IPL 2022 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಲ್ಲ 5 ಬೌಲರ್ಸ್:ಆಕಾಶ್ ಚೋಪ್ರಾ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. ವಿಶ್ವದಾದ್ಯಂತ ಅನೇಕ ಆಟಗಾರರು ಎರಡು ದಿನಗಳ ಕಾಲ ಹ್ಯಾಮರ್ ಅಡಿಯಲ್ಲಿ ತಮ್ಮ ಪರೀಕ್ಷೆ ನಡೆಸಲಿದ್ದಾರೆ. ಅದ್ರಲ್ಲೂ ಕೆಲವು ಯುವ ಭಾರತೀಯ ಆಟಗಾರರು ಸೇರಿದಂತೆ ಅನುಭವಿ ಆಟಗಾರರು ದೊಡ್ಡ ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆ ಮೂಡಿಸಿದ್ದಾರೆ.
ಈ ಬಾರಿ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿದ್ದು, ಒಟ್ಟು 10 ತಂಡಗಳು ಹರಾಜಿನಲ್ಲಿ ಸ್ಪರ್ಧಿಸಲಿವೆ. ದೇಶೀಯ ಆಟಗಾರರು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಆಟಗಾರರು ಕ್ಯಾಶ್ ರಿಚ್ ಲೀಗ್ನಲ್ಲಿ ಆಡಲು ಆಸಕ್ತಿ ಹೊಂದಿದ್ದಾರೆ. ಹರಾಜು ರಿಜಿಸ್ಟರ್‌ನಲ್ಲಿರುವ 1,214 ಹೆಸರುಗಳಲ್ಲಿ 896 ಭಾರತೀಯ ಆಟಗಾರರು ಮತ್ತು 318 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ನೇಪಾಳ, ಯುಎಇ, ಓಮನ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ 270 ಕ್ಯಾಪ್ಡ್, 903 ಅನ್‌ಕ್ಯಾಪ್ಡ್ ಮತ್ತು 41 ಆಟಗಾರರನ್ನು ಒಳಗೊಂಡಿದೆ. ಅಮೆರಿಕದ 14 ಆಟಗಾರರು ಕೂಡ ಇದ್ದಾರೆ.

ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್ ಆಗಬಲ್ಲ ಐವರು ಬೌಲರ್ಸ್
ಮುಂಬರುವ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಬಲ್ಲ ಮತ್ತು ದುಬಾರಿ ಆಟಗಾರರಾಗಿ ಗುರುತಿಸಿಕೊಳ್ಳಬಲ್ಲ ಐವರು ಭಾರತೀಯ ಮೂಲದ ಬೌಲರ್‌ಗಳನ್ನ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಂದಾಜಿಸಿದ್ದಾರೆ. ಅನೇಕ ಬೌಲರ್‌ಗಳ ಪಟ್ಟಿಯಲ್ಲಿ ಐವರನ್ನ ಆಯ್ಕೆ ಮಾಡಿರುವ ಚೋಪ್ರಾ ದುಬಾರಿ ಆಟಗಾರರಾಗುವ ಹೆಸರನ್ನ ಪ್ರಕಟಿಸಿದ್ದಾರೆ. ಆದ್ರೆ ಈ ಪಟ್ಟಿಯಲ್ಲಿ ಕಳೆದ ಐಪಿಎಲ್ ಸೀಸನ್‌ನ ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಇಲ್ಲದೆ ಇರುವುದು ಆಶ್ಚರ್ಯ ಮೂಡಿಸಿದೆ.

ಐವರು ದುಬಾರಿ ಬೌಲರ್‌ಗಳಲ್ಲಿ ಪ್ರಸಿದ್ದ ಕೃಷ್ಣಗೆ ಸ್ಥಾನ
ಆಕಾಶ್ ಚೋಪ್ರಾ ಐಪಿಎಲ್ 2022ರ ಹರಾಜಿನಲ್ಲಿ ದುಬಾರಿ ಬೌಲರ್ ಆಗಿ ಗುರುತಿಸಿಕೊಳ್ಳಬಲ್ಲ ಐವರಲ್ಲಿ ಕನ್ನಡಿಗ ಬೌಲರ್ ಪ್ರಸಿದ್ ಕೃಷ್ಣ ಕೂಡ ಒಬ್ಬರಾಗಿದ್ದಾರೆ. ಇವರ ಜೊತೆಗೆ ಯುವ ಪ್ರತಿಭಾನ್ವಿತ ವೇಗಿ ಆವೇಶ್ ಖಾನ್ ಮತ್ತು ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಕೂಡ ಸೇರಿದ್ದಾರೆ.
ಪ್ರಸಿದ್ಧ್ ಕೃಷ್ಣ ಅವರ ಎತ್ತರ ಮತ್ತು ಅವರ ಬೌಲಿಂಗ್ ಮಾಡುವ ಹಂತವನ್ನು ಆಕಾಶ್ ಚೋಪ್ರಾ ಹೊಗಳಿದ್ದಾರೆ. ಇದಕ್ಕಾಗಿ ಅವರು ತಮ್ಮ ವಿಶ್ಲೇಷಣೆಯಲ್ಲಿ ಐದನೇ ಸ್ಥಾನವನ್ನು ಕೃಷ್ಣ ಪಡೆದರು. ಅದೇ ಸಮಯದಲ್ಲಿ, ಚೋಪ್ರಾ ಚಾಹಲ್‌ನ ಸಾಮರ್ಥ್ಯದ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಿದ್ದಾರೆ. ಜೊತೆಗೆ ದೀಪಕ್ ಚಹಾರ್ ಹೊಸ ಚೆಂಡಿನೊಂದಿಗೆ ವಿಕೆಟ್‌ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳುವ ಮೂಲಕ ಅವರನ್ನು 'ಅದ್ಭುತ' ಎಂದು ಕರೆದರು.
IND vs WI: ಐಪಿಎಲ್ ನಾಯಕನಿಗೆ ಸವಾಲೆಸೆದ ಪೊಲಾರ್ಡ್: ರೋಹಿತ್ ಬಗ್ಗೆ ಹೇಳಿದ್ದಿಷ್ಟು!

ಮೊದಲೆರಡು ಸ್ಥಾನದಲ್ಲಿ ಚಹಾಲ್ ಮತ್ತು ದೀಪಕ್ ಚಹಾರ್
ಆಕಾಶ್ ಚೋಪ್ರಾ ಊಹೆಯಂತೆ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಮೊದಲೆರಡು ಬೌಲರ್‌ಗಳೆಂದ್ರೆ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಮತ್ತು ಆಲ್‌ರೌಂಡರ್ ದೀಪಕ್ ಚಹಾರ್ ಆಗಿದ್ದಾರೆ.
ಯುಜವೇಂದ್ರ ಚಹಾಲ್ ಅನ್ನು ಆರ್‌ಸಿಬಿ ರೀಟೈನ್ ಮಾಡಿಕೊಳ್ಳದ ಕಾರಣ ಹರಾಜಿಗೆ ಇಳಿದಿದ್ದಾರೆ. ಇನ್ನು ದೀಪಕ್ ಚಹಾರ್‌ರನ್ನ ಸಿಎಸ್‌ಕೆ ರೀಟೈನ್ ಮಾಡಿಕೊಳ್ಳದೆ ಧೋನಿ, ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್‌ರನ್ನ ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನ ಹರಾಜಿಗೆ ಬಿಟ್ಟಿದೆ. ಇನ್ನು ಆರ್‌ಸಿಬಿ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್‌ರನ್ನ ರೀಟೈನ್ ಮಾಡಿಕೊಂಡಿದೆ.
ಇಲ್ಲಿ ನಿನ್ನ ಹೋರಾಟ ನಿನ್ನ ವಿರುದ್ಧವೇ ಎಂದು ಕೊಹ್ಲಿ ಟಾಂಗ್ ನೀಡಿದ್ದು ಯಾರಿಗೆ?

ಹರ್ಷ ಬೋಗ್ಲೆ ಪ್ರಕಾರ ದುಬಾರಿ ಮೊತ್ತ ಪಡೆಯಲಿರುವ ಇಬ್ಬರು ಆಟಗಾರರು
ಇತ್ತೀಚೆಗಷ್ಟೇ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಆಗುವ ಇಬ್ಬರು ಭಾರತೀಯ ಆಟಗಾರರನ್ನು ಹರ್ಷ ಬೋಗ್ಲೆ ಅಂದಾಜಿಸಿದ್ದಾರೆ. ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಜೊತೆಗೆ ದೇಶೀಯ ಹಿಟ್ಟರ್ ಹಾಗೂ ತಮಿಳುನಾಡು ಆಟಗಾರ ಶಾರುಕ್ ಖಾನ್ ಜಾಕ್ ಪಾಟ್ ಗೆ ಬೆಲೆ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಋತುವಿನವರೆಗೂ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಈ ಕ್ರಮದಲ್ಲಿ ಅವರು 10 ರಿಂದ 17 ಕೋಟಿ ರೂ. ರೂಪಾಯಿವರೆಗೆ ಬಿಡ್ ಆಗಬಹುದು. ಇನ್ನು ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ 5.25 ಕೋಟಿ ರೂ.ಗೆ ಆಡಿದ್ದ ತಮಿಳುನಾಡು ಮೂಲದ ಶಾರೂಕ್ ಖಾನ್ ಈ ಬಾರಿ 10 ರಿಂದ 13 ಕೋಟಿ ಗಳಿಸುವ ಅವಕಾಶವಿದೆ ಎಂದು ಬೋಗ್ಲೆ ಅಂದಾಜಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications