Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಹಾಗೂ ಎಬಿಡಿ 'ಡಕ್ ಔಟ್' ರಹಸ್ಯ ಟ್ವಿಟ್ಟರಲ್ಲಿ ಬಹಿರಂಗ

ಲಂಡನ್, ಜೂನ್ 09: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದ ಅಗ್ರಗಣ್ಯ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಹಾಗೂ ಎಬ್ ಎಬಿ ಡಿವಿಲಿಯರ್ಸ್ ಅವರು ಡಕ್ ಔಟ್ ಆಗಿದ್ದರ ರಹಸ್ಯವನ್ನು ಸಾಮಾಜಿಕ ಜಾಲ ತಾಣಗಳು ಬಿಚ್ಚಿಟ್ಟಿವೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಕೊಹ್ಲಿ ಅವರು ಶೂನ್ಯಕ್ಕೆ ಔಟಾಗುವುದಕ್ಕೆ ಈ ಪಾಕಿಸ್ತಾನ ಕ್ರೀಡಾ ವರದಿಗಾರ್ತಿ/ವಿಶ್ಲೇಷಕಿಯೇ ಕಾರಣ ಎಂದು ಸಾಮಾಜಿಕ ಜಾಲ ತಾಣಗಳು ತೀರ್ಪು ನೀಡಿವೆ.

[ಚಾಂಪಿಯನ್ಸ್ ಟ್ರೋಫಿಯ ಅಪರೂಪದ ದೃಶ್ಯ]

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಮೈದಾನಕ್ಕೆ ಬರುವ ದಾರಿಯಲ್ಲಿ ಪಾಕಿಸ್ತಾನದ ಪತ್ರಕರ್ತೆ ಝೈನಬ್ ಅಬ್ಬಾಸ್ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. ಈ ಚಿತ್ರವನ್ನು ಅಬ್ಬಾಸ್ ಅವರು ಟ್ವಿಟ್ಟರ್ ನಲ್ಲಿ ಹಾಕಿದ್ದರು.

ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್ ಕೂಡಾ ಈಕೆ ಜತೆ ಸೆಲ್ಫಿ ತೆಗೆಸಿಕೊಂಡು ನಂತರ ಮೈದಾನಕ್ಕೆ ಇಳಿದು ಸೊನ್ನೆ ಸುತ್ತಿದ್ದರು. ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲು ಎಬಿಡಿ ಸೆಲ್ಫಿ ತೆಗೆಸಿಕೊಂಡಿದ್ದರು. ಇದು ಕಾಕತಾಳೀಯವಾಗಿದ್ದರೂ ಕೊಹ್ಲಿ ಫ್ಯಾನ್ಸ್ ಮಾತ್ರ ಈಕೆ ಜತೆ ಸೆಲ್ಫಿ ತೆಗೆಸಿಕೊಂಡಿದ್ದೇ ಅನಿಷ್ಟವಾಯಿತು ಎಂದು ತೀರ್ಪು ನೀಡಿದ್ದಾರೆ.

ಝೈನಬ್ ಅಬ್ಬಾಸ್ ಜತೆ ಒಂದು ಸೆಲ್ಫಿ

ಝೈನಬ್ ಅಬ್ಬಾಸ್ ಜತೆ ಒಂದು ಸೆಲ್ಫಿ

ಟೀಂ ಇಂಡಿಯಾ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಜತೆ ದುನ್ಯಾ ನ್ಯೂಸ್ ನ ಕ್ರೀಡಾ ವಿಶ್ಲೇಷಕಿ ಝೈನಬ್ ಅಬ್ಬಾಸ್ ಜತೆ ಒಂದು ಸೆಲ್ಫಿ ತೆಗೆಸಿಕೊಂಡಿದ್ದು ಹೀಗೆ, ಚಿತ್ರಕೃಪೆ: ಅಬ್ಬಾಸ್ ಅವರ ಟ್ವಿಟ್ಟರ್ ಐಡಿ

ಕೊಹ್ಲಿ ಶೂನ್ಯ ಗಳಿಸಿದ್ದು ಅಪರೂಪ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಐದು ಎಸೆತ ಎದುರಿಸಿ ಡಕ್ ಔಟ್ ಆಗಿದ್ದು ಅಭಿಮಾನಿಗಳಿಗೆ ಆಘಾತ ತಂದಿತು. 2014ರ ನಂತರ ಕೊಹ್ಲಿ ಈ ಪಂದ್ಯದಲ್ಲೇ ಶೂನ್ಯ ಸುತ್ತಿದ್ದು, ಈ ನಡುವೆ 8 ಶತಕಗಳನ್ನು ಸಿಡಿಸಿದ್ದಾರೆ.

ಮುಂದಿನ ಟಾರ್ಗೆಟ್

ಝನೈಬ್ ಅಬ್ಬಾಸ್ ಅವರ ಮುಂದಿನ ಟಾರ್ಗೆಟ್ ಶ್ರೀಲಂಕಾ ತಂಡ ಆಗಲಿ, ಉಳಿದ ತಂಡಗಳಿಗೆ ಇದರಿಂದ ಅನುಕೂಲ.

ಎಬಿಡಿ ಹೊಗಳಿದ್ದ ಝನೈಬ್

ಎಬಿ ಡಿ ವಿಲಿಯರ್ಸ್ ಹೊಗಳಿ, ಸೆಲ್ಫಿ ಚಿತ್ರವನ್ನು ಟ್ವೀಟ್ ಮಾಡಿದ್ದ ಅಬ್ಬಾಸ್.

ಆಕೆಯನ್ನು ಬ್ಯಾನ್ ಮಾಡಿ

ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಡಕ್ ಔಟ್ ಆಗುವುದು ಅಪರೂಪ, ಇದಕ್ಕೆ ಕಾರಣವಾದ ಝನೈಬ್ ರನ್ನು ಬ್ಯಾನ್ ಮಾಡಿ ಎಂದ ಟ್ವಿಟ್ಟಿಗರು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+