7 ಸರಣಿಗೆ 7 ನಾಯಕರು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು?

ಟೀಂ ಇಂಡಿಯಾದಲ್ಲಿ ಕಳೆದೊಂದು ವರ್ಷದಲ್ಲಂತೂ ಆಟಗಾರರ ಬದಲಾವಣೆಗಿಂತ, ನಾಯಕರ ಬದಲಾವಣೆಯೇ ಹೆಚ್ಚಾಗಿದೆ. ಪ್ರತಿ ಸರಣಿಗೂ ಒಬ್ಬ ನಾಯಕ ತಂಡದ ಚುಕ್ಕಾಣಿ ಹಿಡಿಯುತ್ತಿದ್ದಾನೆ. ತಂಡಕ್ಕೆ ಒಬ್ಬನೆ ನಾಯಕನಿದ್ದರೆ ಉತ್ತಮ ಎಂದಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾದಲ್ಲಿ ಚಾಲ್ತಿಯಲ್ಲಿರುವ ನಾಯಕರ ಬದಲಾವಣೆ ಪರ್ವದ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಏಳು ಸರಣಿಗೆ ಏಳು ಟೀಂ ಇಂಡಿಯಾ ನಾಯಕರ ಬದಲಾವಣೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದಾದಾ ಗಾಯಗಳು ಮತ್ತು ಇತರ ಕಾರಣಗಳಿಂದ ಇದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಶುರುವಾಯ್ತು ನಾಯಕತ್ವದ ಬದಲಾವಣೆ
ಹೌದು ವಿರಾಟ್ ಕೊಹ್ಲಿ ಟಿ20 ನಾಯಕತ್ವ, ಏಕದಿನ ಹಾಗೂ ಕೊನೆಗೆ ಟೆಸ್ಟ್ ನಾಯಕತ್ವವನ್ನೂ ಬಿಟ್ಟುಕೊಟ್ಟ ಬಳಿಕ ರೋಹಿತ್ ಶರ್ಮಾರನ್ನು ಮೂರು ಫಾರ್ಮೆಟ್ ನಾಯಕನನ್ನಾಗಿ ಘೋಷಿಸಲಾಯಿತು. ಆದ್ರೆ ಆ ಬಳಿಕ ರೋಹಿತ್ ನಾಯಕತ್ವ ನಿಭಾಯಿಸಿದಕ್ಕಿಂತ ಬೇರೆ ಆಟಗಾರರು ನಾಯಕರಾಗಿದ್ದೇ ಹೆಚ್ಚು. ಕೆ.ಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೂರು ಫಾರ್ಮೆಟ್‌ಗೆ ಬೇರೆ ಬೇರೆ ನಾಯಕರು ಟೀಂ ಇಂಡಿಯಾವನ್ನ ಮುನ್ನಡೆಸಿದ ಉದಾಹರಣೆ ಇದೆ.

ಇದು ನಿಜಕ್ಕೂ ಉತ್ತಮ ನಿದರ್ಶನವಲ್ಲ ಎಂದು ಒಪ್ಪಿಕೊಂಡ ದಾದಾ
ಹೀಗೆ ಪದೇ ಪದೇ ಟೀಂ ಇಂಡಿಯಾ ನಾಯಕರ ಬದಲಾವಣೆ ಸೂಕ್ತವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಪ್ಪಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹೀಗೆ ಏಳು ನಾಯಕರನ್ನು ಹೊಂದುವುದು ಸರಿಯಲ್ಲ. ಆದ್ರೆ ಪರಿಸ್ಥಿತಿಯಿಂದಾಗಿ ಇದು ಅನಿವಾರ್ಯವಾಗಿ ಇದು ಸಂಭವಿಸಿದೆ ಎಂದಿದ್ದಾರೆ.
"ರೋಹಿತ್ ದಕ್ಷಿಣ ಆಫ್ರಿಕಾದಲ್ಲಿ ವೈಟ್-ಬಾಲ್‌ನಲ್ಲಿ ಮುನ್ನಡೆಸಲು ಸಿದ್ಧರಾಗಿದ್ದರು. ಆದ್ರೆ ಪ್ರವಾಸದ ಮೊದಲು ಗಾಯಗೊಂಡರು. ಆದ್ದರಿಂದ ನಾವು ಏಕದಿನಗಳಲ್ಲಿ ಕೆಎಲ್ (ರಾಹುಲ್) ಮುನ್ನಡೆಸಿದ್ದೇವೆ ಮತ್ತು ನಂತರ ಇತ್ತೀಚಿನ ದಕ್ಷಿಣ ಆಫ್ರಿಕಾದ ಹೋಮ್ ಸರಣಿಗಾಗಿ, ಸರಣಿ ಪ್ರಾರಂಭವಾಗುವ ಒಂದು ದಿನ ಮೊದಲು KL ಗಾಯಗೊಂಡರು " ಎಂದು ಗಂಗೂಲಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.
ಈತನನ್ನು ಹೊರಹಾಕಿ ಕೊಹ್ಲಿಗೆ ಆರಂಭಿಕನ ಸ್ಥಾನ ಕೊಡಿ ರನ್ ಹೊಳೆ ಹರಿಯುತ್ತದೆ ಎಂದ ಇಂಗ್ಲೆಂಡ್ ಕ್ರಿಕೆಟಿಗ!

ಆಟಗಾರರಿಗೆ ವಿಶ್ರಾಂತಿ ನೀಡುವುದು ಅನಿವಾರ್ಯವಾಗಿದೆ ಎಂದ ಸೌರವ್
ಕ್ಯಾಲೆಂಡರ್ ಇಯರ್‌ನಲ್ಲಿ ನಿರಂತರವಾದ ಸರಣಿಗಳಿರುವುದರಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಅನಿವಾರ್ಯವಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಇದರ ಜೊತೆಗೆ ಇದೇ ಸಮಯದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸುತ್ತದೆ ಎಂಬುದು ಗಂಗೂಲಿ ಅಭಿಪ್ರಾಯವಾಗಿದೆ.
ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿಗೆ ವಿಂಡೀಸ್ ವಿರುದ್ಧದ 50 ಓವರ್‌ಗಳ ಫಾರ್ಮೆಟ್ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಶಿಖರ್ ಧವನ್ ನಾಯಕರಾಗಿ ತಂಡವನ್ನ ಮುನ್ನಡೆಸಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಕೊಹ್ಲಿಗೆ ವಿಶ್ರಾಂತಿ? ಅಶ್ವಿನ್ ಟಿ20 ಕಂಬ್ಯಾಕ್ ಸಾಧ್ಯತೆ!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್
ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಪ್ರಕಟಗೊಂಡಿದೆ. ಆಟಗಾರರ ಹೆಸರು ಈ ಕೆಳಗಿನಂತಿದೆ.
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್ ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications