For Quick Alerts
ALLOW NOTIFICATIONS  
For Daily Alerts
 

ಭಾರತ ದ್ವಿತೀಯ ದರ್ಜೆಯ ತಂಡವಲ್ಲ: ರಣತುಂಗಾ ವಾಗ್ದಾಳಿಗೆ ಲಂಕಾ ಮಂಡಳಿ ತಿರುಗೇಟು

After Arjuna Ranatunga slammed the home board, Sri Lanka Cricket replies

ಶಿಖರ್ ಧವನ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಸರಣಿಗೆ ಭರ್ಜರಿ ಸಿದ್ಧತೆಯನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿ ಕಾರಿದ್ದರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದ್ವಿತೀಯ ದರ್ಜೆಯ ಭಾರತ ತಂಡ ಆಗಮಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದೆ.

ಅರ್ಜುನ ರಣತುಂಗಾ ಅವರ ಆಪಾದನೆಯನ್ನು ಶ್ರಿಲಂಕಾ ಕ್ರಿಕೆಟ್ ನೇರವಾಗಿ ತಳ್ಳಿ ಹಾಕಿದೆ. ಶಿಖರ್ ಧವನ್ ನೇತೃತ್ವದ ಭಾರತ ತಂಡ ದ್ವಿತಿಯ ದರ್ಜೆ ತಂಡ ಎಂಬ ಮಾತನ್ನು ಲಂಕಾ ಮಂಡಳಿ ತಳ್ಳಿ ಹಾಕಿದ್ದು ಧವನ್ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ ಎಂದಿದ್ದಾರೆ.

ಲಂಕಾ ಮಂಡಳಿ ವಿರುದ್ಧ ರಣತುಂಗಾ ಕಿಡಿ

ಲಂಕಾ ಮಂಡಳಿ ವಿರುದ್ಧ ರಣತುಂಗಾ ಕಿಡಿ

ಪಿಟಿಐಗೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಅರ್ಜುನ ರಣತುಂಗಾ "ಭಾರತದ ದ್ವಿತೀಯ ದರ್ಜೆಯ ಶ್ರೀಲಂಕಾಕ್ಕೆ ಪ್ರವಾಸ ಬರುತ್ತಿದೆ. ಇದು ನಮ್ಮ ಕ್ರಿಕೆಟ್‌ಗೆ ದೊಡ್ಡ ಅವಮಾನ. ಟೆಲಿವಿಶನ್ ಮಾರ್ಕೆಟಿಂಗ್ ಅಗತ್ಯಕ್ಕಾಗಿ ಭಾರತದ ವಿರುದ್ಧ ಆಡಲು ಒಪ್ಪಿರುವುದಕ್ಕಾಗಿ ನಾನು ಇಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಯನ್ನು ನಾನು ದೂಷಿಸುತ್ತೇನೆ," ಎಂಬ ಹೇಳಿಕೆಯನ್ನು ನೀಡಿದ್ದರು.

ಭಾರತ ಬಲಿಷ್ಠ ತಂಡ ಎಂದ ಶ್ರೀಲಂಕಾ ಕ್ರಿಕೆಟ್

ಭಾರತ ಬಲಿಷ್ಠ ತಂಡ ಎಂದ ಶ್ರೀಲಂಕಾ ಕ್ರಿಕೆಟ್

ಶ್ರೀಲಂಕಾಗೆ ಪ್ರವಾಸ ಕೈಗೊಂಡಿರುವ ತಂಡಕ್ಕೆ 20 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 6 ಅನ್‌ಕ್ಯಾಪ್‌ಡ್ ಆಟಗಾರರು ಇದ್ದಾರೆ. ಈ ಬಗ್ಗೆ ಲಂಕಾ ಮಂಡಳಿ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. 20 ಆಟಗಾರರ ಪೈಕಿ 14 ಮಂದಿ ಕ್ರಿಕೆಟಿಗರು ಎಲ್ಲಾ ಮಾದರಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರರಾಗಿದ್ದಾರೆ. ಹೀಗಾಗಿ ಶಿಖರ್ ಧವನ್ ನೇತೃತ್ವದ ಭಾರತ ತಂಡ ಅತ್ಯಂತ ಬಲಿಷ್ಠವಾಗಿದೆ ಎಂದಿದೆ.

"ಈ ಪರಿಸ್ಥಿತಿಯಲ್ಲಿ ಸಾಮಾನ್ಯ"

ಇನ್ನು ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ತಂಡಗಳು ಒಂದೇ ಸಂದರ್ಭದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸುತ್ತವೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತ್ತೀಚಿನ ಸಾಮಾನ್ಯ ಪ್ರಕ್ರಿಯೆ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ. ಭಾರತ ಶ್ರಿಲಂಕಾ ತಂಡದ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಲಂಕಾಗೆ ಪ್ರವಾಸ ಕೈಗೊಂಡ ಭಾರತ ತಂಡ

ಲಂಕಾಗೆ ಪ್ರವಾಸ ಕೈಗೊಂಡ ಭಾರತ ತಂಡ

ಭಾರತದ ತಂಡ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗೈಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ

Story first published: Friday, July 2, 2021, 22:00 [IST]
Other articles published on Jul 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+