ದೀಪಕ್ ಚಹಾರ್ ಬಳಿಕ ಸಿಎಸ್‌ಕೆಯ ಮತ್ತೊಬ್ಬ ಆಟಗಾರನಿಗೆ ಕೊರೊನಾ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಬಲಿಷ್ಠ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್‌ನ ವೇಗಿ ದೀಪರ್ ಚಹಾರ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಸಿಎಸ್‌ಕೆಯ 10 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿತ್ತು. ಸಿಎಸ್‌ಕೆ ಮತ್ತೊಬ್ಬ ಆಟಗಾರ ರುತುರಾಜ್ ಗಾಯಕ್ವಾಡ್‌ಗೂ ಕೋವಿಡ್ 19 ಸೋಂಕು ತಗುಲಿರುವುದು ತಿಳಿದುಬಂದಿದೆ.
ದುಬೈನಲ್ಲಿರುವ ಸಿಎಸ್‌ಕೆ ತಂಡದಲ್ಲಿ ಕೊರೊನಾ ತಾಗಿದ ಎರಡನೇ ಆಟಗಾರನಾಗಿ ಬಲಗೈ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಗುರುತಿಸಿಕೊಂಡಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಶುರುವಾಗಲು ಇನ್ನು ಎರಡು ವಾರಗಳಷ್ಟೇ ಬಾಕಿಯಿದೆ. ಈ ಮಧ್ಯೆ ಐಪಿಎಲ್‌ಗೆ ಕೊರೊನಾ ಕಂಟಕ ಕಾಡಲಾರಂಭಿಸಿದೆ.
ಐಪಿಎಲ್ 8 ಫ್ರಾಂಚೈಸಿಗಳಲ್ಲಿ ಸಿಎಸ್‌ಕೆ ಮಾತ್ರ ಯುಎಇಗೆ ಹೊರಡುವುದಕ್ಕೂ ಮುನ್ನ ಭಾರತದಲ್ಲಿ ಕ್ಯಾಂಪ್ ನಡೆಸಿತ್ತು ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ. ಕೊರೊನಾ ಪಾಸಿಟಿವ್ ಬಂದಿರುವ ಆಟಗಾರರು ಬಯೋ ಬಬಲ್‌ನಿಂದ ಹೊರಗಿದ್ದು 14 ದಿನಗಳ ಕ್ವಾರಂಟೈನ್ ಪಾಲಿಸಲಿದ್ದಾರೆ.
ಯುಎಇ ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೊರೊನಾ ಪಾಸಿಟಿವ್ ಬಂದಿರುವ ಆಟಗಾರರು 14 ದಿನಗಳ ಕ್ವಾರಂಟೈನ್ ವೇಳೆ ಮತ್ತೆ 10, 13 ಮತ್ತು 14 ದಿನಗಳಿಗೆ ಪರೀಕ್ಷೆಗೆ ಒಳಗಾಗಬೇಕಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications