ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಐದು ಕಾರಣಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿದೆ. ಈ ಮೂಲಕ ಆರ್‌ಸಿಬಿಯ ಸತತ ಗೆಲುವಿಗೆ ಬ್ರೇಕ್ ಬಿದ್ದಿದೆ.
ದುಬೈ ಇಂಟರ್‌ನ್ಯಾಷ್‌ನಲ್ಲಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಎದುರಾಳಿಯನ್ನ ಬ್ಯಾಟಿಂಗ್ ಆಹ್ವಾನಿಸಿದ್ದ ಕೊಹ್ಲಿ ಪಡೆ ಲೆಕ್ಕಾಚಾರಗಳು ತಲೆಕೆಳಗಾದವು. ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಒವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.
197 ರನ್‌ಗಳನ್ನು ಗುರಿ ಬೆನ್ನತ್ತಿದ ಆರ್‌ಬಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟ ಪರಿಣಾಮ 137 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ 59ರನ್‌ಗಳ ಗೆಲುವು ದಾಖಲಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ಐದು ಪ್ರಮುಖ ಕಾರಣಗಳು ಈ ಕೆಳಗಿವೆ.

1) ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ಕೊಹ್ಲಿ ಬೌಲರ್‌ಗಳು ವಿಫಲಗೊಂಡಿದ್ದು ಆರಂಭಿಕ ಹಿನ್ನಡೆಗೆ ಕಾರಣ. ಪೃಥ್ವಿ ಶಾ, ಶಿಖರ್ ಧವನ್ ಜೋಡಿ ಡೆಲ್ಲಿಗೆ ಉತ್ತಮ ಅಡಿಪಾಯ ಹಾಕಲು ಇದರಿಂದ ಸಾಧ್ಯವಾಯಿತು.

2) ಡೆತ್ ಓವರ್‌ಗಳಲ್ಲಿ ದುಬಾರಿ ರನ್
ಡೆತ್ ಓವರ್‌ಗಳಲ್ಲಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಹಾಗೂ ಪ್ರಮುಖ ಬೌಲರ್ ನವದೀಪ್ ಸೈನಿ ಹೆಚ್ಚು ದುಬಾರಿಯಾಗಿದ್ದರ ಜೊತೆಗೆ ವಿಕೆಟ್ ಟೇಕಿಂಗ್ ಬೌಲರ್ ಯುಜವೇಂದ್ರ ಚಹಾಲ್ ಮ್ಯಾಜಿಕ್ ಸೋಮವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿಲ್ಲ. ಸ್ಫೋಟಕ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ರನ್ ವೇಗಕ್ಕೆ ನಿಯಂತ್ರಣ ಹಾಕುವಲ್ಲಿ ಕೊಹ್ಲಿ ಪಡೆ ಮುಗ್ಗರಿಸಿತು.
ವಿರಾಟ್ ಕೊಹ್ಲಿ ದಾಖಲೆ: ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ

3) ಉತ್ತಮ ಆರಂಭ ಪಡೆಯುವಲ್ಲಿ ಆರ್‌ಸಿಬಿ ವಿಫಲ
ಕಳೆದ ಮೂರು ಪಂದ್ಯಗಳ ಗೆಲುವಿನಲ್ಲಿ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಒಂದು ಓಪನರ್ ದೇವದತ್ ಪಡಿಕ್ಕಲ್ ರನ್‌ಗಳ ಕೊಡುಗೆ. ಫಿಂಚ್ ಜೊತೆಗೂಡಿ ಉತ್ತಮ ಆರಂಭ ಒದಗಿಸುತ್ತಿದ್ದ ಪಡಿಕ್ಕಲ್, ಡೆಲ್ಲಿ ವಿರುದ್ಧ ಸಿಂಗಲ್ ಅಂಕಿಗೆ ಔಟಾಗಿದ್ದು , ತಂಡದ ಮೇಲೆ ಒತ್ತಡ ಬೀರಿತು. ಜೊತೆಗೆ ಆ್ಯರೋನ್ ಫಿಂಚ್ ಕೂಡ ಈ ಬಾರಿ ತಂಡಕ್ಕೆ ನೆರವಾಗದೆ 13ರನ್‌ಗೆ ಔಟಾದ್ರೂ

4) ಎಬಿ ಡಿ ವಿಲಿಯರ್ಸ್ ಮೇಲೆ ಹೆಚ್ಚು ಅವಲಂಬನೆ
ಹೌದು, ಆರ್‌ಸಿಬಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಅವಲಂಬನೆಗೊಂಡಿರುವ ಆಟಗಾರ ಮಿಸ್ಟರ್ 360. ಆರ್‌ಸಿಬಿ ಪರ ಒಂದು ಕೊಹ್ಲಿ ಮಿಂಚಬೇಕು, ಇಲ್ಲವೇ ಎಬಿಡಿ ಅಬ್ಬರಿಸಿದ್ರೆ ಗೆಲುವು ಸಾಧ್ಯ ಎನ್ನುವ ಮನಸ್ಥಿತಿ ತಂಡದಿಂದ ಇನ್ನೂ ದೂರವಾಗಿಲ್ಲ. ಎಬಿಡಿ ವಿಕೆಟ್ ಪತನವು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದೇ ಪೆವಿಲಿಯನ್ ಸೇರಿಕೊಂಡರು.

5) ಕೆಳ ಕ್ರಮಾಂಕದಲ್ಲಿ ನೆರವಾಗದ ಬ್ಯಾಟ್ಸ್‌ಮನ್ಸ್
ಪ್ರಮುಖ ನಾಲ್ವರು ಬ್ಯಾಟ್ಸ್‌ಮನ್‌ಗಳು ಔಟಾದ ಬಳಿಕ ಆರ್‌ಸಿಬಿಗೆ ಕೆಳಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್ ನೆರವಾಗಲಿಲ್ಲ. ಮೋಯಿನ್ ಅಲಿ, ಶಿವಂ ದುಬೆ , ವಾಶಿಂಗ್ಟನ್ ಸುಂದರ್ ಕಷ್ಟಕಾಲದಲ್ಲೂ ತಂಡದ ಕೈ ಹಿಡಿಯಲಿಲ್ಲ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications