For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಗೆ ಅಫ್ಘಾನಿಸ್ತಾನ ರೆಡಿ: 2022ರ ಮಾರ್ಚ್‌ಗೆ ಟೂರ್ನಮೆಂಟ್

Afghanistan

ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡವು 2022-23ರ ಅವರ ಭವಿಷ್ಯದ ಪ್ರವಾಸ ಕಾರ್ಯಕ್ರಮದ (ಎಫ್‌ಟಿಪಿ) ವೇಳಾಪಟ್ಟಿಯಂತೆ ಮುಂದಿನ ವರ್ಷ ಮಾರ್ಚ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನ ಎದುರಿಸಲಿದೆ.

ಅವರ ವೇಳಾಪಟ್ಟಿಯ ಪ್ರಕಾರ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅಫ್ಘಾನ್ ರಾಷ್ಟ್ರೀಯ ತಂಡವು 52 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದರಲ್ಲಿ 37 ಏಕದಿನ ಪಂದ್ಯಗಳು 12 ಟಿ20 ಪಂದ್ಯಗಳು, ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಫ್ಘಾನಿಸ್ತಾನವು 2022 ರಲ್ಲಿ ಏಷ್ಯಾ ಕಪ್ ಮತ್ತು ಅದೇ ವರ್ಷ ICC T20 ವಿಶ್ವಕಪ್, ನಂತರ ಏಷ್ಯಾ ಕಪ್ ಮತ್ತು 2023 ರಲ್ಲಿ ICC 50 ಓವರ್ ವಿಶ್ವಕಪ್ ಅನ್ನು ಆಡಲಿದೆ.

"ನಾವು ಸೀಮಿತ-ಓವರ್‌ಗಳ ಕ್ರಿಕೆಟ್ ಮತ್ತು ಟೆಸ್ಟ್ ಸ್ವರೂಪಕ್ಕೆ ಪಂದ್ಯಗಳಲ್ಲಿ ವಿಭಜಿಸಿದರೆ, ಅಫ್ಘಾನಿಸ್ತಾನದ ಗಮನವು ಸಣ್ಣ ಸ್ವರೂಪಗಳ ಕ್ರಿಕೆಟ್ ಮೇಲೆ ಇರುತ್ತದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಸೋಮವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಅಫ್ಘಾನಿಸ್ತಾನ ಏಳು ಏಕದಿನ ಸರಣಿಗಳನ್ನು ಆಡಲಿದೆ. ಇದಲ್ಲೆ ಏಷ್ಯಾ ಕಪ್ 2022 (ಟಿ20 ಸ್ವರೂಪ), ಸೇರಿದಂತೆ ನಾಲ್ಕು ಪ್ರಮುಖ ಸೀಮಿತ ಓವರ್‌ಗಳಲ್ಲಿ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲಿದೆ ಎಂಬ ಅಂಶವನ್ನು ಇಲ್ಲಿ ಪರಿಗಣಿಸಬಹುದು. ಏಷ್ಯಾ ಕಪ್ 2023 (ODI ಸ್ವರೂಪ) ಮತ್ತು ICC ಕ್ರಿಕೆಟ್ ವಿಶ್ವಕಪ್ 2023 ಇದರಲ್ಲಿ ಸೇರಿವೆ.

ಅಫ್ಘಾನಿಸ್ತಾನವು ಮುಂದಿನ ವರ್ಷ ಜನವರಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ಸರಣಿಯೊಂದಿಗೆ ಪ್ರಾರಂಭಿಸುತ್ತದೆ. ಜಿಂಬಾಬ್ವೆ ವಿರುದ್ಧ ಎರಡು ಟಿ20, 5 ಏಕದಿನ ಪಂದ್ಯ, 2 ಟೆಸ್ಟ್ ಪಂದ್ಯಗಳಿಂದ ವರ್ಷವನ್ನು ಕೊನೆಗೊಳಿಸುತ್ತದೆ.

Story first published: Wednesday, December 15, 2021, 9:56 [IST]
Other articles published on Dec 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+