
ಟಿ20 ಸರಣಿಯಿಂದಲೂ ಹೊರಗಿರಲು ಕೊಹ್ಲಿ ಯೋಚನೆ!
ಈಗಾಗಲೇ ಮುಂಬರುವ ವಿಂಡೀಸ್ ಸರಣಿಗೆ ತಂಡ ಆಯ್ಕೆಗೊಂಡಿದ್ದು, ಜುಲೈ 11ರಂದು ಟಿ20 ತಂಡವನ್ನೂ ಬಿಸಿಸಿಐ ಆಯ್ಕೆಗಾರರ ಸಮಿತಿ ಪ್ರಕಟಿಸುವ ಸಾಧ್ಯತೆಯಿದೆ. ಇದರ ನಡುವೆ ಕೊಹ್ಲಿ ಚುಟುಕು ಕ್ರಿಕೆಟ್ ಸರಣಿಗೂ ವಿಶ್ರಾಂತಿ ಬಯಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಕೆರಿಬಿಯನ್ ವಿರುದ್ಧದ ಸಂಪೂರ್ಣ ವೈಟ್ ಬಾಲ್ ಕ್ರಿಕೆಟ್ ಸರಣಿಯಿಂದ ಕೊಹ್ಲಿ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಇತ್ತೀಚೆಗೆಷ್ಟೇ ಏಕದಿನ ಸರಣಿಗೆ ತಂಡ ಘೋಷಿಸಿದ್ದ ಬಿಸಿಸಿಐ
ಜುಲೈ 6ರಂದು ಬಿಸಿಸಿಐ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ 16 ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿದರು. ಶಿಖರ್ ಧವನ್ ತಂಡವನ್ನ ಮುನ್ನಡೆಸಲಿದ್ದು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡದ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ. ಆದ್ರೆ ಆಶ್ಚರ್ಯದ ವಿಚಾರವೆಂದ್ರೆ ಎಲ್ಲಾ ಸ್ಟಾರ್ ಆಟಗಾರರಿಗೆ ಮತ್ತೊಮ್ಮೆ ವಿಶ್ರಾಂತಿ ನೀಡಿರುವುದು.
ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿಗೆ 50 ಓವರ್‌ಗಳ ಫಾರ್ಮೆಟ್‌ಗೆ ವಿಶ್ರಾಂತಿ ನೀಡಲಾಗಿದೆ.
ಒಂದಲ್ಲ, ಎರಡಲ್ಲ, 6 ಕ್ಯಾಚ್‌ಗಳನ್ನ ಕೈ ಚೆಲ್ಲಿದ್ರೂ, ಭಾರತ 50 ರನ್‌ನಿಂದ ಗೆದ್ದಿದ್ದೇಗೆ?

ಕೊಹ್ಲಿ ಟಿ20 ಸರಣಿಯಿಂದಲೂ ಹೊರಗಿರಲು ನಿರ್ಧಾರ: ಬಿಸಿಸಿಐ ಮೂಲ
ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಅನ್ನು ಎದುರಿಸಿದ್ದಾರೆ. ಬ್ಯಾಟ್‌ನಿಂದ ಸೆಂಚುರಿ ಸಿಡಿಸಿ ಎರಡೂವರೆ ವರ್ಷಗಳಾಗಿದೆ. 70 ಅಂತರಾಷ್ಟ್ರೀಯ ಶತಕ ಸಿಡಿಸಿರುವ ವಿರಾಟ್ ಅರ್ಧಶತಕ ಗಳಿಸಿದ್ರೆ ಹೆಚ್ಚು ಅನ್ನುವಂತಾಗಿದ್ದಾರೆ. ಸೆಂಚುರಿ ಎಲ್ಲವೂ ದೂರದ ಮಾತು ಎಂಬಂತಾಗಿದೆ.
ಹೀಗಿರುವಾಗ ಸತತ ಟೀಕೆಗೆ ಗುರಿಯಾಗಿರುವ ಕೊಹ್ಲಿ, ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗಿರಲು ನಿರ್ಧರಿಸಿದ್ದಾರೆ.
''ನಾಯಕನ ಜೊತೆಗೆ ಕೊಹ್ಲಿ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಅವರಿಗೆ ಏಕದಿನ ಸರಣಿಗೆ ವಿಶ್ರಾಂತಿ ನೀಡುವುದು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವಾಗಿದೆ ಎಂದು ಬಿಸಿಸಿಐನ ಹಿರಿಯ ಮೂಲವೊಂದು ಅನಾಮಧೇಯತೆಯ ಷರತ್ತುಗಳ ಮೇಲೆ ಪಿಟಿಐಗೆ ತಿಳಿಸಿದೆ. ಆದಾಗ್ಯೂ ಟಿ20 ಅಂತರಾಷ್ಟ್ರೀಯ ಸರಣಿಗಾಗಿ, ಉಳಿದವರೆಲ್ಲರೂ ಆಡುತ್ತಿದ್ದಾರೆ ಆದರೆ ಕೊಹ್ಲಿ ಸ್ವತಃ ವಿರಾಮ ಕೇಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ ಅವರು ಎಲ್ಲಾ ಸರಣಿಗಳಿಗೆ ಲಭ್ಯವಿರುತ್ತಾರೆ'' ಎಂದು ಅವರು ತಿಳಿಸಿದ್ದಾರೆ.
ಈತನನ್ನು ಹೊರಹಾಕಿ ಕೊಹ್ಲಿಗೆ ಆರಂಭಿಕನ ಸ್ಥಾನ ಕೊಡಿ ರನ್ ಹೊಳೆ ಹರಿಯುತ್ತದೆ ಎಂದ ಇಂಗ್ಲೆಂಡ್ ಕ್ರಿಕೆಟಿಗ!

ರವಿಚಂದ್ರನ್ ಅಶ್ವಿನ್ ಟಿ20 ಕಂಬ್ಯಾಕ್ ಸಾಧ್ಯತೆ!
ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟಿ20 ಫಾರ್ಮೆಟ್‌ಗೆ ಮತ್ತೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
"ಅಶ್ವಿನ್ ಮುಂಬರುವ ಯೋಜನೆಯಲ್ಲಿ ತುಂಬಾ ಇದ್ದಾರೆ ಮತ್ತು ಅವರು ವೆಸ್ಟ್ ಇಂಡೀಸ್‌ನಲ್ಲಿ ಟಿ20 ಸರಣಿಯನ್ನು ಆಡಲಿದ್ದಾರೆ. ಅಲ್ಲದೆ, ವಾಷಿಂಗ್ಟನ್ ಸುಂದರ್ ಇನ್ನೂ ಆಡಲು ಫಿಟ್ ಆಗಿಲ್ಲ ಮತ್ತು ಅವರು ಫಿಟ್ ಆಗುವ ಹೊತ್ತಿಗೆ ಅವರು ಕೌಂಟಿ ಚಾಂಪಿಯನ್‌ಶಿಪ್ ಮತ್ತು ರಾಯಲ್ ಲಂಡನ್ ಕಪ್‌ನಲ್ಲಿ ಲಂಕಾಶೈರ್‌ಗಾಗಿ ಆಡಲಿದ್ದಾರೆ, "ಎಂದು ಮೂಲಗಳು ತಿಳಿಸಿವೆ.
ಭಾರತವು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಪ್ರವಾಸದ ಬಳಿಕ ಕೆರಿಬಿಯನ್ ನಾಡಿಗೆ ಹಾರಲಿದೆ. ವೆಸ್ಟ್ ಇಂಡೀಸ್‌ನಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ.


Click it and Unblock the Notifications












