Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್ ಟ್ರೋಫಿಯ ಅಪರೂಪದ ದೃಶ್ಯ ಮಿಸ್ ಮಾಡದೆ ನೋಡಿ

ಲಂಡನ್, ಜೂನ್ 09 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಅಪರೂಪದ ಪ್ರಸಂಗವೊಂದಕ್ಕೆ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಸಾಕ್ಷಿಯಾಯಿತು.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಐದು ಎಸೆತ ಎದುರಿಸಿ ಡಕ್ ಔಟ್ ಆಗಿದ್ದು ಅಭಿಮಾನಿಗಳಿಗೆ ಆಘಾತ ತಂದಿತು. 2014ರ ನಂತರ ಕೊಹ್ಲಿ ಈ ಪಂದ್ಯದಲ್ಲೇ ಶೂನ್ಯ ಸುತ್ತಿದ್ದು, ಈ ನಡುವೆ 8 ಶತಕಗಳನ್ನು ಸಿಡಿಸಿದ್ದಾರೆ.

ಭಾರತದ ಆರಂಭಿಕ ಜೋಡಿ- ರೋಹಿತ್ -ಶಿಖರ್ ರಿಂದ ಹೊಸ ದಾಖಲೆ

ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು ಮೊದಲ ವಿಕೆಟ್ ಗೆ 138ರನ್ ಜೊತೆಯಾಟ ಸಾಧಿಸಿ ದಾಖಲೆ ನಿರ್ಮಿಸಿದ್ದರು. ರೋಹಿತ್ 78ರನ್ ಗಳಿಸಿದ್ದಾಗ ಲಸಿತ್ ಮಾಲಿಂಗಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳಿದರು. ನಾಯಕ ವಿರಾಟ್ ಕೊಹ್ಲಿ ಅವರು ನಿರೀಕ್ಷೆಯಂತೆ ಮೂರನೇ ಕ್ರಮಾಂಕದಲ್ಲಿ ಆಡಲು ಕ್ರೀಸ್ ಗೆ ಬಂದರು.

CT 2017 : A Rare moment Virat Kohli got dismissed for a duck

ಪಾಕಿಸ್ತಾನದ ವಿರುದ್ಧ ಭರ್ಜರಿ 87ರನ್ ಗಳಿಸಿದ್ದ ಕೊಹ್ಲಿ ಅವರ ಮೇಲೆ ಸಹಜವಾಗಿ ಅಪಾರ ನಿರೀಕ್ಷೆಯಿತ್ತು. ಮಿಕ್ಕ ತಂಡಗಳ ನಾಯಕರುಗಳು ಶತಕ ಸಿಡಿಸಿರುವುದರಿಂದ ಕೊಹ್ಲಿ ಅವರಿಂದ ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದರು.

ಆದರೆ, ಕೊಹ್ಲಿ ಅವರು ಪಂದ್ಯದ 26ನೇ ಓವರ್ ನಲ್ಲಿ ಪ್ರದೀಪ್ ಬೌಲಿಂಗ್ ನ ಐದನೇ ಎಸೆತದಲ್ಲಿ ವಿಕೆಟ್ ಕೀಪರ್ ನಿರೋಶನ್ ಡಿಕ್ ವೆಲ ಗೆ ಕ್ಯಾಚಿತ್ತು ಔಟಾದರು.

2014ರ ನಂತರ ಡಕ್: ಆಗಸ್ಟ್ 27, 2014ರಲ್ಲಿ ಇಂಗ್ಲೆಂಡ್ ವಿರುದ್ಧ ಕಾರ್ಡಿಫ್ ನಲ್ಲಿ ಕೊಹ್ಲಿ ಸೊನ್ನೆ ಸುತ್ತಿದ್ದರು. ಇದಾದ ಬಳಿಕ ಇಲ್ಲಿ ತನಕ 8 ಶತಕ ಸಿಡಿಸಿದ್ದಲ್ಲದೆ, 9 ಅರ್ಧಶತಕ ಬಾರಿಸಿದ್ದಾರೆ.

ಟೆಸ್ಟ್ ಸರಣಿಗಳಲ್ಲಿ ಸತತ ದ್ವಿಶತಕ ಬಾರಿಸಿದ್ದಾರೆ, ಐಪಿಎಲ್ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡದಿದ್ದರೂ ಈ ರೀತಿ ಕಳಪೆಯಾಗಿ ಔಟಾಗುವ ಪೈಕಿ ಅಲ್ಲ ಎಂದು ಫ್ಯಾನ್ಸ್ ನಂಬಿದ್ದರು. ಆದರೆ, ಕೊಹ್ಲಿ ಕೈ ಕೊಟ್ಟರು. ಕೊಹ್ಲಿ ಒಟ್ಟಾರೆ, 11ನೇ ಡಕ್ ಔಟ್

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+