ರಸ್ತೆ ಅಪಘಾತ: ಕೋಮಾದಲ್ಲಿದ್ದ ಕ್ರಿಕೆಟಿಗನ ದುರ್ಮರಣ
ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತಾರಕೈ ಮಂಗಳವಾರ ಮೃತಪಟ್ಟಿದ್ದಾರೆ. ಕೋಮಾಕ್ಕೆ ಜಾರಿದ್ದ ನಜೀಬ್ ಅವರ ಜೀವ ಉಳಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ.
29 ವರ್ಷದ ನಜೀಬ್ ತಾರಕೈ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೋಮಾಕ್ಕೆ ಹೋಗಿದ್ದರು. ಅವರಿಗೆ ಪ್ರಜ್ಞೆ ಬರಿಸುವ ಪ್ರಯತ್ನಗಳು ಸಫಲವಾಗಲಿಲ್ಲ. ಈ ಅಪಘಾತದ ಸಂಗತಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಮಾಜಿ ಮಾಧ್ಯಮ ವ್ಯವಸ್ಥಾಪಕ ಎಂ. ಇಬ್ರಾಹಿಂ ಮೊಮಂಡ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಜಲಾಲಾಬಾದ್ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ 29 ವರ್ಷದ ನಜೀಬ್ ತಾರಕೈ ಅವರಿಗೆ ತೀವ್ರ ಗಾಯವಾಗಿದೆ. ಅವರ ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಕಳೆದ 22 ಗಂಟೆಗಳಿಂದ ಅವರು ಕೊಂಚವೂ ಕದಲಿಲ್ಲ. ಅವರನ್ನು ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ನಿಗಾದಲ್ಲಿ ಇರಿಸಿದ್ದಾರೆ ಎಂದು ಇಬ್ರಾಹಿಂ ಅವರು ಶನಿವಾರ ತಿಳಿಸಿದ್ದರು. ಮುಂದೆ ಓದಿ...

ಬೇರೆ ದೇಶಕ್ಕೆ ಸಾಗಿಸಲು ಮನವಿ
'ಮಾರಣಾಂತಿಕ ಅಪಘಾತ ಸಂಭವಿಸಿ ಈಗ 22 ಗಂಟೆಗಳಾಗಿವೆ. ರಾಷ್ಟ್ರೀಯ ಕ್ರಿಕೆಟಿಗ ನಜೀಬ್ ತಾರಕೈ ಅವರು ತಲೆಗೆ ಗಾಯವಾಗಿ ಕೋಮಾದಲ್ಲಿದ್ದಾರೆ. ಅವರನ್ನು ಕಾಬೂಲ್ ಅಥವಾ ಸಮೀಪದ ರಾಷ್ಟ್ರಗಳ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ' ಎಂದು ಅವರು ಹೇಳಿದ್ದರು.

ಎಸಿಬಿ ಸಂತಾಪ
ತಾರಕೈ ಅವರ ನಿಧನಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಶೋಕ ವ್ಯಕ್ತಪಡಿಸಿದೆ. 'ಎಸಿಬಿ ಮತ್ತು ಕ್ರಿಕೆಟ್ ಪ್ರೀತಿಸುವ ದೇಶವಾದ ಅಫ್ಘಾನಿಸ್ತಾನ್, ಟ್ರಾಫಿಕ್ ಅಪಘಾತದ ದುರಂತದಲ್ಲಿ ಆಕ್ರಮಣಕಾರಿ ಆರಂಭಿಕ ಆಟಗಾರ ಮತ್ತು ಬಹಳ ಮಾನವೀಯ ವ್ಯಕ್ತಿ ನಜೀಬ್ ತಾರಕೈ (29) ನಮ್ಮನ್ನೆಲ್ಲ ಅಗಲಿರುವ ಆಘಾತಕಾರಿ ಮತ್ತು ನೋವಿನ ಘಟನೆಗೆ ಸಂತಾಪ ವ್ಯಕ್ತಪಡಿಸುತ್ತಿದೆ. ಅವರ ಮೇಲೆ ಅಲ್ಲಾ ದಯೆ ತೋರಲಿ' ಎಂದು ಎಸಿಬಿ ಟ್ವೀಟ್ ಮಾಡಿದೆ.
ಟಿ20 ವಿಶ್ವಕಪ್ ಗೆಲ್ಲೋದು ನಮ್ಮ ಕನಸು: ಅಫ್ಘಾನ್ ನಾಯಕ ರಶೀದ್ ಖಾನ್

ಬಾಂಗ್ಲಾ ವಿರುದ್ಧ ಮೊದಲ-ಕೊನೆಯ ಪಂದ್ಯ
ಅಫ್ಘಾನಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಅವರು ಹೆಚ್ಚೇನೂ ಪಂದ್ಯಗಳನ್ನು ಆಡಿಲ್ಲ. 2014ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಪದಾರ್ಪಣೆ ಮಾಡಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಮೀರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟಿ-20 ಪಂದ್ಯ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

90 ಅತ್ಯಧಿಕ ಟಿ20 ಸ್ಕೋರ್
ನಜೀಬ್ ಅವರು ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು. ಅದರಲ್ಲಿ ಐದು ರನ್ ಗಳಿಸಿದ್ದರು. 12 ಟಿ20 ಪಂದ್ಯಗಳಲ್ಲಿ 122.85 ಸ್ಟ್ರೈಕ್ ರೇಟ್ ಮತ್ತು 21.50 ಸರಾಸರಿಯಲ್ಲಿ 258 ರನ್ ಗಳಿಸಿದ್ದರು. ಗ್ರೇಟರ್ ನೋಯ್ಡಾದಲ್ಲಿ 2017ರಲ್ಲಿ ನಡೆದ ಪಂದ್ಯದಲ್ಲಿ 90 ರನ್ ಗಳಿಸಿದ್ದು ಅವರ ಟಿ20ಯ ಅತ್ಯಧಿಕ ಸ್ಕೋರ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications