ಕಾರಣವೇ ಅನ್ನೋದನ್ನು ನಾವು ಒಪ್ಪಿಕೊಳ್ಳಬೇಕು. ಕ್ರಿಕೆಟ್‌ನಿಂದ ದೇಶಕ್ಕೆ ಒಂದಿಷ್ಟು ಆದಾಯವೂ ಬರುತ್ತದೆ ಅನ್ನೊ ಮಾತನ್ನೂ ಅಲ್ಲಗೆಳೆಯುವಂತಿಲ್ಲ.
ಕ್ರಿಕೆಟನ್ನು ಅಂಕಿಗಳ ಆಟವೆಂದು ಕರೆಯಬಹುದು. ಅಂಕಿಗಳಿಲ್ಲದೆ ಕ್ರಿಕೆಟ್ ಆಟವೇ ಮುಂದುವರೆಯೋಲ್ಲ. ಪ್ರತೀ ಕ್ರಿಕೆಟ್ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳು ಸೃಷ್ಟಿಯಾಗುತ್ತಿರುವುದು ಈ ಅಂಕಿ-ಅಂಶಗಳ ಕಾಣದಿಂದಾಗಿಯೇ. ಕ್ರಿಕೆಟ್ ಅಂಗಳದಲ್ಲಿ ಅನೇಕ ದಾಖಲೆಗಳು ನಿರ್ಮಾಣವಾಗಿವೆ.
ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಅಪರೂಪದ 5 ದಾಖಲೆಗಳ ಮಾಹಿತಿ ಇಲ್ಲಿದೆ.

1. ಸುನಿಲ್ ಗವಾಸ್ಕರ್
ಭಾರತ ಕ್ರಿಕೆಟ್ ತಂಡದ ದಂತಕತೆ ಸುನಿಲ್ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಲ್ಲಿ 51.12ರ ಸರಾಸರಿಯಲ್ಲಿ 10122 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕಗಳು 45 ಅರ್ಧ ಶತಕಗಳು ಸೇರಿವೆ. ಟೆಸ್ಟ್ ಪಂದ್ಯದ ಮೊದಲ ಎಸೆತಕ್ಕೆ ಔಟ್ ಆಗಿರುವುದನ್ನು ನೋಡಿದರೆ ಗವಾಸ್ಕರ್ ಹೀಗೆ ಒಟ್ಟಿಗೆ 3 ಬಾರಿ ಔಟ್ ಆಗಿದ್ದಾರೆ. 1974, 1984 ಮತ್ತು 1987ರಲ್ಲಿ ಹೀಗೆ ತನ್ನ ವೃತ್ತಿ ಜೀವನದಲ್ಲಿ ಗವಾಸ್ಕರ್ ಟೆಸ್ಟ್ ಪಂದ್ಯದ ಮೊದಲ ಎಸೆತಕ್ಕೆ ಔಟ್ ಆಗಿದ್ದರು.

2. ಮಿಥಾಲಿ ರಾಜ್
ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಹೆಸರಿನಲ್ಲಿ ಅಪರೂಪದ ದಾಖಲೆಯಿದೆ. ಏಕದಿನ ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಮಹಿಳೆಯೆಂಬ ಹಿರಿಮೆ ಮಿಥಾಲಿ ಅವರದ್ದು. ಈವರೆಗೆ ಮಿಥಾಲಿ ಒಟ್ಟಿಗೆ 209 ಏಕದಿನ ಪಂದ್ಯಗಳಲ್ಲಿ 6888 ರನ್ ಗಳಿಸಿದ್ದಾರೆ.

3. ಸೌರವ್ ಗಂಗೂಲಿ
ಏಕದಿನ ಸರಣಿಯೊಂದರಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸತತ ನಾಲ್ಕು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಅಪರೂಪದ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿದೆ. ವಿಶ್ವದಲ್ಲಿ ಈ ದಾಖಲೆ ಮಾಡಿದ್ದು ಗಂಗೂಲಿ ಒಬ್ಬರೆ. ಕೆನಡಾದಲ್ಲಿ 1997ರಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಗಂಗೂಲಿ ಈ ಮೈಲಿಗಲ್ಲು ಸ್ಥಾಪಿಸಿದ್ದರು.

4. ಒಂದೇ ಓವರ್‌ನಲ್ಲಿ 77 ರನ್
ಒಂದೇ ಓವರ್‌ನಲ್ಲಿ ಬರೋಬ್ಬರಿ 77 ರನ್ ನೀಡಿರುವ ಕೆಟ್ಟ ದಾಖಲೆ ನ್ಯೂಜಿಲೆಂಡ್ ದೇಸಿ ಕ್ರಿಕೆಟ್ ತಂಡವಾದ ವೆಲ್ಲಿಂಗ್ಟನ್‌ನ ಬೌಲರ್ ಬರ್ಟ್ ವ್ಯಾನ್ಸ್ ಹೆಸರಿನಲ್ಲಿದೆ. 20 ಫೆಬ್ರವರಿ 1990ರಂದು ನಡೆದಿದ್ದ ಕ್ಯಾಂಟರ್ಬರಿ ತಂಡದ ವಿರುದ್ಧದ ಪಂದ್ಯದಲ್ಲಿ ಕೇವಲ 1 ಓವರ್ ಎಸೆದು 77 ರನ್ ನೀಡಿದ್ದರು.

5. ಸಚಿನ್ ತೆಂಡೂಲ್ಕರ್
ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡಿದ್ದರು ಎಂದರೆ ನಂಬುತ್ತೀರ?. 1987ರಲ್ಲಿ ಭಾರತ-ಪಾಕಿಸ್ತಾನ ಸರಣಿಗೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ಪಾಕಿಸ್ತಾನದ ಪರ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications