ಸಿಎಸ್‌ಕೆ ಹಾಗೂ ಧೋನಿ ಬೆಂಬಲಕ್ಕೆ ನಿಂತ ನಟಿ ಪಾರ್ವತಿ ನಾಯರ್

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ನಾಯರ್ ಐಪಿಎಲ್ 13ನೇ ಆವೃತ್ತಿಯಲ್ಲಿ ಸೋಲಿನ ಮೂಲಕ ಭಾರೀ ಟೀಕೆಗಳಿಗೆ ಗುರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬೆಂಬಲಿಸಿದ್ದಾರೆ.
ಅಕ್ಟೋಬರ್ 19, ಸೋಮವಾರ, ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್‌ಗಳ ಸೋಲು ಅನುಭವಿಸಿದ ಸಿಎಸ್‌ಕೆ, ಬಹುತೇಕ ಪ್ಲೇ ಆಫ್ ತಲುಪುವ ಆಸೆಯನ್ನು ಕೈ ಬಿಟ್ಟಿದೆ. ಈಗಾಗಲೇ ಐಪಿಎಲ್ 2020 ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿದೆ.
ಮೂರು ಬಾರಿಯ ಚಾಂಪಿಯನ್ ಆದ ಸಿಎಸ್‌ಕೆ ಈ ಬಾರಿ ಪ್ಲೇ ಆಫ್ ಹಂತಕ್ಕೆ ತಲುಪದೇ ಇದ್ದರೆ, ಬಹಳ ವರ್ಷಗಳ ನಂತರ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಹೀನಾಯ ಪ್ರದರ್ಶನಕ್ಕೆ ಗುರಿಯಾಗಲಿದೆ.
ಈಗಾಗಲೇ ಸಿಎಸ್‌ಕೆ ಪ್ರದರ್ಶನದ ಕುರಿತು ಅನೇಕ ಮಾಜಿ ಕ್ರಿಕೆಟಿಗರು ಟೀಕೆಗಳನ್ನು ಮಾಡಿದ್ದು, ಮತ್ತೆ ಕೆಲವರು ಚೆನ್ನೈ ತಂಡವನ್ನು ಬೆಂಬಲಿಸಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿರುವ ಪಾರ್ವತಿ ನಾಯರ್ ಕೂಡ ಧೋನಿಯನ್ನ ಬೆಂಬಲಿಸಿದ್ದಾರೆ.
''ಈ ಎಲ್ಲಾ ವರ್ಷಗಳಲ್ಲಿ ಹುರಿದುಂಬಿಸಲು ನೀವು ನಮಗೆ ಎಲ್ಲವನ್ನೂ ನೀಡಿದ್ದೀರಿ ಮತ್ತು ಈ ಕಠಿಣ ಕಾಲದಲ್ಲಿ ನಾವು ನಿಮ್ಮೊಂದಿಗೆ ನಿಂತು ನಿಮಗೆ ನಮ್ಮ ಬೆಂಬಲವನ್ನು ತೋರಿಸುವ ಸಮಯ ಬಂದಿದೆ. ನಾವು ನಿನ್ನನ್ನು ಪ್ರೀತಿಸುತ್ತೇವೆ @ChennaiIPL ನಾವು ನಿನ್ನನ್ನು ಪ್ರೀತಿಸುತ್ತೇವೆ ಥಾಲಾ @msdhoni '' ಎಂದು ಟ್ವೀಟ್ ಮಾಡಿದ್ದಾರೆ.
ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಚೆನ್ನೈಗೆ ಬೆಂಬಲಿಸಿದ್ದು, ಇನ್ನೂ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications