For Quick Alerts
ALLOW NOTIFICATIONS  
For Daily Alerts
 
ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

Aakash chopra and umesh yadav

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಿರ್ಣಾಯಕ ಸರಣಿಯನ್ನು ಆಡಲಿದೆ. ಸೆ. 20ರಂದು ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಸರಣಿಗೆ ತಯಾರಿ ನಡೆಸುತ್ತಿರುವ ಭಾರತ ತಂಡದಲ್ಲಿ ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಸೇರ್ಪಡೆಗೊಂಡಿದ್ದರು. ಆದ್ರೆ ಕೋವಿಡ್-19 ಜ್ವರದ ಕಾರಣ ಕೊನೆಯ ಗಳಿಗೆಯಲ್ಲಿ ತಂಡದಿಂದ ಹೊರಬಿದ್ದರು.

ಶಮಿ ಬದಲಿಗೆ ಹಿರಿಯ ವೇಗಿ ಉಮೇಶ್ ಯಾದವ್ ಅವರನ್ನು ಭಾರತ ಪರಿಗಣಿಸಿದೆ. ಮೂರೂವರೆ ವರ್ಷಗಳ ಅಂತರದ ಬಳಿಕ ಭಾರತ ಟಿ20 ತಂಡಕ್ಕೆ ಉಮೇಶ್ ಅವರನ್ನು ಸೇರಿಸಿಕೊಂಡಿದೆ. 34ರ ಹರೆಯದ ಉಮೇಶ್‌ರನ್ನು ಭಾರತ ಟಿ20 ವಿಶ್ವಕಪ್‌ಗೆ ಏಕೆ ಪರಿಗಣಿಸಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಉತ್ತಮ ವೇಗದ ಬೌಲಿಂಗ್ ಹೊಂದಿದ್ದರೂ ಇವರ ಬೌಲಿಂಗ್ ಎಕಾನಮಿ ತುಂಬಾ ಕಳಪೆಯಾಗಿದೆ. ಉಮೇಶ್ ಪುನರಾಗಮನಕ್ಕೆ ಕಳೆದ ಐಪಿಎಲ್‌ನಲ್ಲಿ ಕೆಕೆಆರ್‌ನೊಂದಿಗಿನ ಅದ್ಭುತ ಪ್ರದರ್ಶನ ಸಹಾಯ ಮಾಡಿದೆ.

ಉಮೇಶ್ ಯಾದವ್ ಆಯ್ಕೆ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಉಮೇಶ್ ಯಾದವ್ ಆಯ್ಕೆ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಇದೀಗ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಉಮೇಶ್ ಭಾರತ ಟಿ20 ತಂಡಕ್ಕೆ ಮರಳಿರುವುದನ್ನು ಪ್ರಶ್ನಿಸಿದ್ದಾರೆ.

''ಕಳೆದ ಟಿ20 ವಿಶ್ವಕಪ್ ಬಳಿಕ ಭಾರತ ಹಲವು ಟಿ20 ಪಂದ್ಯಗಳನ್ನು ಆಡಿದೆ. ಆದರೆ ಭಾರತ ಒಂದೇ ಒಂದು ಪಂದ್ಯದಲ್ಲೂ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿಗೆ ಅವಕಾಶ ನೀಡಲಿಲ್ಲ. ಆದರೆ ವಿಶ್ವಕಪ್‌ಗೆ ಕೇವಲ ನಾಲ್ಕು ವಾರಗಳು ಬಾಕಿ ಉಳಿದಿದ್ದು, ಇಬ್ಬರೂ ತಂಡದ ಭಾಗವಾಗಿ ಮರಳಿದ್ದಾರೆ. ಯೋಜನೆಗಳು ಕಳವಳಕ್ಕೆ ಕಾರಣವಾಗಿವೆ'' ಎಂದು ಆಕಾಶ್ ಚೋಪ್ರಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅನೇಕ ಟೀಕೆಗಳನ್ನ ಎದುರಿಸುತ್ತಿರುವ ರಾಹುಲ್ ದ್ರಾವಿಡ್

ಅನೇಕ ಟೀಕೆಗಳನ್ನ ಎದುರಿಸುತ್ತಿರುವ ರಾಹುಲ್ ದ್ರಾವಿಡ್

ಕೋಚ್ ರಾಹುಲ್ ದ್ರಾವಿಡ್ ಅವರ ಹಲವು ಯೋಜನೆಗಳು ಈಗಾಗಲೇ ಟೀಕೆಗಳನ್ನು ಎದುರಿಸುತ್ತಿವೆ. ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ದ್ರಾವಿಡ್ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಅನೇಕ ಯುವ ಆಟಗಾರರಿಗೆ ಅವಕಾಶ ನೀಡಲಾಯಿತು. ಆದರೆ ಅವರಲ್ಲಿ ನಿಷ್ಠಾವಂತರನ್ನು ಹುಡುಕಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತವು ಅತ್ಯುತ್ತಮ ಎಡಗೈ ವೇಗಿಗಳು, ಎಡಗೈ ಬ್ಯಾಟ್ಸ್‌ಮನ್‌ಗಳು ಮತ್ತು ಬ್ಯಾಕ್‌ಅಪ್ ಆರಂಭಿಕರನ್ನು ಹೊಂದಿಲ್ಲ.

ದ್ರಾವಿಡ್ ನೇತೃತ್ವದಲ್ಲಿ ಭಾರತ ನಡೆಸಿದ ಪ್ರಯೋಗಗಳ ಫಲಿತಾಂಶವನ್ನು ಏಷ್ಯಾಕಪ್ ಕಂಡಿತು. ಭಾರತ ಆತ್ಮವಿಶ್ವಾಸವಿಲ್ಲದ ತಂಡವಾಗಿ ಮಾರ್ಪಟ್ಟಿದೆ. ದ್ರಾವಿಡ್ ಅವರ ಬಹುತೇಕ ನಿರ್ಧಾರಗಳನ್ನು ರೋಹಿತ್ ಶರ್ಮಾ ಬೆಂಬಲಿಸುತ್ತಿದ್ದರೂ ತಂಡಕ್ಕೆ ಇದ್ಯಾವುದೂ ಒಳ್ಳೆಯದಲ್ಲ ಎಂಬುದು ವಾಸ್ತವ. ಟಿ20 ವಿಶ್ವಕಪ್‌ನಲ್ಲೂ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ನಲ್ಲೂ ಭಾರತ ನಿರಾಸೆ ಕಂಡರೆ ದ್ರಾವಿಡ್ ಕುರ್ಚಿ ಅಲುಗಾಡುವುದು ಖಚಿತ.

IND vs AUS: ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಆಯ್ಕೆ ಮಾಡಿದ್ದೇಕೆ?; ವಿವರಿಸಿದ ರೋಹಿತ್

ಉಮೇಶ್ ಯಾದವ್ ಆಯ್ಕೆ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಉಮೇಶ್ ಯಾದವ್ ಆಯ್ಕೆ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ಇದೀಗ ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಉಮೇಶ್ ಭಾರತ ಟಿ20 ತಂಡಕ್ಕೆ ಮರಳಿರುವುದನ್ನು ಪ್ರಶ್ನಿಸಿದ್ದಾರೆ.

''ಕಳೆದ ಟಿ20 ವಿಶ್ವಕಪ್ ಬಳಿಕ ಭಾರತ ಹಲವು ಟಿ20 ಪಂದ್ಯಗಳನ್ನು ಆಡಿದೆ. ಆದರೆ ಭಾರತ ಒಂದೇ ಒಂದು ಪಂದ್ಯದಲ್ಲೂ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿಗೆ ಅವಕಾಶ ನೀಡಲಿಲ್ಲ. ಆದರೆ ವಿಶ್ವಕಪ್‌ಗೆ ಕೇವಲ ನಾಲ್ಕು ವಾರಗಳು ಬಾಕಿ ಉಳಿದಿದ್ದು, ಇಬ್ಬರೂ ತಂಡದ ಭಾಗವಾಗಿ ಮರಳಿದ್ದಾರೆ. ಯೋಜನೆಗಳು ಕಳವಳಕ್ಕೆ ಕಾರಣವಾಗಿವೆ'' ಎಂದು ಆಕಾಶ್ ಚೋಪ್ರಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಭಾರತ ವಿರುದ್ಧ ಕಣಕ್ಕಿಳಿಯಲು ಟಿಮ್ ಡೇವಿಡ್ ಸಿದ್ಧ: ಸ್ಫೋಟಕ ಸಿಕ್ಸರ್‌ ಸಿಡಿಸಲು ನೆಟ್ಸ್‌ನಲ್ಲಿ ಅಭ್ಯಾಸ

ಅನೇಕ ಟೀಕೆಗಳನ್ನ ಎದುರಿಸುತ್ತಿರುವ ರಾಹುಲ್ ದ್ರಾವಿಡ್

ಅನೇಕ ಟೀಕೆಗಳನ್ನ ಎದುರಿಸುತ್ತಿರುವ ರಾಹುಲ್ ದ್ರಾವಿಡ್

ಕೋಚ್ ರಾಹುಲ್ ದ್ರಾವಿಡ್ ಅವರ ಹಲವು ಯೋಜನೆಗಳು ಈಗಾಗಲೇ ಟೀಕೆಗಳನ್ನು ಎದುರಿಸುತ್ತಿವೆ. ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ದ್ರಾವಿಡ್ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಅನೇಕ ಯುವ ಆಟಗಾರರಿಗೆ ಅವಕಾಶ ನೀಡಲಾಯಿತು. ಆದರೆ ಅವರಲ್ಲಿ ನಿಷ್ಠಾವಂತರನ್ನು ಹುಡುಕಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತವು ಅತ್ಯುತ್ತಮ ಎಡಗೈ ವೇಗಿಗಳು, ಎಡಗೈ ಬ್ಯಾಟ್ಸ್‌ಮನ್‌ಗಳು ಮತ್ತು ಬ್ಯಾಕ್‌ಅಪ್ ಆರಂಭಿಕರನ್ನು ಹೊಂದಿಲ್ಲ.

ದ್ರಾವಿಡ್ ನೇತೃತ್ವದಲ್ಲಿ ಭಾರತ ನಡೆಸಿದ ಪ್ರಯೋಗಗಳ ಫಲಿತಾಂಶವನ್ನು ಏಷ್ಯಾಕಪ್ ಕಂಡಿತು. ಭಾರತ ಆತ್ಮವಿಶ್ವಾಸವಿಲ್ಲದ ತಂಡವಾಗಿ ಮಾರ್ಪಟ್ಟಿದೆ. ದ್ರಾವಿಡ್ ಅವರ ಬಹುತೇಕ ನಿರ್ಧಾರಗಳನ್ನು ರೋಹಿತ್ ಶರ್ಮಾ ಬೆಂಬಲಿಸುತ್ತಿದ್ದರೂ ತಂಡಕ್ಕೆ ಇದ್ಯಾವುದೂ ಒಳ್ಳೆಯದಲ್ಲ ಎಂಬುದು ವಾಸ್ತವ. ಟಿ20 ವಿಶ್ವಕಪ್‌ನಲ್ಲೂ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ನಲ್ಲೂ ಭಾರತ ನಿರಾಸೆ ಕಂಡರೆ ದ್ರಾವಿಡ್ ಕುರ್ಚಿ ಅಲುಗಾಡುವುದು ಖಚಿತ.

Ind vs Eng 1st ODI: ಮಂದಾನ, ಕೌರ್ ಭರ್ಜರಿ ಬ್ಯಾಟಿಂಗ್, 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ ವನಿತೆಯರು

ಉಮೇಶ್ ಯಾದವ್ ಆಯ್ಕೆ ಕುರಿತು ರೋಹಿತ್ ಶರ್ಮಾ ಹೇಳಿಕೆ

ಉಮೇಶ್ ಯಾದವ್ ಆಯ್ಕೆ ಕುರಿತು ರೋಹಿತ್ ಶರ್ಮಾ ಹೇಳಿಕೆ

ಅದೇ ಸಮಯದಲ್ಲಿ, ಉಮೇಶ್ ಅವರನ್ನು ಭಾರತ ತಂಡಕ್ಕೆ ಪರಿಗಣಿಸುವ ಪರವಾಗಿ ನಾಯಕ ರೋಹಿತ್ ಶರ್ಮಾ ಭಾನುವಾರ (ಸೆ.18) ಮಾತನಾಡಿದರು. ಉಮೇಶ್ ಮತ್ತು ಶಮಿಯಂತಹ ಆಟಗಾರರು ಬಹಳ ಸಮಯದಿಂದ ಬೌಲಿಂಗ್ ಮಾಡುತ್ತಿದ್ದಾರೆ. ಅವರನ್ನ ಒಂದು ಸ್ವರೂಪಕ್ಕೆ ಮಾತ್ರ ಪರಿಗಣಿಸಬಹುದು. ಆಡಿದ ಎಲ್ಲಾ ಫಾರ್ಮೆಟ್‌ಗಳಲ್ಲಿ ತಾನೊಬ್ಬ ಸ್ಟಾರ್ ಎಂದು ಸಾಬೀತುಪಡಿಸಿದ್ದಾರೆ.

''ನಾವು ಅವರ ಯೋಗ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ. ಹೊಸ ಆಟಗಾರರನ್ನು ಪರಿಗಣಿಸುವಾಗ ಅವರು ಈ ಮಾದರಿಯಲ್ಲಿ ಆಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಅವಶ್ಯಕ. ಆದರೆ ಉಮೇಶ್ ಅವರಂತಹ ಆಟಗಾರರು ಸಂಪೂರ್ಣ ಫಿಟ್ ಮತ್ತು ಅನುಭವಿಗಳಾಗಿದ್ದಾರೆ. ಹಾಗಾಗಿ ವಾಪಸ್ ಕರೆ ಮಾಡಿದೆ'' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಉಮೇಶ್ ಯಾದವ್ ಟಿ20 ಅಂತರಾಷ್ಟ್ರೀಯ ಕೆರಿಯರ್

ಉಮೇಶ್ ಯಾದವ್ ಟಿ20 ಅಂತರಾಷ್ಟ್ರೀಯ ಕೆರಿಯರ್

ಉಮೇಶ್ ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಕೇವಲ 7 ಟಿ20 ಆಡಿದ್ದಾರೆ. 9 ವಿಕೆಟ್ ಪಡೆದ ಉಮೇಶ್ ಎಕಾನಮಿ 8.76 ಆಗಿದೆ. ಉಮೇಶ್ ಹೊಸ ಚೆಂಡಿನೊಂದಿಗೆ ಮಿಂಚುವ ಮತ್ತು ಸ್ವಿಂಗ್ ಬೆಂಬಲದೊಂದಿಗೆ ಪಿಚ್‌ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ 133 ಐಪಿಎಲ್ ಪಂದ್ಯಗಳಲ್ಲಿ 135 ವಿಕೆಟ್ ಪಡೆದಿದ್ದಾರೆ. ಆದರೆ ಎಕಾನಮಿ 8.37 ಆಗಿದ್ದು ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ, ಭಾರತಕ್ಕೆ ಪರಿಗಣಿಸಲು ಯುವ ಬೌಲರ್ ಇಲ್ಲದಿರುವುದು ನಿರಾಶಾದಾಯಕವಾಗಿದೆ.

Story first published: Monday, September 19, 2022, 8:08 [IST]
Other articles published on Sep 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+