Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Afg Vs Pak T20: ಕೊನೆ ಪಂದ್ಯ ಗೆದ್ದ ಪಾಕಿಸ್ತಾನ : ಸರಣಿ ಗೆದ್ದು ಸಂಭ್ರಮಿಸಿದ ಅಫ್ಘಾನಿಸ್ತಾನ

Afg Vs Pak T20: Pakistan Manage To Win Last Match Of The T20 Series Against Pakistan To Avoin Whitewash

ಯುಎಇಯ ಶಾರ್ಜಾ ಅಂಗಳದಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿದೆ. ಈ ಗೆಲುವಿನ ಮೂಲಕ ಸರಣಿ ವೈಟ್‌ವಾಶ್ ಅವಮಾನವನ್ನು ತಪ್ಪಿಸಿಕೊಂಡಿದೆ. ಆದರೆ, ಅಫ್ಘಾನಿಸ್ತಾನ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದು ಸಂಭ್ರಮಿಸಿದೆ.

ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಭರ್ಜರಿ ಜಯ ಸಾಧಿಸಿತ್ತು. ಯಾವುದೇ ಮಾದರಿಯಲ್ಲಿ ಅಫ್ಘಾನಿಸ್ತಾನ ಪಾಕಿಸ್ತಾನ ವಿರುದ್ಧ ಇದುವರೆಗೂ ಪಂದ್ಯವನ್ನು ಗೆದ್ದಿರಲಿಲ್ಲ, ಆದರೆ ಈ ಬಾರಿ ಸತತವಾಗಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನೇ ಗೆದ್ದು ದಾಖಲೆ ಬರೆದಿದೆ.

ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಆಟಗಾರ ಮೊಹಮ್ಮದ್ ಹ್ಯಾರಿಸ್ ಮೂರನೇ ಪಂದ್ಯದಲ್ಲೂ ರನ್ ಗಳಿಸಲು ವಿಫಲವಾದರು. 3 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಸೈಯಮ್ ಅಯೂಬ್ ಮಾತ್ರ 40 ಎಸೆತಗಳಲ್ಲಿ 49 ರನ್ ಗಳಿಸಿ ಮಿಂಚಿದರು.

ತಯ್ಯಬ್ ತಾಹಿರ್ 9 ಎಸೆತಗಳಲ್ಲಿ 10 ರನ್ ಗಳಿಸಿದರು. ಅಬ್ದುಲ್ಲಾ ಶಫೀಕ್ 13 ಎಸೆತಗಳಲ್ಲಿ 1 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 23 ರನ್ ಗಳಿಸಿದರು. ಇಫ್ತಿಕರ್ ಅಹ್ಮದ್ 31 ರನ್ ಗಳಿಸಿದರೆ, ಇಮಾದ್ ವಾಸಿಮ್ 13 ರನ್ ಗಳಿಸಿದರು. ನಾಯಕ ಶದಾಬ್ ಖಾನ್ 17 ಎಸೆತಗಳಲ್ಲಿ 28 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.

Afg Vs Pak T20: Pakistan Manage To Win Last Match Of The T20 Series Against Pakistan To Avoin Whitewash

116 ರನ್‌ಗಳಿಗೆ ಆಲೌಟ್ ಆದ ಅಫ್ಘಾನಿಸ್ತಾನ

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಅಫ್ಘಾನಿಸ್ತಾನ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಯಿತು. ರೆಹಮನುಲ್ಲಾ ಗುರ್ಬಾಜ್ 11 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರೆ, ಸೆದಿಕುಲ್ಲಾ ಅಟಲ್ 11 ರನ್ ಗಳಿಸಿ ಔಟಾದರು. ಇಬ್ರಾಹಿಂ ಜರ್ದಾನ್ 3, ಉಸ್ಮಾನ್ ಘನಿ 15, ಮೊಹಮ್ಮದ್ ನಬಿ 17 ರನ್ ಗಳಿಸಿ ಔಟಾದರು.

ನಜಿಬುಲ್ಲಾ ಜರ್ದಾನ್, ಮುಜೀಬ್ ಉರ್ ರೆಹಮಾನ್ ಮತ್ತು ಕರೀಮ್ ಜನತ್ ಶೂನ್ಯಕ್ಕೆ ಔಟಾದರು. ನಾಯಕ ರಶೀದ್ ಖಾನ್ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅಜ್ಮತುಲ್ಲಾ ಒಮಾರ್ಜಿ 21 ರನ್ ಗಳಿಸಿದರು. 18.4 ಓವರ್ ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆದ ಅಫ್ಘಾನಿಸ್ತಾನ 66 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು.

ನಾಯಕ ಶದಾಬ್ ಖಾನ್ 4 ಓವರ್ ಗಳಲ್ಲಿ 13 ರನ್ ನೀಡಿ ಮೂರು ವಿಕೆಟ್ ಪಡೆದರು. ಇನ್ಶಾನುಲ್ಲಾ ಕೂಡ 4 ಓವರ್ ಗಳಲ್ಲಿ 29 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದರು. ಇಮಾದ್ ವಾಸಿಮ್, ಜಮಾನ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್ ತಲಾ ಒಂದು ವಿಕೆಟ್ ಪಡೆದರು.

Afg Vs Pak T20: Pakistan Manage To Win Last Match Of The T20 Series Against Pakistan To Avoin Whitewash

ಉಭಯ ತಂಡಗಳ ಪ್ಲೇಯಿಂಗ್ 11

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಉಸ್ಮಾನ್ ಘನಿ, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಸೇದಿಕುಲ್ಲಾ ಅಟಲ್, ರಶೀದ್ ಖಾನ್ (ನಾಯಕ), ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್, ಅಜ್ಮತುಲ್ಲಾ.

ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ತಯ್ಯಬ್ ತಾಹಿರ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್ (ನಾಯಕ), ಇಮಾದ್ ವಾಸಿಮ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಜಮಾನ್ ಖಾನ್, ಇಹ್ಸಾನುಲ್ಲ.

Story first published: Tuesday, March 28, 2023, 8:06 [IST]
Other articles published on Mar 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+