ಜಗತ್ತಿನ ಅತಿ ಎತ್ತರದ ಕ್ರಿಕೆಟರ್ ಬಗ್ಗೆ ಗೊತ್ತೇ?
ಕ್ರಿಕೆಟ್ ಜಗತ್ತಿನಲ್ಲಿ ಎತ್ತರದ ಮತ್ತು ಕುಳ್ಳನೆಯ ಆಟಗಾರರನ್ನು ನೋಡಿದ್ದೀರಿ. ಸಾಮಾನ್ಯವಾಗಿ ವೇಗದ ಬೌಲರ್‌ಗಳು ಎತ್ತರದ ನಿಲುವು ಹೊಂದಿರುತ್ತಾರೆ. ಅಂತಹ ಎತ್ತರದ ನಿಲುವಿನ ಅನೇಕ ದಿಗ್ಗಜ ಆಟಗಾರರನ್ನು ನೋಡಿದ್ದೇವೆ. ಆದರೆ ಇಷ್ಟು ಎತ್ತರದ ಆಟಗಾರ ಜಗತ್ತಿನ ಯಾವ ಕ್ರಿಕೆಟ್ ತಂಡದಲ್ಲಿಯೂ ಆಡಿಲ್ಲ. ಪಾಕಿಸ್ತಾನದ ಅತ್ತರದ ಆಟಗಾರನೊಬ್ಬ ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕಂಡಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡ ಕಂಡ ಎತ್ತರದ ಆಟಗಾರ ಎಂದರೆ ಮೊಹಮ್ಮದ್ ಇರ್ಫಾನ್. 7 ಅಡಿ 1 ಇಂಚ್ ಎತ್ತರದ ಮೊಹಮ್ಮದ್ ಇರ್ಫಾನ್ 2010ರಲ್ಲಿ ಬೆಳಕಿಗೆ ಬಂದಿದ್ದರು. 2012ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಟಿ20 ಪದಾರ್ಪಣೆ ಮಾಡಿದ್ದರು. ಮರು ವರ್ಷ ಅವರು ಟೆಸ್ಟ್ ತಂಡದಲ್ಲಿಯೂ ಜಾಗ ಪಡೆದಿದ್ದರು. ಟೆಸ್ಟ್‌ನಲ್ಲಿ 10, ಏಕದಿನ ಕ್ರಿಕೆಟ್‌ನಲ್ಲಿ 83 ಮತ್ತು ಟಿ20ಯಲ್ಲಿ 16 ವಿಕೆಟ್‌ಗಳನ್ನು ಅವರು ಪಡೆದಿದ್ದರು. ಅತ್ಯಂತ ಎತ್ತರದ ಕ್ರಿಕೆಟರ್ ಎಂಬ ಕಾರಣಕ್ಕೆ ಅವರು ಹೆಚ್ಚು ಸುದ್ದಿಯಾಗಿದ್ದರು. ಈಗ ಅವರನ್ನೂ ಮೀರಿಸುವ ಎತ್ತರದ ಆಟಗಾರ ರಾಷ್ಟ್ರೀಯ ತಂಡಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ. ಮುಂದೆ ಓದಿ.

7.6 ಅಡಿ ಎತ್ತರದ ಗುಜ್ಜರ್
ಪಾಕಿಸ್ತಾನದ ಲಾಹೋರ್‌ನವರಾದ ಮುದಸ್ಸರ್ ಗುಜ್ಜರ್ ಅವರ ಪಕ್ಕದಲ್ಲಿ ಸಾಮಾನ್ಯರು ನಿಂತರೆ ಅವರ ಮುಖ ದಿಟ್ಟಿಸಲು ಹೋದರೆ ಕತ್ತು ನೋಯುವುದು ಖಚಿತ. ಏಕೆಂದರೆ ಮುದಸ್ಸರ್ ಗುಜ್ಜರ್ 7.6 ಅಡಿ ಎತ್ತರವಿದ್ದಾರೆ. ಕ್ರಿಕೆಟ್‌ನಲ್ಲಿ ಆಸಕ್ತಿಯುಳ್ಳ ಗುಜ್ಜರ್, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮೂಲಕ ಅತ್ಯಂತ ಎತ್ತರದ ಕ್ರಿಕೆಟರ್ ಎನಿಸಿಕೊಳ್ಳುವ ತವಕ ಹೊಂದಿದ್ದಾರೆ.

ಲಾಹೋರ್ ತಂಡಕ್ಕೆ ಆಡುವ ಬಯಕೆ
ಮುದಸ್ಸರ್ ಗುಜ್ಜರ್ ಧರಿಸುವ ಶೂಸ್ ಗಾತ್ರ ಎಷ್ಟು ಗೊತ್ತೇ? 23.5! ಒಂದು ವೇಳೆ ಅವರಿಗೆ ಸೂಕ್ತ ಬೆಂಬಲ ಮತ್ತು ತರಬೇತಿ ಸಿಕ್ಕರೆ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ಛಳಕು ಹುಟ್ಟಿಸುವ ಬೌಲರ್ ಆಗಬಹುದು. ಸದ್ಯಕ್ಕೀಗ ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶೋಯೆಬ್ ಅಖ್ತರ್ ನೇತೃತ್ವದ ಲಾಹೋರ್ ಖಲಂದರ್ ಪರ ಆಡಲು ಬಯಸುತ್ತಿದ್ದಾರೆ. ವೇಗದ ಬೌಲರ್ ಆಗಿ ಪಾಕಿಸ್ತಾನ ತಂಡಕ್ಕೆ ಆಡುವ ಉದ್ದೇಶ ಅವರಲ್ಲಿದೆ.
ಆತ ಆಡಿದ್ದು ಸಾಕು, ತಂಡದಿಂದ ಕೈಬಿಡಿ: ಪಂಜಾಬ್ ತಂಡಕ್ಕೆ ಪೀಟರ್ಸನ್ ಸಲಹೆ

ತಂದೆ ತಾಯಿ ಎತ್ತರವಿಲ್ಲ
ವಿಶೇಷವೆಂದರೆ ಮುದಸ್ಸರ್ ಗುಜ್ಜರ್ ಅವರ ತಂದೆ ತಾಯಿಯೇನೂ ತುಂಬಾ ಎತ್ತರದವರಲ್ಲ. ಗುಜ್ಜರ್ ತಂದೆ ಹಾಶಿಮ್ ಮೊಹಮ್ಮದ್ 5.6 ಅಡಿ ಎತ್ತರವಿದ್ದರೆ, ಆತನ ತಾಯಿ ಪರ್ವೀನ್ 5.3 ಅಡಿ ಎತ್ತರವಿದ್ದಾರಷ್ಟೇ. ಹೈಸ್ಕೂಲಿಗೆ ಸೇರುವಾಗಲೇ ಗುಜ್ಜರ್ ಏಳು ಅಡಿಗೂ ಎತ್ತರವಿದ್ದರಂತೆ.

ಎತ್ತರದ ವಿದ್ಯಾರ್ಥಿ
'ಶಾಲೆ ಮತ್ತು ಊರಿನಲ್ಲಿ ನಾನೇ ಅತ್ಯಂತ ಎತ್ತರದ ವಿದ್ಯಾರ್ಥಿಯಾಗಿದ್ದೆ. ಹತ್ತನೇ ವಯಸ್ಸಿನಲ್ಲಿಯೇ ನಾನು ಆರು ಅಡಿ ಎತ್ತರವಿದ್ದೆ. ಹೈಸ್ಕೂಲಿಗೆ ಸೇರುವಾಗ ಏಳು ಅಡಿಗೂ ಹೆಚ್ಚು ಎತ್ತರವಾಗಿದ್ದೆ. ನಾನು ಎತ್ತರಕ್ಕೆ ಬೆಳೆಯುತ್ತಲೇ ಹೋಗಿದ್ದು ಪೋಷಕರಿಗೆ ಚಿಂತೆಯುಂಟುಮಾಡಿತ್ತು. ನನ್ನ ಸಹೋದರರಿಗಿಂತಲೂ ನಾನು ಏಕೆ ಅಷ್ಟು ಎತ್ತರ ಬೆಳೆಯುತ್ತಿದ್ದೇನೆ ಎನ್ನುವುದು ಅವರಿಗೆ ಅರ್ಥವಾಗಲಿಲ್ಲ. ಭವಿಷ್ಯದಲ್ಲಿ ತೊಂದರೆಯಾಗುವ ಭಯವೂ ಅವರಲ್ಲಿತ್ತು' ಎಂದು ಗುಜ್ಜರ್ ತಿಳಿಸಿದ್ದಾರೆ.

ಹಾರ್ಮೋನ್ ವ್ಯತ್ಯಾಸ ಕಾರಣ
'ನನ್ನಲ್ಲಿ ಹಾರ್ಮೋನ್‌ಗೆ ಸಂಬಂಧಿಸಿದ ವ್ಯತ್ಯಾಸಗಳಾಗಿರುವುದರಿಂದ ಈ ರೀತಿ ಎತ್ತರಕ್ಕೆ ಬೆಳೆಯುತ್ತಿದ್ದೇನೆ ಎಂದು ವೈದ್ಯರು ಹೇಳಿದ್ದರು. ಆದರೆ ಏಳು ಅಡಿಗೂ ಎತ್ತರ ಬೆಳೆಯುತ್ತೇನೆ ಎಂದು ತಿಳಿಸಿರಲಿಲ್ಲ. ಒಂದೂವರೆ ವರ್ಷದ ಹಿಂದೆ ಎತ್ತರ ನೋಡಿದಾಗ 7.6 ಅಡಿ ಎತ್ತರವಿದ್ದೆ. ಅಲ್ಲಿಂದ ನಾನು ಮತ್ತೆ ಬೆಳೆದಿಲ್ಲ' ಎಂದು ಹೇಳಿದ್ದಾರೆ. ತಮಗೆ ಬೇಕಾದ ಗಾತ್ರದ ಶೂಸ್ ಮತ್ತು ಬಟ್ಟೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ರಿಕ್ಷಾ ಬಸ್‌ಗಳಲ್ಲಿ ಕೂರುವುದೂ ಕಷ್ಟ ಎಂದು ಅವರು ಕಷ್ಟ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications