Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ವಿರುದ್ಧ ತನ್ನ ಮೊದಲ ಟೆಸ್ಟ್ ಆಡಲಿದೆ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ

ನವದೆಹಲಿ, ಡಿಸೆಂಬರ್ 8: ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತನ್ನ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ.

2019-2020ರಲ್ಲಿ ಅಫ್ಘಾನಿಸ್ತಾನ-ಭಾರತ ಟೆಸ್ಟ್ ಪಮದ್ಯ ನಡೆಯಲಿದ್ದು, ಸರಣಿಯ ಆತಿಥ್ಯವನ್ನು ಭಾರತವೇ ವಹಿಸಲಿದೆ ಹೀಗೆಂದು ಈ ವಿಷಯವನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.

Afghanistan to play its first cricket test match against India

ಅಫ್ಘಾನಿಸ್ತಾನ ತಂಡ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲು ಸಜ್ಜಾಗಿತ್ತು, ಆದರೆ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಐತಿಹಾಸಿಕ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಅವರ ಮೊದಲ ಪಂದ್ಯಕ್ಕೆ ನಾವೇ ವೇದಿಕೆ ಒದಗಿಸಲು ನಿರ್ಧರಿಸಿದ್ದೇವೆ' ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌದರಿ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.

ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಈ ವರ್ಷ ಐಸಿಸಿಯ ಪೂರ್ಣ ಸದಸ್ಯರಾಗಿದ್ದಾರೆ ಹಾಗಾಗಿ ಆ ಎರಡೂ ದೇಶಗಳು ಟೆಸ್ಟ್ ಆಡುವ 11 ಮತ್ತು 12ನೇ ದೇಶಗಳಾಗಿ ಗುರುತಿಸಿಕೊಂಡಿವೆ.

ಸತತ ಆಂತರಿಕ ಮತ್ತು ಬಾಹ್ಯ ಯುದ್ಧದಿಂದ ಜರ್ಜರಿತಗೊಂಡಿರುವ ದೇಶಕ್ಕೆ ಈ ಮುಂಚೆಯೂ ಅನೇಕ ವಿಧವಾಗಿ ಸಹಾಯ ಹಸ್ತ ಚಾಚಿದ್ದ ಭಾರತ ಮತ್ತು ಬಿಸಿಸಿಐ ಈ ಬಾರಿ ಹೆಚ್ಚಿನ ನೆರವಿನ ಹಸ್ತ ಚಾಚಿದೆ. ಯುದ್ಧ ಪೀಡಿತ ನೆಲದಲ್ಲಿ ಕ್ರೀಡಾ ಪ್ರೀತಿ ಅರಳಿಸುವ ಪ್ರಯತ್ನವನ್ನು ಬಿಸಿಸಿಐ ಮಾಡುತ್ತಿದೆ.

Afghanistan to play its first cricket test match against India

ಬಿಸಿಸಿಐ ಜತೆಗೆ ಉತ್ತಮ ಬಾಂದವ್ಯ ಹೊಂದಿರುವ ಅಫ್ಘಾನಿಸ್ತಾನ ತನ್ನ ತವರು ನೆಲದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ-ಐರ್ಲೆಂಡ್ ನಡುವಿನ ಪಂದ್ಯವನ್ನು ಬಿಸಿಸಿಐ ಅನುಮತಿಯೊಂದಿಗೆ ಭಾರತದ ಗ್ರೇಟರ್ ನೋಯಿಡಾದಲ್ಲಿ ನಡೆಸಿತ್ತು.

ಅಫ್ಘಾನಿಸ್ತಾನದ ರಷೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರನ್ನು ಇದೇ ವರ್ಷಾರಂಭದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಹರಾಜಿಗೆ ಪರಿಗಣಿಸಲಾಗಿತ್ತು.

ಪಾಕಿಸ್ತಾನದೊಂದಿಗೆ ಸರಣಿ
ಭಾರತ ಸರ್ಕಾರ ಒಪ್ಪಿಗೆ ನೀಡುವುದಾದರೆ ಬಿಸಿಸಿಐ ಭಾರತ-ಪಾಕಿಸ್ತಾನ ಸರಣಿ ಆಯೋಜಿಸಲು ಸಿದ್ದವಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌದರಿ ಇದೇ ಸಮಯದಲ್ಲಿ ಹೇಳಿದರು.

ಭಾರತ-ಪಾಕಿಸ್ತಾನ ನಡುವಿನ ಸಂಬಂದ ವಿಷಮ ಪರಿಸ್ಥಿತಿಯಲ್ಲಿರುವುದರಿಂದ ಭಾರತ ಸರ್ಕಾರ ಕ್ರಿಕೆಟ್ ಸರಣಿಗೆ ಹಸಿರು ನಿಶಾನೆ ತೋರಿಸುವುದು ಕಷ್ಟಸಾಧ್ಯ ಎನಿಸಿದೆ. ಆದರೆ ಬಿಸಿಸಿಐ ಭಾರತ-ಪಾಕಿಸ್ತಾನ ಸರಣಿ ಆಯೋಜಿಸಲು ಉತ್ಸುಕವಾಗಿರುವುದು ಕ್ರೀಡಾ ಪ್ರೇಮಿಗಳಲ್ಲಿ ಸಣ್ಣ ಆಸೆ ಚಿಗುರಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಸರಣಿ 2012ರಲ್ಲಿ ನಡೆದಿತ್ತು.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+