ಭಾರತ ಬಾಂಗ್ಲಾ ಎರಡನೇ ಟೆಸ್ಟ್: ಸಂಭವನೀಯ ಐದು ದಾಖಲೆಗಳು

ಹಲವು ಸಮಯಗಳ ಕಾಯುವಿಕೆಯ ನಂತರ ಭಾರತ ಡೇ ನೈಟ್ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಟೆಸ್ಟ್ ತಂಡ ಮಾನ್ಯತೆ ಪಡೆದ ರಾಷ್ಟ್ರಗಳ ಪೈಕಿ ಭಾರತ ಕಡೇಯದಾಗಿ ಟೆಸ್ಟ್ ಅಹರ್ನಿಶಿ ಪಂದ್ಯದಲ್ಲಿ ಆಡುತ್ತಿದೆ. ಈಡನ್ ಗಾರ್ಡನ್ ಐತಿಹಾಸಿಕ ಪಂದ್ಯಕ್ಕೆ ಅಣಿಯಾಗಿದೆ. ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು 130ರನ್ ಹಾಗೂ ಇನ್ನಿಂಗ್ಸ್ ಅಂತರದಿಂದ ಗೆದ್ದು 1-0 ಅಂತರದಿಂದ ಮುನ್ನಡೆಯನ್ನು ಪಡೆದುಕೊಂಡಿದೆ.
ಪಂದ್ಯಕ್ಕೂ ಮೊದಲು ಮಾತನಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಪಿಂಕ್ ಬಾಲ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುವ ಬಗ್ಗೆ ಕುತೂಹಲವನ್ನು ಹೊಂದಿದ್ದು ನಮ್ಮ ಎನರ್ಜಿ ಸಾಕಷ್ಟು ಹೆಚ್ಚಾಗಿದ ಎಂಬ ಮಾತನ್ನು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಭಾರತ-ಬಾಂಗ್ಲಾದೇಶ ಅಹರ್ನಿಶಿ ಪಂದ್ಯ 12ನೇ ಅಂತರಾಷ್ಟ್ರೀಯ ಅಹರ್ನಿಶಿ ಪಂದ್ಯವಾಗಿದೆ. ಭಾರತ ಡೇ-ನೈಟ್ ಟೆಸ್ಟ್ ಪಂದ್ಯದ ಆತಿಥ್ಯವಹಿಸುತ್ತಿರುವ 9ನೇ ದೇಶವಾಗಿದೆ. ಈ ವಿಶೇಷ ಪಂದ್ಯದಲ್ಲಿ ಅನೇಕ ದಾಖಲೆಗಳು ಮುರಿಯುವ ಸಾಧ್ಯತೆಗಳು ಇವೆ. ಅವುಗಳಲ್ಲಿ ಪ್ರಮುಖ 5ದಾಖಲೆಗಳನ್ನು ನೋಡೋಣ ಬನ್ನಿ

#1 ಗಂಗೂಲಿ ದಾಖಲೆ ಹಿಂದಿಕ್ಕುತ್ತಾರಾ ಕೊಹ್ಲಿ?
ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಟೆಸ್ಟ್ ಒಟ್ಟು ರನ್‌ಗಳನ್ನು ಹಿಂದಿಕ್ಕುವ ಅವಕಾಶ ಕೊಹ್ಲಿ ಮುಂದಿದೆ. ಸಧ್ಯ ಕೊಹ್ಲಿ 83 ಟೆಸ್ಟ್‌ಗಳನ್ನು ಆಡಿರುವ ಕೊಹ್ಲಿ ಅಧಿಕ ರನ್ ಗಳಿಕೆ ಪಟ್ಟಿಯಲ್ಲಿ 7066 ರನ್‌ಗಳೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 113ಟೆಸ್ಟ್ ಪಂದ್ಯಗಳಲ್ಲಿ 7212 ರನ್‌ಗಳಿಸಿದ್ದು ಈ ದಾಖಲೆ ಹಿಂದಿಕ್ಕಲು ಕೊಹ್ಲಿಗೆ ಈ ಪಂದ್ಯದಲ್ಲಿ 144 ರನ್‌ಗಳ ಅವಶ್ಯಕತೆಯಿದೆ.

#2 ನಾಯಕನಾಗಿ ಮತ್ತೊಂದು ದಾಖಲೆಗೆ ಸನಿಹ
ನಾಯಕ ಕೊಹ್ಲಿ ನಾಯಕನಾಗಿ ಮತ್ತೊಂದು ದಾಖಲೆಯನ್ನು ಈ ಪಂದ್ಯದಲ್ಲಿ ಮಾಡುವ ಸಾದ್ಯತೆ ಹೆಚ್ಚಾಗಿದೆ. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 32ರನ್‌ಗಳಿಸಿದರೆ ಸಾಕು ನಾಯಕನಾಗಿ 5000ರನ್ ಗಳಿಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಸಾಧನೆಯನ್ನು ಇಲ್ಲಿಯವರೆಗೆ ಕೇವಲ 5 ನಾಯಕರಷ್ಟೇ ಮಾಡಿದ್ದಾರೆ. ಕ್ಲೈವ್ ಲಾಯ್ಡ್, ಸ್ಟೀಫನ್ ಫ್ಲೇಮಿಂಗ್, ರಿಕಿ ಪಾಂಟಿಂಗ್ ಮತ್ತು ಗ್ರೇಮ್ ಸ್ಮಿತ್ ಈ ಸಾಧನೆ ಮಾಡಿರುವ ನಾಯಕರು.
Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!

#3 ಕಾಂಬ್ಳಿ ದಾಖಲೆ ಮುರಿಯುತ್ತಾರಾ ಅಗರ್ವಾಲ್!
ಟೀಮ್ ಇಂಡಿಯಾದ ಹೊಸ ಪ್ರತಿಭೆ ಮಯಾಂಕ್ ಅಗರ್ವಾಲ್ ತಾವು ಇಲ್ಲಿಯವರೆಗೆ ಆಡಿರುವ 12ಇನ್ನಿಂಗ್ಸ್‌ಗಳಿಂದ 858ರನ್ ಗಳಿಸಿದ್ದಾರೆ. ಕೊಲ್ಕಾತ್ತಾ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಗರ್ವಾಲ್ 142ರನ್ ಬಾರಿಸಿದರೆ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ ಸಾವಿರ ರನ್‌ಗಳಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ವಿನೋದ್ ಕಾಂಬ್ಳಿ 14ಇನ್ನಿಂಗ್ಸ್‌ನಲ್ಲಿ ಈ ದಾಖಲೆಯನ್ನು ಮಾಡಿದ್ದಾರೆ

#4 2019ರ ಟಾಪ್ ಸ್ಕೋರರ್ ಆಗ್ತಾರಾ ಅಗರ್ವಾಲ್
ನಂಬರ್ 1 ಟೆಸ್ಟ್ ಆಟಗಾರ ಸ್ಟೀವ್ ಸ್ಮಿತ್ ಈ ವರ್ಷದ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ. ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಅಗರ್ವಾಲ್ ಹೊಂದಿದ್ದಾರೆ. 7ಟೆಸ್ಟ್‌ಗಳಲ್ಲಿ 740 ರನ್‌ಗಳಿಸಿರುವ ಅಗರ್ವಾಲ್ ಎರಡನೇ ಅತಿ ಹೆಚ್ಚು ರಮ್ ಗಳಿಸಿರುವ ಆಟಗಾರನಾಗಿದ್ದಾರೆ. 2019ರಲ್ಲಿ 740ರನ್ ಗಳಿಸಿರುವ ಮಯಾಂಕ್ ಅಗರ್ವಾಲ್, ಸ್ಮಿತ್‌ಗಿಂತ ಕೇವಲ 35ರನ್ ಹಿಂದಿದ್ದಾರೆ.

#5 ಇರ್ಫಾನ್ ಪಠಾಣ್ ದಾಖಲೆ ಹಿಂದಿಕ್ಕಲು ಅಶ್ವಿನ್-ಇಶಾಂತ್ ಕಣ್ಣು
ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಮತ್ತು ವೇಗಿ ಇಶಾಂತ್ ಶರ್ಮಾ ಬಾಂಗ್ಲಾ ದೇಶದ ವಿರುದ್ಧದ ಟೆಸ್ಟ್‌ನಲ್ಲಿ ತಲಾ 16 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಶ್ವಿನ್ ಕೇವಲ 3ಪಂದ್ಯಗಳಿಂದ ಈ ಸಾಧನೆ ಮಾಡಿದರೆ ಇಶಾಂತ್ ಶರ್ಮಾ 6ಪಂದ್ಯಗಳಲ್ಲಿ 16ವಿಕೆಟ್ ತೆಗೆದಿದ್ದಾರೆ. ವೇಗಿ ಇರ್ಫಾನ್ ಪಠಾನ್ 18ವಿಕೆಟ್ ಕಬಳಿಸಿರೋದು ಬಾಂಗ್ಲಾ ವಿರುದ್ಧ ಭಾರತೀಯ ಬೌಲರ್‌ನ ಉತ್ತಮ ಸಾಧನೆಯಾಗಿದೆ. ಇಬ್ಬರೂ ಬೌಲರ್‌ಗಳು ಈ ದಾಖಲೆಗೆ ಕೇವಲ ಕೇವಲ ಎರಡು ಹೆಜ್ಜೆಯಷ್ಟೇ ಹಿಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications