ತಂಗಲು ಜಾಗವಿಲ್ಲದೆ ಪರದಾಡಿದ ಎಂಟಡಿ ಎತ್ತರದ ಅಫ್ಘಾನ್ ಕ್ರಿಕೆಟ್ ಅಭಿಮಾನಿ!

ಲಕ್ನೋ, ನವೆಂಬರ್ 7: ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ವೀಕ್ಷಿಸಲು ಭಾರತಕ್ಕೆ ಬಂದಿರುವ ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗೆ ತನ್ನ ಎತ್ತರವೇ ಸಮಸ್ಯೆಯಾಗಿ ಪರಿಣಮಿಸಿದೆ. ಸುಮಾರು 8 ಅಡಿ ಎತ್ತರವಿರುವ ಆತನಿಗೆ ತಂಗಲು ಹೋಟೆಲ್‌ಗಳೇ ಸಿಗುತ್ತಿಲ್ಲ.
ಶೇರ್ ಖಾನ್ ಎನ್ನುವ, ಅಫ್ಘಾನಿಸ್ತಾನ ಕ್ರಿಕೆಟ್ ಪ್ರೇಮಿ ಸರಿಯಾಗಿ 8 ಅಡಿ, 2 ಇಂಚು ಎತ್ತರವಿದ್ದಾರೆ. ಕ್ರಿಕೆಟ್ ಸರಣಿ ವೀಕ್ಷಿಸಲು ಭಾರತಕ್ಕೆ ಬಂದಿರುವ ಅವರು ಎಲ್ಲಾದರೂ ತಂಗಲೇಬೇಕಲ್ಲ? ಆದರೆ ಹೋಟೆಲ್‌ಗಳಲ್ಲಿ ತಂಗಲು ಇವರಿಗೆ ಅನುಮತಿಯೇ ಸಿಗುತ್ತಿಲ್ಲ. ಈ ವ್ಯಕ್ತಿಯ ಎತ್ತರ ನೋಡಿಯೇ ಹೋಟೆಲ್‌ನವರು ತಂಗಲು ಅವಕಾಶ ನೀಡಲು ಹಿಂಜರಿಯುತ್ತಿದ್ದಾರೆ.
ಉಳಿದುಕೊಳ್ಳುವುದಕ್ಕೋಸ್ಕರ ಅಲ್ಲಿಲ್ಲಿ ಹೋಟೆಲ್‌ಗಳಿಗೆ ಅಲೆದಾಡಿ ಖಾನ್ ಸುಸ್ತಾಗಿದ್ದಾರೆ. ಹೋಟೆಲ್‌ಗಳೇ ಸಿಗದೆ ನಿರಾಶೆಗೊಳಗಾಗಿರುವ ಖಾನ್ ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರ ಸಹಾಯದಿಂದ ಖಾನ್, ನಾಕಾದಲ್ಲಿರುವ ಹೋಟೆಲ್ ರಾಜಧಾನಿಯಲ್ಲಿ ತಂಗಲು ವ್ಯವಸ್ಥೆಯಾಗಿತ್ತು.
ಅಲ್ಲಿಗೆ ಸಮಸ್ಯೆ ಮುಗಿಯಲಿಲ್ಲ. ಶೇರ್ ಖಾನ್ ಅವರ ನೀಳಕಾಯ ನೋಡುವುದಕ್ಕೋಸ್ಕರ ಖಾನ್ ತಂಗಿದ್ದ ಆ ಹೋಟೆಲ್‌ನ ಸಮೀಪ ನೂರಿನ್ನೂರು ಜನ ಸೇರಬೇಕೆ?!. 'ಖಾನ್ ನೋಡಲು ಸುಮಾರು 200 ಜನ ಹೋಟೆಲ್ ಸಮೀಪ ಸೇರಿದ್ದರಿಂದ ಅವರಿಂದ ಬಹಳ ಸಮಸ್ಯೆಯಾಗಿತ್ತು,' ಎಂದು ಹೋಟೆಲ್ ಓನರ್ ರಾನು ಪ್ರತಿಕ್ರಿಯಿಸಿದ್ದಾರೆ.
ಶೇರ್ ಖಾನ್ ನೋಡುವುದಕ್ಕೋಸ್ಕರ ಹೋಟೆಲ್ ಸಮೀಪ ಜನ ಜಮಾಯಿಸಿದ್ದರಿಂದ ಮಂಗಳವಾರ (ನವೆಂಬರ್ 5) ಪೊಲೀಸರು ಮತ್ತೆ ಖಾನ್ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಏಕಾನ ಅರೇನಾಗೆ ಕೊಂಡೊಯ್ದು ಬಿಟ್ಟಿದ್ದಾರೆ. ಅಂದ್ಹಾಗೆ ಇತ್ತಂಡಗಳ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬುಧವಾರ (ನವೆಂಬರ್ 6) ನಡೆದ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ 7 ವಿಕೆಟ್‌ಗಳಿಂದ ಗೆದ್ದುಕೊಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications