For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ ಟಿ20 ಟೂರ್ನಿಗೂ ಮುನ್ನ ಪಾಕ್‌ ಆಘಾತ

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಗೆ ಮುನ್ನ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿದೆ. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 18 ರನ್‌ಗಳಿಂದ ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿದೆ. ಸ್ಟಾರ್‌ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಪಾಕ್‌ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಆಫ್ಘಾನಿಸ್ತಾನ ಪರ ಸೇದಿಕುಲ್ಲಾ ಅಟಲ್, ಇಬ್ರಾಹಿಂ ಜದ್ರಾನ್ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು.

ಟಾಸ್‌ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ವೇಳೆ ತಂಡದ ಆರಂಭ ಕಳಪೆಯಾಗಿತ್ತು. ರಹಮಾನುಲ್ಲಾ ಗುರ್ಬಾಜ್ (8) ರನ್‌ ಕಲೆ ಹಾಕುವಲ್ಲಿ ವಿಫಲರಾದರು. 10 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸೇದಿಕುಲ್ಲಾ ಅಟಲ್, ಇಬ್ರಾಹಿಂ ಜದ್ರಾನ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಅಫ್ಘಾನಿಸ್ತಾನ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್‌ ಪ್ರದರ್ಶನ ನೀಡಿ 34 ರನ್‌ ಕಲೆ ಹಾಕಿತು.

Afghanistan pulls off a stunning 18-run victory against Pakistan in T20 warm-up

ಎರಡನೇ ವಿಕೆಟ್‌ಗೆ ಸೇದಿಕುಲ್ಲಾ ಅಟಲ್, ಇಬ್ರಾಹಿಂ ಜದ್ರಾನ್ ಜೋಡಿ 80 ಎಸೆತಗಳಲ್ಲಿ 113 ರನ್‌ ಸೇರಿಸಿತು. ಸೇದಿಕುಲ್ಲಾ ಅಟಲ್ 3 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 64 ರನ್‌ ಸೇರಿಸಿತು. ಇಬ್ರಾಹಿಂ ಜದ್ರಾನ್ 8 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 65 ರನ್‌ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 169 ರನ್‌ ಸೇರಿಸಿತು. ಪಾಕ್‌ ಪರ ಫಾಹೀಮ್‌ ಅಶರ್ಫ್‌ 4 ವಿಕೆಟ್‌ ಕಬಳಿಸಿದರು.

ಪಾಕ್‌ ಬ್ಯಾಟರ್‌ಗಳ ವೈಫಲ್ಯ

ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಸೈಮ್ ಅಯೂಬ್‌ (0) ಸೊನ್ನೆ ಸುತ್ತಿದರು. ಸಾಹಿಬ್‌ಜಾದಾ ಫರ್ಹಾನ್ (18) ಜವಾಬ್ದಾರಿಯನ್ನು ಮರೆತರು. ಮಧ್ಯಮ ಕ್ರಮಾಂಕದಲ್ಲಿ ಫಖಾರ್ ಜಮಾನ್‌ (25), ಸಲ್ಮಾನ್‌ ಆಘಾ (20), ಹಸನ್‌ ನವಾಜ್‌ (9) ನಿರಾಸೆಯನ್ನು ಅನುಭವಿಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್‌ ಸೇರಿಸಿತು. ಅಫ್ಘಾನಿಸ್ತಾನ ತಂಡದ ಪರ ಫಜಲ್ಹಕ್ ಫಾರೂಕಿ, ರಶೀದ್ ಖಾನ್, ಮೊಹಮ್ಮದ್ ನಬಿ, ನೂರ್ ಅಹ್ಮದ್ ತಲಾ ಎರಡು ವಿಕೆಟ್‌ ಪಡದು ಗೆಲುವಿನಲ್ಲಿ ಮಿಂಚಿದರು.

Afghanistan pulls off a stunning 18-run victory against Pakistan in T20 warm-up

ತ್ರಿಕೋನ ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ಪಾಕ್‌ 4 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಇಷ್ಟೇ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಯುಎಇ ಗೆಲುವಿನ ಖಾತೆಯನ್ನು ಇನ್ನು ತೆರೆದಿಲ್ಲ. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ಗೂ ಮುನ್ನ ಪಾಕ್‌ ತಂಡಕ್ಕೆ ಈ ಸೋಲು ನಿರಾಸೆ ತಂದಿದೆ.

Story first published: Wednesday, September 3, 2025, 9:35 [IST]
Other articles published on Sep 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+