Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದಿಗ್ಗಜನಿಂದ ಮಹತ್ವದ ಟಿಪ್ಸ್ ಪಡೆದ ಆಫ್ಘಾನ್ ತಂಡ!

ಮಂಗಳವಾರ, ನವೆಂಬರ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ನಿರ್ಣಾಯಕ ಪಂದ್ಯದ ಮುನ್ನಾದಿನದಂದು ಅಫ್ಘಾನಿಸ್ತಾನ ತಂಡವು ವಿಶೇಷ ಅತಿಥಿಯೊಂದಿಗೆ ಮಹತ್ವದ ಮಾತುಕತೆ ನಡಸಿತು. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ತಂಡದ ವಿರುದ್ಧದ ದೊಡ್ಡ ಪಂದ್ಯಕ್ಕೆ ಮುಂಚಿತವಾಗಿ ಯುವ ಅಫ್ಘಾನಿಸ್ತಾನ ತಂಡಕ್ಕೆ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಕೆಲವು ಸಲಹೆ ನೀಡಿದರು.

ಸೋಮವಾರ ಸಂಜೆ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ಆಟಗಾರರ ಅಭ್ಯಾಸದ ಅವಧಿ ಪ್ರಾರಂಭವಾಗುವ ಮೊದಲು, ಅವರು ಸುಮಾರು 20 ನಿಮಿಷಗಳ ಕಾಲ ಸಂವಾದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರನ್ನು ಸುತ್ತುವರಿದರು.

afghanistan-team-received-important-tips

ಸಚಿನ್ ತೆಂಡೂಲ್ಕರ್ ಕಪ್ಪು ಮತ್ತು ಬೂದು ಬಣ್ಣದ ಪಟ್ಟಿಯ ಶರ್ಟ್ ಧರಿಸಿ, ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಫ್ಘಾನ ಆಟಗಾರರು ಮಾಸ್ಟರ್ ಬ್ಲಾಸ್ಟರ್ ಅವರ ಮಾತುಗಳನ್ನು ಗಮನದಿಂದ ಕೇಳುತ್ತಿರುವುದು ಕಂಡುಬಂತು.

ನಂತರ, ಸಚಿನ್ ತೆಂಡೂಲ್ಕರ್ ತನ್ನ ಹಳೆಯ ಸ್ನೇಹಿತ ಅಜಯ್ ಜಡೇಜಾ, ಪ್ರಸ್ತುತ ಅಫ್ಘಾನಿಸ್ತಾನ ತಂಡದ ಮಾರ್ಗದರ್ಶಕ ಮತ್ತು ಕೋಚ್ ಜೊನಾಥನ್ ಟ್ರಾಟ್ ಅವರೊಂದಿಗೆ ಪಿಚ್ ಸುತ್ತಲೂ ನಡೆದರು.

ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮಿರ್ವೈಸ್ ಅಶ್ರಫ್ ಅವರು ತಮ್ಮ ತಂಡದ ಇದುವರೆಗಿನ ಪ್ರಯಾಣದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

afghanistan-team-received-important-tips

ಮಾಜಿ ಚಾಂಪಿಯನ್ ಶ್ರೀಲಂಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಸೋಲಿಸಿದ ಅಫ್ಘಾನಿಸ್ತಾನ ತಂಡವು 2023ರ ವಿಶ್ವಕಪ್‌ನಲ್ಲಿ ಪ್ರಭಾವಶಾಲಿಯಾಗಿ ಮುನ್ನುಗ್ಗುತ್ತಿದೆ.

ಕೇವಲ ಒಂದು ಪಂದ್ಯದ ಹಿಂದಿನ ವಿಶ್ವಕಪ್ ಗೆಲುವಿನೊಂದಿಗೆ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಪ್ರವೇಶಿಸಿದ ನಂತರ, ಅಫ್ಘಾನಿಸ್ತಾನ ತಂಡವು ತನ್ನ ಮೊದಲ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ರೇಸ್‌ನಲ್ಲಿ ತನ್ನನ್ನು ತಾನು ಉಳಿಸಿಕೊಂಡಿದೆ.

afghanistan-team-received-important-tips


"ದೀರ್ಘಕಾಲದಿಂದ ಅಫ್ಘಾನಿಸ್ತಾನ ಆಟಗಾರರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದರು. ತಂಡವು ಮುಂಬೈನಲ್ಲಿರುವುದರಿಂದ, ಆಟಗಾರರೊಂದಿಗೆ ಸಂವಾದ ನಡೆಸಲು ಅಜಯ್ ಜಡೇಜಾ ಸರ್ ಅವರನ್ನು ಆಹ್ವಾನಿಸಿದರು. ಇದೊಂದು ಅದ್ಭುತ ಕ್ಷಣವಾಗಿತ್ತು," ಎಂದು ತಂಡದ ಮೂಲವೊಂದು ತಿಳಿಸಿದೆ.

ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಕೂಡ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಲು ಉತ್ಸುಕರಾಗಿದ್ದರು. ಇದು ಅವರೊಂದಿಗಿನ ನಮ್ಮ ಮೊದಲ ಭೇಟಿಯಾಗಿದೆ ಎಂದು ಶಾಹಿದಿ ನಗುತ್ತಾ ಹೇಳಿದರು. "ನಾವೆಲ್ಲರೂ ಉತ್ಸುಕರಾಗಿದ್ದೆವು. ಏಕೆಂದರೆ ಅವರು ಆಟದ ದಂತಕಥೆಯಾಗಿದ್ದಾರೆ. ನಾವು ಅವರನ್ನು ಟಿವಿಯಲ್ಲಿ ಯಶಸ್ವಿ ಆಟಗಾರನಾಗಿ ನೋಡಿದ್ದೇವೆ," ಎಂದರು ಹೇಳಿದರು.

"ನಮ್ಮ ಬಹಳಷ್ಟು ಆಟಗಾರರಿಗೆ ಅವರು ಮಾದರಿಯಾಗಿದ್ದಾರೆ. ಆದ್ದರಿಂದ ಇಡೀ ತಂಡಕ್ಕೆ ಇದೊಂದು ರೋಚಕ ಸಮಯವಾಗಿರುತ್ತದೆ," ಎಂದು ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ತಿಳಿಸಿದರು.

Story first published: Monday, November 6, 2023, 20:36 [IST]
Other articles published on Nov 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+