For Quick Alerts
ALLOW NOTIFICATIONS  
For Daily Alerts
 

ರಾಹುಲ್‌ ದ್ರಾವಿಡ್‌ಗೆ ಈ ಆಟಗಾರ ಅಂದ್ರೆ ''ಕಂಪ್ಲೀಟ್ ಪ್ಯಾಕೇಜ್''

Rahul dravid

ಹೊಸ ವರ್ಷಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರನ್ನ ಸೆಲೆಕ್ಟ್‌ ಮಾಡಲಾಗಿದೆ. ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದು, ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಸ್ನಾಯು ಸೆಳೆತದಿಂದಾಗಿ ಈಗಾಗಲೇ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ರೋಹಿತ್ ಶರ್ಮಾ, ಏಕದಿನ ಸರಣಿ ಹೊತ್ತಿಗೂ ಫಿಟ್ ಆಗುವ ಯಾವುದೇ ಲಕ್ಷಣ ಕಾಣದೇ ಇರುವ ಹಿನ್ನಲೆಯಲ್ಲಿ, ಆಯ್ಕೆ ಸಮಿತಿಯು ಉಪನಾಯಕ ಕೆ.ಎಲ್ ರಾಹುಲ್‌ಗೆ ಟೀಂ ಇಂಡಿಯಾ ಏಕದಿನ ನಾಯಕತ್ವ ನೀಡಿದೆ. ಏಕದಿನ ತಂಡದಲ್ಲಿ ಐಪಿಎಲ್ ಸೆನ್ಸೇಷನ್ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆದಿದ್ದು, ಅನುಭವಿ ಓಪನರ್ ಶಿಖರ್ ಧವನ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ಆಲ್‌ರೌಂಡರ್ ದೀಪಕ್ ಚಹಾರ್ ಕೂಡ ತಂಡದಲ್ಲಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ದೀಪಕ್ ಚಹಾರ್ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿರುವಂತೆ ದೀಪಕ್ ಚಹಾರ್ ಅವರನ್ನು '' ಕಂಪ್ಲೀಟ್ ಪ್ಯಾಕೇಜ್" ಆಗಿ ಕಂಡಿದ್ದು, ಅವರ ಆಲ್‌ರೌಂಡ್‌ ಸಾಮರ್ಥ್ಯಗಳಿಗಾಗಿ ಇಷ್ಟಪಡುತ್ತಾರೆ ಎಂದು ಭಾವಿಸುತ್ತಾರೆ.

ಜನವರಿ 19 ರಂದು ಆರಂಭವಾಗಲಿರುವ ಮುಂಬರುವ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಬಿಸಿಸಿಐ ಹೆಸರಿಸಿದ 18 ಆಟಗಾರರಲ್ಲಿ ದೀಪಕ್ ಚಹಾರ್ ಕೂಡ ಒಬ್ಬರು.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಚಹಾರ್ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದರು. ಆದ್ರೆ ಜೈಪುರ ಮತ್ತು ರಾಂಚಿಯಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲಿ ಅವರು ಅಷ್ಟಾಗಿ ಮಿಂಚಲಿಲ್ಲ. ಹೆಚ್ಚು ರನ್‌ಗಳನ್ನ ಬಿಟ್ಟುಕೊಟ್ಟ ದೀಪಕ್ ಚಹಾರ್ 1 ವಿಕೆಟ್‌ ಪಡೆದು 42 ರನ್‌ಗಳನ್ನ ಬಿಟ್ಟುಕೊಟ್ಟಿದ್ದರು. ಆದ್ರೆ ನಂತರ ಕೊಲ್ಕತ್ತಾದ ಪಂದ್ಯದಲ್ಲಿ 8 ಎಸೆತಗಳಲ್ಲಿ 21 ರನ್‌ ಕಲೆಹಾಕಿದ್ದಷ್ಟೇ ಅಲ್ಲದೆ 1/26 ಬೆಸ್ಟ್ ಫಿಗರ್ ಅನ್ನು ಕಾಣಬಹುದಾಗಿದೆ.

ಚಹಾರ್ ಜೊತೆಗೆ ಏಕದಿನ ತಂಡದಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಮತ್ತು ಯುವ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ ಕೃಷ್ಣ ಕೂಡ ಇದ್ದಾರೆ, ಆದರೆ ಮೂವರು ಸ್ಪಿನ್ನರ್‌ಗಳಾದ ಯುಜುವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಹೆಸರಿಸಲಾಗಿದೆ.

"ಜಸ್ಪ್ರೀತ್ ಬುಮ್ರಾ ಉಪನಾಯಕರಾಗಿ, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್ ಭುವಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನಾವು ನೋಡಿದ [ನ್ಯೂಜಿಲೆಂಡ್ ವಿರುದ್ಧ] ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ದೀಪಕ್ ಚಹಾರ್ ಅಲ್ಲಿ ಸ್ವಲ್ಪ ದುಬಾರಿಯಾಗಿದ್ದರೂ ಅವರನ್ನು ಇರಿಸಲಾಗಿದೆ. ಏಕೆಂದರೆ ರಾಹುಲ್ ದ್ರಾವಿಡ್ ಅವರನ್ನು ಪ್ಯಾಕೇಜ್‌ನಂತೆ ಇಷ್ಟಪಡುತ್ತಾರೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ರೋಹಿತ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ತಂಡವನ್ನ ಮುನ್ನಡೆಸಲಿದ್ದು, ಉಪನಾಯಕನಾಗಿ ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಿದ್ದಾರೆ.

BCCI ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ರಾ ವಿರಾಟ್?ಅಸಲಿಗೆ ಆಗಿದ್ದೇನು? | Oneindia kannada

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:
ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

Story first published: Saturday, January 1, 2022, 20:29 [IST]
Other articles published on Jan 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+