ಟಿ20 ವಿಶ್ವಕಪ್ ಗೆಲ್ಲೋದು ನಮ್ಮ ಕನಸು: ಅಫ್ಘಾನ್ ನಾಯಕ ರಶೀದ್ ಖಾನ್

ಕಾಬೂಲ್: ಟಿ20 ವಿಶ್ವಕಪ್‌ ಗೆಲ್ಲೋದು ನಮ್ಮ ಕನಸು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ವಿಶ್ವಕಪ್ ಗೆಲ್ಲಲು ತಮ್ಮ ತಂಡದಲ್ಲಿ ಎಲ್ಲಾ ವಿಭಾಗವೂ ಸಾಕಷ್ಟು ಶಕ್ತವಾಗಿದೆ ಎಂದು ರಶೀದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಕ್ವಾರಂಟೈನ್ ದಿನ ಕಡಿತಕ್ಕೆ ಇಂಗ್ಲೆಂಡ್-ಆಸೀಸ್ ಆಟಗಾರರಿಂದ ಪತ್ರ

ವಿಶ್ವಕಪ್ ಎತ್ತುವ ಈ ಕನಸನ್ನು ವಿಶ್ವದ ಬಲಿಷ್ಠ ತಂಡಗಳನ್ನು ಹೆಚ್ಚು ಬಾರಿ ಸೋಲಿಸುವ ಮೂಲಕ ಸಾಕಾರಗೊಳಿಸಬೇಕು ಎಂದು ರಶೀದ್ ಖಾನ್ ಹೇಳಿದ್ದಾರೆ. 2016ರ ವಿಶ್ವಕಪ್‌ ಪಂದ್ಯವೊಂದರಲ್ಲಿ ಅಫ್ಘಾನ್‌ ತಂಡ ಆ ವರ್ಷದ ಚಾಂಪಿಯನ್ಸ್ ತಂಡ ವೆಸ್ಟ್ ಇಂಡೀಸ್ ಅನ್ನು ಸೋಲಿಸಿತ್ತು.

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಟಿ20ಐ ಸರಣಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಅನ್ನು ಪರಾಭವಗೊಳಿಸಿತ್ತು. ಹೀಗಾಗಿ ಮುಂಬರಲಿರುವ ಟಿ20 ವಿಶ್ವಕಪ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ಅಫ್ಘಾನ್ ಕಣ್ಣಿಟ್ಟಿದೆ. ಈ ವರ್ಷ ನಡೆಯಲಿದ್ದ ಟಿ20 ವಿಶ್ವಕಪ್ ಕೊರೊನಾದಿಂದಾಗಿ ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ.

ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!

ಸುದ್ದಿಗಾರರೊಂದಿಗೆ ಮಾತನಾಡಿದ ರಶೀದ್, 'ಈಗಿನ ಮಟ್ಟಿಗೆ ಅಫ್ಘಾನ್ ಪಾಲಿಗೆ ದೊಡ್ಡ ಸಾಧನೆಯೆಂದರೆ ಟಿ20 ವಿಶ್ವಕಪ್ ಗೆಲ್ಲೋದು. ಯಾಕೆಂದರೆ ನಮಗೆ ಎಲ್ಲಾ ಕೌಶಲವಿದೆ, ಪ್ರತಿಭೆಯಿದೆ. ಆದರೆ ನಾವು ವಿಶ್ವಕಪ್‌ ಗೆದ್ದೇ ಗೆಲ್ಲುತ್ತೇವೆ ಅಂತ ನಮ್ಮಲ್ಲೇ ನಾವು ನಂಬಲು ಶುರು ಮಾಡಬೇಕಷ್ಟೇ,' ಎಂದು ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, September 15, 2020, 22:05 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X