Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಬಗ್ಗೆ ನಿಜವಾಗಿಯೂ ಹೀಗಂದ್ರಾ ಗಿಲ್‌ಕ್ರಿಸ್ಟ್!: ಸತ್ಯ ಹೊರಬಿತ್ತು ಆಸಿಸ್ ದಿಗ್ಗಜನ ಹೇಳಿಕೆಯ ಮರ್ಮ!!

ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಿಂದೀಚೆಗೆ ಹಲವು ಸಂದರ್ಭಗಳಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಪದೇ ಪದೇ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುತ್ತಿರುವ ಬೆನ್ನಲ್ಲೇ ಈಗ ವಿಚಾರ ಈಗ ಬೇರೆಯದೇ ಆಯಾಮವನ್ನು ಪಡೆದುಕೊಂಡಿದೆ. ಅದರಲ್ಲೂ ಈ ವಿಚಾರವಾಗಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿಗೆ ಪದೇ ಪದೇ ವಿಶ್ರಾಂತಿ ನೀಡುತ್ತಿರುವ ಹಿಂದೆ ದುರಾಲೋಚನೆಯೊಂದು ಇದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಆಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ ಎನ್ನುವ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಇದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿತ್ತು. ಆದರೆ ಈ ವೈರಲ್ ಟ್ವೀಟ್ ವಿಚಾರವಾಗಿ ಸ್ವತಃ ಆಡಂ ಗಿಲ್‌ಕ್ರಿಸ್ಟ್ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಮೂಲಕ ತನ್ನದು ಎನ್ನಲಾದ ಹೇಳಿಕೆಯನ್ನು ಅವರು ನೇರವಾಗಿ ಅಲ್ಲಗಳೆದಿದ್ದಾರೆ.

Adam Gilchrist Gives Clarification On His Alleged Statement on Virat Kohli Being Rested: Know What?

ವೈರಲ್ ಆದ ಟ್ವೀಟ್‌ನಲ್ಲಿ ಏನಿದೆ?

ವಿರಾಟ್ ಕೊಹ್ಲಿಗೆ ನಿರಂತರವಾಗಿ ವಿಶ್ರಾಂತಿ ನೀಡುತ್ತಿರುವ ವಿಚಾರವಾಗಿ ಟ್ವಿಟ್ಟರ್ ಬಳಕೆದಾರರೊಬ್ಬರು ಗಿಲ್‌ಕ್ರಿಸ್ಟ್ ಹೇಳಿಕೆ ಎನ್ನುವಂತೆ ಟ್ವೀಟ್ ಒಂದನ್ನು ಮಾಡಿದ್ದರು. ಆ ಟ್ವೀಟ್ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದೆ. "ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿಗೆ ಸತತವಾಗಿ ವಿಶ್ರಾಂತಿಯನ್ನು ನೀಡಲಾಗುತ್ತಿದೆ. ನನ್ನ ಪ್ರಕಾರ ಅವರಿಗೆ ಸಚಿನ್ ದಾಖಲೆ ಮುರಿಯುವುದು ಬೇಕಾಗಿಲ್ಲ" ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ ಎನ್ನುವುದಾಗಿ ಟ್ವೀಟ್‌ನಲ್ಲಿ ಉಲ್ಲೇಕಿಸಲಾಗಿದೆ.

ಸಂಚಲನ ಸೃಷ್ಟಿಸಿದ ಟ್ವೀಟ್!

ಈ ಟ್ವೀಟ್ ಸಾಕಷ್ಟಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದರು. ಈ ವಿಚಾರ ಸ್ವತಃ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್ ಅವರನ್ನು ಕೂಡ ತಲುಪಿದೆ. ಹೀಗಾಗಿ ಗಿಲ್‌ಕ್ರಿಸ್ಟ್ ಅವರೇ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೈರಲ್ ಪೋಸ್ಟ್‌ಗೆ ಸಂಬಂದಿಸಿದಂತೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಆಡಂ ಗಿಲ್‌ಕ್ರಿಸ್ಟ್ ಸ್ಪಷ್ಟನೆ ಏನು?

ಈ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಆಡಂ ಗಿಲ್‌ಕ್ರಿಸ್ಟ್ ಸ್ಪಷ್ಟನೆ ನೀಡುವ ಮೂಲಕ ಈ ಟ್ವೀಟ್‌ನ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಕೇವಲ ಮೂರು ಶಬ್ದಗಳಲ್ಲಿ ಈ ಟ್ವೀಟ್‌ಗೆ ಗಿಲ್‌ಕ್ರಿಸ್ಟ್ ಸ್ಪಷ್ಟನೆ ನೀಡಿದ್ದು ಅಭಿಮಾನಿಗಳ ಸಂದೇಹಕ್ಕೆ ಉತ್ತರ ನೀಡಿದ್ದಾರೆ. ಗಿಲ್‌ಕ್ರಿಸ್ಟ್ 'ನೆವರ್ ಸೆಡ್ ದಿಸ್' ಎಂದು ಗಿಲ್‌ಕ್ರಿಸ್ಟ್ ಪೋಸ್ಟ್ ಮಾಡಿದ್ದು ಈ ಮೂಲಕ ಈ ಮಾತುಗಳನ್ನು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Story first published: Thursday, September 21, 2023, 17:05 [IST]
Other articles published on Sep 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+