For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಅಬ್ಬರಿಸೋ ದಿನಗಳು ಜಾಸ್ತಿ ದೂರ ಉಳಿದಿಲ್ಲ: ಎದುರಾಳಿಗಳಿಗೆ ABD ಎಚ್ಚರಿಕೆ

ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ಇಂದು (ಶನಿವಾರ) ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗ್ತಿವೆ. ಟೂರ್ನಿಯಲ್ಲಿ ಮೂರು ಪಂದ್ಯ ಗೆದ್ದು, ಎರಡು ಪಂದ್ಯ ಸೋತಿರುವ ಆರ್‌ಸಿಬಿ ಪ್ಲೇ ಆಫ್‌ ದೃಷ್ಟಿಯಿಂದ ಪಂದ್ಯ ಗೆಲ್ಲಲೇಬೇಕೆಂದು ಪಣತೊಟ್ಟಿದೆ.

ಏತನ್ಮಧ್ಯೆ, ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇ ಆಫ್ ಕನಸು ಉಳಿಸಿಕೊಳ್ಳಬೇಕಾದ್ರೆ ಇಂದಿನ ಪಂದ್ಯವನ್ನ ಗೆಲ್ಲಲೇಬೇಕಾಗಿದೆ. ಏಕೆಂದ್ರೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನ ಸಿಎಸ್‌ಕೆ ಕೈ ಚೆಲ್ಲಿದೆ. ಹೀಗಾಗಿ ಕೂಲ್ ಕ್ಯಾಪ್ಟನ್ ಧೋನಿ ರಣತಂತ್ರ, ಅಗ್ರೆಸ್ಸಿವ್ ಫ್ಲೇಮ್ ಬಾಯ್ ವಿರಾಟ್ ಕೊಹ್ಲಿ ಮುಖಾಮುಖಿ ಅಭಿಮಾನಿಗಳ ರೋಚಕತೆ ಮೂಡಿಸಿದೆ.

ಆರ್‌ಸಿಬಿ ಅಖಾಡಕ್ಕೆ ಇಳಿಯುವ ಮೊದಲು ಎಬಿಡಿ ವಾರ್ನಿಂಗ್

ಆರ್‌ಸಿಬಿ ಅಖಾಡಕ್ಕೆ ಇಳಿಯುವ ಮೊದಲು ಎಬಿಡಿ ವಾರ್ನಿಂಗ್

ಹೌದು, ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಕಾದಾಟಕ್ಕೆ ಇಳಿಯುವ ಮೊದಲೇ ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ ಎದುರಾಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಎದುರಾಳಿ ಅಂದರೆ ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಎಂದುಕೊಳ್ಳಬೇಡಿ. ಎಬಿಡಿ ಐಪಿಎಲ್ 2020ರ ಪ್ರತಿ ತಂಡಗಳಿಗೂ ಮುಂದಿನ ದಿನಗಳ ಎಚ್ಚರಿಕೆ ನೀಡಿದ್ದಾರೆ.

ಆರ್‌ಸಿಬಿಯಿಂದ ಬೆಸ್ಟ್ ಪರ್ಫಾಮೆನ್ಸ್‌ ಬರಲಿದೆ

ಆರ್‌ಸಿಬಿಯಿಂದ ಬೆಸ್ಟ್ ಪರ್ಫಾಮೆನ್ಸ್‌ ಬರಲಿದೆ

ಸಿಡಿಲು ಬಡಿಯೋಕು, ಮೊದಲು ಆಕಾಶದಲ್ಲಿ ಗುಡುಗು ಕೇಳಿ ಬರುವ ಹಾಗೆ ಆರ್‌ಸಿಬಿಯಿಂದ ಬೆಸ್ಟ್ ಪರ್ಫಾಮೆನ್ಸ್‌ ನೀಡುವುದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಾರ್ನಿಂಗ್ ನೀಡುತ್ತಿದೆ. ಇದು ನಾವು ಹೇಳುತ್ತಿಲ್ಲ, ಎಬಿ ಡಿ ವಿಲಿಯರ್ಸ್ ಮಾತು ಹಾಗೆ ಪ್ರತಿಧ್ವನಿಸುತ್ತಿದೆ.

ಬೆಂಗಳೂರು vs ಚೆನ್ನೈ, ಕಣಕ್ಕಿಳಿಯುವ ಸಂಭಾವ್ಯ ಆಟಗಾರರು, ಪಿಚ್ ವರದಿ

ಆರ್‌ಸಿಬಿ ವೀಡಿಯೋದಲ್ಲಿ ಎಬಿಡಿ ಹೇಳಿದ್ದೇನು ಗೊತ್ತಾ?

ಆರ್‌ಸಿಬಿ ವೀಡಿಯೋದಲ್ಲಿ ಎಬಿಡಿ ಹೇಳಿದ್ದೇನು ಗೊತ್ತಾ?

ಒಂದೆರಡು ನಿರಾಶಾದಾಯಕ ಪ್ರದರ್ಶನಗಳ ಹೊರತಾಗಿಯೂ ಆರ್‌ಸಿಬಿ ಐಪಿಎಲ್ 2020 ರಲ್ಲಿ ಉತ್ತಮ ಆರಂಭವನ್ನು ಪಡೆದಿದೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಐಪಿಎಲ್ 2020 ರಲ್ಲಿ ಆರ್‌ಸಿಬಿ ತಂಡವು ಅತ್ಯುತ್ತಮ ಪ್ರದರ್ಶನದಿಂದ ದೂರ ಉಳಿದಿಲ್ಲ ಮತ್ತು ಆ ವೇಗವನ್ನು ಮುಂದುವರಿಸಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಜೊತೆಗೆ ಮುಂದಿನ ಪಂದ್ಯದಲ್ಲಿ ಡಿವಿಲಿಯರ್ಸ್ ಅವರು ಉತ್ತಮವಾಗಿ ಹೊರಬರಲು ನೋಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ನಾನು ಚೆನ್ನಾಗಿ ಆಡುವತ್ತ ಗಮನ ಹರಿಸಿದ್ದೇನೆ

ನಾನು ಚೆನ್ನಾಗಿ ಆಡುವತ್ತ ಗಮನ ಹರಿಸಿದ್ದೇನೆ

''ನಮ್ಮ ಕೊನೆಯ ಪಂದ್ಯದಲ್ಲಿ ನಾನು ಉತ್ತಮ ಆಟವನ್ನು ಹೊಂದಿರಲಿಲ್ಲ, ಅದರಿಂದ ಹೊರಬರುವಲ್ಲಿ ನಾನು ಗಮನ ಹರಿಸುತ್ತೇನೆ "ಎಂದು ಆರ್‌ಸಿಬಿಯ ಅಧಿಕೃತ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಡಿವಿಲಿಯರ್ಸ್ ಹೇಳಿದ್ದಾರೆ.


ಆರ್‌ಸಿಬಿ ಐಪಿಎಲ್‌ನಲ್ಲಿ ಮೂರು ಫೈನಲ್‌ಗಳನ್ನು ತಲುಪಿದ ದಾಖಲೆ ಹೊಂದಿದೆ. ಆರ್‌ಸಿಬಿ ಕೊನೆಯ ಬಾರಿಗೆ 2016 ರಲ್ಲಿ ಅಂತಿಮವಾಗಿ ಫೈನಲ್ ಪ್ರವೇಶಿಸಿತು ಆದರೆ ಅಂದಿನಿಂದ ಅವರು ಪಾಯಿಂಟ್ಸ್ ಟೇಬಲ್‌ನಲ್ಲಿ ಕೆಳಭಾಗದಲ್ಲಿದ್ದಾರೆ. ಇದಲ್ಲದೆ, 2019 ರಲ್ಲಿ, 14 ಪಂದ್ಯಗಳಿಂದ ಕೇವಲ 5 ಜಯಗಳಿಸಿ ಕೊನೆಯ ಸ್ಥಾನದಲ್ಲಿ ಉಳಿಯಿತು.

Story first published: Saturday, October 10, 2020, 17:15 [IST]
Other articles published on Oct 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+