ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್‌ಗೆ ಶಾಹಿದ್ ಅಫ್ರಿದಿ ತಿರುಗೇಟು!

ಇಸ್ಲಮಾಬಾದ್, ಏಪ್ರಿಲ್ 13: ಭಾರತ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಗೆದ್ದಾಗ ಭಾರತದ ನಾಯಕತ್ವ ವಹಿಸಿದ್ದ ದಂತಕತೆ ಕಪಿಲ್ ದೇವ್ ಅವರ ಮಾತಿನಿಂದ ಬೇಸರಗೊಂಡಿರುವ ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದಾರೆ. ದೇವ್ ಮಾತಿನಿಂದ ಅಚ್ಚರಿಯಾಗಿದೆ ಎಂದು ಅಫ್ರಿದಿ ಹೇಳಿದ್ದಾರೆ. ಅಸಲಿಗೆ ಕತೆ ಶುರುವಾಗಿದ್ದು ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಅವರಿಂದ.
ಕೊರೊನಾವೈರಸ್ ಸೋಂಕಿನಿಂದ ತೊಂದರೆಗೀಡಾಗಿರುವ ಭಾರತ-ಪಾಕ್ ದೇಶಗಳಿಗೆ ನೆರವಾಗುವಂತೆ ಅಖ್ತರ್ ಸಲಹೆಯೊಂದನ್ನು ನೀಡಿದ್ದರು. ಅದಕ್ಕೆ ಅವೊಪ್ಪಿಗೆ ಸೂಚಿಸಿ ಕಪಿಲ್ ದೇವ್ ಮಾತನಾಡಿದ್ದರು. ಇದು ಅಖ್ತರ್‌ಗೆ ಸರಿ ಕಂಡಿಲ್ಲ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಇಂಡೋ-ಪಾಕ್ ಎರಡೂ ದೇಶಗಳು ಕೈ ಸೇರಿಸಬೇಕು. ಇಂಡೋ-ಪಾಕ್ ಸರಣಿ ಮೂಲಕ ಹಣ ಸಂಗ್ರಹಿಸೋಣ ಎಂದು ಅಖ್ತರ್ ಹೇಳಿದ್ದರು.

ಕಪಿಲ್ ದೇವ್ ಮಾತು
ಅಖ್ತರ್ ಸಲಹೆಗೆ ಭಾರತದ ಮಾಜಿ ನಾಯಕ ಕಪಿಲ್ ವಿರುದ್ಧವಾಗಿ ಮಾತನಾಡಿದ್ದರು. ಇಂಡೋ-ಪಾಕ್ ಸರಣಿಯ ಮೂಲಕ ಹಣ ಸಂಗ್ರಹಿಸುವ ಅಗತ್ಯವಿಲ್ಲ. ಭಾರತ ದೇಶ ಕೊರೊನಾ ಎದುರಿಸಲು ಆರ್ಥಿಕವಾಗಿ ಶಕ್ತವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

ದೇವ್ ಮಾತಿಗೆ ಅಖ್ತರ್ ಪ್ರತಿಕ್ರಿಯೆ
ತನ್ನ ವಿಚಾರವೇನು ಅನ್ನುವುದನ್ನು ಕಪಿಲ್ ಭಾಯ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಭಾರತದಿಂದ ನನಗೆ ಸಾಕಷ್ಟು ಪ್ರೀತಿ ದೊರೆತಿದೆ ಮತ್ತು ಉಭಯ ದೇಶಗಳ ನಡುವೆ ಉತ್ತಮ ಸಂಬಂಧವನ್ನು ನಾನು ಬಯಸುತ್ತೇನೆ, ಹಳೆ ದ್ವೇಷ-ಬೇಧ ಮರೆತು ಎಲ್ಲರೂ ಕೈಜೋಡಿಸಬೇಕಾದ ಸಮಯ ಇದು ಎಂದು ಅಖ್ತರ್ ಹೇಳಿದ್ದರು.

ಕಪಿಲ್ ಮಾತಿನಿಂದ ಅಚ್ಚರಿಯಾಗಿದೆ
ಪಾಕಿಸ್ತಾನದ ಕೊಹಾತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಫ್ರಿದಿ, 'ಅಖ್ತರ್ ಮಾತಿನಲ್ಲಿ ತಪ್ಪಿಲ್ಲ. ನನಗೆ ಕಪಿಲ್ ದೇವ್ ಮತ್ತು ಐಪಿಎಲ್ ಅಧ್ಯಕ್ಷರಾಜೀವ್ ಶುಕ್ಲಾ, ಅಖ್ತರ್ ಸಲಹೆ ನಿರಾಕರಿಸಿದ್ದು ನೋಡಿ ಅಚ್ಚರಿಯಾಗಿದೆ. ಇಡೀ ವಿಶ್ವವೇ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದೆ. ಮಾರಕ ಸೋಂಕು ಎದುರಿಸಲು ನೆರೆಯ ರಾಷ್ಟ್ರಗಳಾದ ನಮ್ಮಲ್ಲೂ ಒಗ್ಗಟ್ಟು ಬೇಕು. ಇಂಥ ನಕಾರಾತ್ಮಕ ಕಾಮೆಂಟ್‌ಗಳು ಈ ರೀತಿಯ ಸಮಯದಲ್ಲಿ ನಮ್ಮನ್ನು ಪಾರು ಮಾಡಲ್ಲ,' ಎಂದಿದ್ದಾರೆ.

ದೇವ್‌ರಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ
'ಕಪಿಲ್ ದೇವ್ ಪ್ರತಿಕ್ರಿಯೆ ನನ್ನನ್ನು ನಿಜಕ್ಕೂ ಅಚ್ಚರಿಗೊಳಿಸಿತು. ಅವರಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ. ಅದೂ ಇಂಥ ಬಿಕ್ಕಟ್ಟಿನ ಸಮಯದಲ್ಲೂ ಈ ರೀತಿ ನೆಗೆಟಿವ್ ಮಾತನಾಡಿದ್ದು ಸರಿಯಲ್ಲ,' ಎಂದು ಅಖ್ತರ್ ಹೇಳಿದ್ದಾರೆ. ಅಲ್ಲದೆ ತನ್ನ ಚಾರಿಟಿಗೆ ಬೆಂಬಲ ಸೂಚಿಸಿದ್ದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಬಗ್ಗೆ ಕೂಡ ನಕಾರಾತ್ಮಕ ಕಾಮೆಂಟ್ ಮಾಡಿದ್ದು ಬೇಸರ ತಂದಿತ್ತು ಎಂದೂ ಅಫ್ರಿದಿ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications