Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರು

5 Oldest Batsmen To Score A Hundred In Ipl

ಕ್ರಿಕೆಟ್‌ ಲೋಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಕೋಟ್ಯಂತರ ಅಭಿಮಾನಿಗಳು ಈ ಚುಟುಕು ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ತಮ್ಮ ನೆಚ್ಚಿನ ಆಟಗಾರರ ಹೊಡಿಬಡಿಯ ಆಟವನ್ನು ನೋಡಲು ಎದುರು ನೋಡುತ್ತಿರುತ್ತಾರೆ. ದೇಶಿ ವಿದೇಶಿ ಆಟಗಾರರೆಲ್ಲರೂ ಜೊತೆಯಾಗಿ ಆಡಲು ಸಿಗುವ ವಿಶೇಷ ಸಂದರ್ಭ ಇದು.

ಈ ಟೂರ್ನಮೆಂಟ್ ಅಪಾರ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆಯಲು ಮತ್ತೊಮದು ಕಾರಣ ಇದು ಚುಟುಕು ಮಾದರಿ. ದಿಗ್ಗಜ ಆಟಗಾರರು ಈ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ. ಆರಂಭದಲ್ಲಿ ಈ ಚುಟುಕು ಮಾದರಿ ಯುವ ಕ್ರಿಕೆಟಿಗರಿಗೆ ಸೂಕ್ತ ಎಂದು ವಿಮರ್ಶಿಸಲಾಗುತ್ತಿತ್ತು. ಆದರೆ ಇದು ಸುಳ್ಳು ಎಂದು ಅನೇಕ ಹಿರಿಯ ಆಟಗಾರರು ತಮ್ಮ ಪ್ರದರ್ಶನದ ಮೂಲಕ ವ್ಯಕ್ತ ಪಡಿಸಿದ್ದಾರೆ.

ಈ ವರದಿಯಲ್ಲಿಐಪಿಎಲ್‌ನಲ್ಲಿ ಹಿರಿಯ ವಯಸ್ಸಿನಲ್ಲಿ ಶತಕವನ್ನು ದಾಖಲಿದ ಐವರು ಆಟಗಾರರನ್ನು ಅವರ ಹಿರಿತನದ ಆಧಾರದಲ್ಲಿ ನೋಡೋಣ

ಶೇನ್ ವಾಟ್ಸನ್ (36 ವರ್ಷ 340 ದಿನ)

ಶೇನ್ ವಾಟ್ಸನ್ (36 ವರ್ಷ 340 ದಿನ)

ಹಿರಿ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಆಟಗಾರರ ಪೈಕಿ ಶೇನ್ ವಾಟ್ಸನ್ ಐದನೇ ಆಟಗಾರನಾಗಿದ್ದಾರೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ವಾಟ್ಸನ್ ಆ ಸೀಸನ್‌ನ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕವನ್ನು ದಾಖಲಿಸಿ ಗೆಲುವಿಗೆ ಕಾರಣರಾಗಿದ್ದರು. ಶೇನ್ ವಾಟ್ಸನ್ ದಾಖಲಿಸಿದ ಈ ಶತಕ ಐಪಿಎಲ್‌ನಲ್ಲಿ ಹಿರಿಯ ಆಟಗಾರನೋರ್ವ ದಾಖಲಿಸಿದ ಶತಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಶತಕವನ್ನು ವಾಟ್ಸನ್ 36 ವರ್ಷ 340 ದಿನದಂದು ದಾಖಲಿಸಿದ್ದಾರೆ.

ಸಚಿನ್ ತೆಂಡೂಲ್ಕರ್ (37 ವರ್ಷ 356ದಿನ)

ಸಚಿನ್ ತೆಂಡೂಲ್ಕರ್ (37 ವರ್ಷ 356ದಿನ)

ಶತಕ ದಾಖಲಿಸಿದ ಹಿರಿಯ ಆಟಗಾರರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಸಚಿನ್ ತೆಂಡೂಲ್ಕರ್. ಸಚಿನ್ ಈ ಶತಕವನ್ನು ತಮ್ಮ 38ನೇ ಹುಟ್ಟುಹಬ್ಬದ ಕೆಲವೇ ದಿನಗಳ ಮುನ್ನ ದಾಖಲಿಸಿದ್ದರು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಭರ್ಜರಿ 100 ರನ್ ದಾಖಲಿಸಿದ್ದರು. ಈ ಪಂದ್ಯವನ್ನು ಮುಂಬೈ ತಂಡ ಸೋತಿದ್ದರೂ ಸಚಿನ್ ಶತಕ ಅಭಿಮಾನಿಗಳ ಮನಗೆದ್ದಿತ್ತು.

ಕ್ರಿಸ್ ಗೇಲ್ (38 ವರ್ಷ 209 ದಿನ)

ಕ್ರಿಸ್ ಗೇಲ್ (38 ವರ್ಷ 209 ದಿನ)

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅತ್ಯಂತ ಭಯಾನಕ ಆಟಗಾರ. 40 ರನ್‌ಗಳಿಸಿದ ನಂತರ ಈತನನ್ನು ಔಟ್ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಡೇಣಜರಸ್ ಆಟಗಾರ ಕ್ರೀಸ್ ಗೇಲ್. ಎರಡು ವರ್ಷಗಳ ಹಿಂದೆ ಕ್ರಿಸ್ ಗೇಲ್ ಪಂಜಾಬ್ ತಂಡದ ಪರವಾಗಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗಳಿಸಿದ್ದ 104ರನ್ ಕ್ರಿಸ ಗೇಲ್ ಅವರನ್ನು ಶತಕ ಗಳಿಸಿದ ಅತಿ ಹಿರಿಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕೂರಿಸಿದೆ. ಆಗ ಕ್ರಿಸ್‌ ಗೇಲ್‌ಗೆ ಸರಿಯಾಗಿ 38 ವರ್ಷ 209 ದಿನವಾಗಿತ್ತು.

ಸನತ್ ಜಯಸೂರ್ಯ (38 ವರ್ಷ 319 ದಿನ)

ಸನತ್ ಜಯಸೂರ್ಯ (38 ವರ್ಷ 319 ದಿನ)

ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ವಿರ್ಶವ ಕ್ರಿಕೆಟ್ ಕಂಡ ಸ್ಪೋಟಕ ಆಟಗಾರರಲ್ಲಿ ಒಬ್ಬರು. ಜಯಸೂರ್ಯ ತನ್ನ ಕ್ರಿಕೆಟ್ ಜೀವನದ ಅಂತ್ಯದವರೆಗೂ ಅದೇ ಸ್ಪೋಟಕ ಆಟವನ್ನು ಪ್ರದರ್ಶಿಸಿದ್ದರು ಎಂಬುದಕ್ಕೆ ಅವರ ಈ ಶತಕವೇ ಸಾಕ್ಷಿ. ಐಪಿಎಲ್‌ನ ಉದ್ಘಾಟನಾ ಟೂರ್ನಿಯಲ್ಲಿ ಜಯಸೂರ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 114ರನ್ ದಾಖಲಿಸಿದ್ದರು. ಆಗ ಜಯಸೂರ್ಯ ವಯಸ್ಸು 38 ವರ್ಷ 319 ದಿನ.

ಆಡಮ್ ಗಿಲ್‌ಕ್ರಿಸ್ಟ್ (39 ವರ್ಷ 184 ದಿನ)

ಆಡಮ್ ಗಿಲ್‌ಕ್ರಿಸ್ಟ್ (39 ವರ್ಷ 184 ದಿನ)

ಐಪಿಎಲ್‌ನಲ್ಲಿ ಶತಕ ಸಿಡಿಸಿದ ಹಿರಿಯ ಆಟಗಾರರ ಪೈಕಿ ಮೊದಲ ಸ್ಥಾನವನ್ನು ಅಲಂಕರಿಸಿರುವುದು ಆಸ್ಟ್ರೇಲಿಯಾದ ದಿಗ್ಗಜ ಆಡಮ್ ಗಿಲ್‌ಕ್ರಿಸ್ಟ್. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರವಾಗಿ ಗಿಲ್‌ಕ್ರಿಸ್ಟ್ ಈ ಶತಕವನ್ನು ದಾಖಲಿಸಿ ದಾಖಲೆ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 111 ರನ್ ಸಿಡಿಸಿದ್ದರು. ಆಗ ಗಿಲ್‌ಕ್ರಿಸ್ಟ್‌ಗೆ 39 ವರ್ಷ 184 ದಿನವಾಗಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಹಿರಿಯ ಆಟಗಾರ ದಾಖಲಿಸಿದ ಶತಕದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Story first published: Wednesday, July 1, 2020, 23:56 [IST]
Other articles published on Jul 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+