ಭಾರತದಲ್ಲಿ ಅಫ್ಘಾನಿಸ್ತಾನ-ವೆಸ್ಟ್ ಇಂಡೀಸ್, 1ನೇ ಏಕದಿನ, Live ಸ್ಕೋರ್

ಲಕ್ನೋ, ನವೆಂಬರ್ 6: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಲಕ್ನೋದಲ್ಲಿ ಬುಧವಾರ (ನವೆಂಬರ್ 6) ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೊದಲನೇ ಏಕದಿನ ಪಂದ್ಯವನ್ನಾಡುತ್ತಿವೆ. ಟಾಸ್ ಗೆದ್ದಿರುವ ವಿಂಡೀಸ್ ಬೌಲಿಂಗ್ ಆಯ್ದುಕೊಂಡಿದೆ.
ವೆಸ್ಟ್ ಇಂಡೀಸ್ ತಂಡವನ್ನು ಆಲ್ ರೌಂಡರ್ ಕೀರನ್ ಪೊಲಾರ್ಡ್ ಮುನ್ನಡೆಸುತ್ತಿದ್ದರೆ, ಅಫ್ಘಾನ್‌ಗೆ ಆರ್ ರೌಂಡರ್ ರಶೀದ್ ಖಾನ್ ನಾಯಕ. ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು 3 ಏಕದಿನ ಪಂದ್ಯಗಳು, 3 ಟಿ20 ಪಂದ್ಯಗಳು ಮತ್ತು ಏಕಮಾತ್ರ ಟೆಸ್ಟ್ ಪಂದ್ಯವನ್ನಾಡಲಿವೆ.
ಅಫ್ಘಾನ್ vs ವಿಂಡೀಸ್, 1ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್
ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಝಾಯ್, ಜಾವೇದ್ ಅಹ್ಮದಿ, ರಹಮತ್ ಷಾ, ಇಕ್ರಮ್ ಅಲಿ ಖಿಲ್ (ವಿಕೆ), ಅಸ್ಗರ್ ಅಫ್ಘಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬಾದೀನ್ ನೈಬ್, ರಶೀದ್ ಖಾನ್ (ಸಿ), ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್.
ವೆಸ್ಟ್ ಇಂಡೀಸ್ ತಂಡ: ಎವಿನ್ ಲೆವಿಸ್, ಶೈ ಹೋಪ್ (ವಿಕೆ), ಶಿಮ್ರಾನ್ ಹೆಟ್ಮೈರ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್ (ಸಿ), ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್, ಅಲ್ಜಾರಿ ಜೋಸೆಫ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications