ಐಪಿಎಲ್ ನಂತರ ಟಿ20 ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯ

ಬೆಂಗಳೂರು, ಮೇ 05: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ನಂತರ ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಆಡಲು ಸಜ್ಜಾಗಿದ್ದಾರೆ. ಕೊಹ್ಲಿ ಅವರು ಸರೆ ಪರ ಆಡಲಿದ್ದಾರೆ. ಆದರೆ, ಈ ನಡುವೆ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಕೌಂಟಿ ಕ್ರಿಕೆಟ್ ಆಡಲಿರುವ ಕೊಹ್ಲಿ ಅವರು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಹಾಗೂ ಐರ್ಲೆಂಡ್ ವಿರುದ್ಧದ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕೊಹ್ಲಿ ಅವರು ಅಲಭ್ಯರಾಗಲಿದೆ. ಜೂನ್ ತಿಂಗಳ ಕೊನೆವಾರದಲ್ಲಿ ಪಂದ್ಯಗಳು ನಿಗದಿಯಾಗಿವೆ.
ವಿರಾಟ್ ಕೊಹ್ಲಿ ಅವರು ಜೂನ್ 25ರಂದು ಯಾರ್ಕ್ ಶೈರ್ ವಿರುದ್ಧ ಆಡಲಿದ್ದಾರೆ. ಇದಾದ ಎರಡು ದಿನ ಬಳಿಕ ಐರ್ಲೆಂಡ್ ವಿರುದ್ಧದ ಟಿ20ಐ ಪಂದ್ಯಗಳು ನಡೆಯಲಿದೆ. ಜೂನ್ 27 ರಿಂದ 29ರಂದು ಪಂದ್ಯ ನಡೆಯಲಿದೆ. ನಂತರ ಜುಲೈ 01ರಿಂದ ಇಂಗ್ಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆರಂಭವಾಗಲಿದೆ.
ಮೇ 08ರ ನಂತರ ಈ ಸರಣಿಗೆ ತಂಡಗಳನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ರೋಹಿತ್ ಶರ್ಮ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications