ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷರನ್ನು ಬಿಟ್ಟರೆ ನಾನೇ ಫೇಮಸ್: ರಶೀದ್


ಮುಂಬೈ, ಮೇ 29: ಭಾನುವಾರವಷ್ಟೇ ಮುಕ್ತಾಯಗೊಂಡ ಐಪಿಎಲ್ ನಲ್ಲಿ ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಮಿಂಚಿದ್ದು ಗೊತ್ತಿದೆ. ಈಗ ಅದೇ ರಶೀದ್ ' ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ.
19ರ ಹರೆಯದ ರಶೀದ್ ಈ ಐಪಿಎಲ್ ನಲ್ಲಿ ಸನ್ ರೈಸರ್ಸ ತಂಡದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು. ಅದರಲ್ಲೂ ಕ್ವಾಲಿಫೈಯರ್ 2ರ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ರಶೀದ್ ಅವರ ಆಲ್ ರೌಂಡರ್ ಆಟ ಹೆಚ್ಚು ಗಮನ ಸೆಳೆದಿತ್ತು.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಕ್ವಾಲಿಫೈಯರ್ 2ರಲ್ಲಿ ರಶೀದ್ 10 ಎಸೆತಕ್ಕೆ 34 ರನ್ ಸಿಡಿಸಿದ್ದರಲ್ಲದೆ, 19 ರನ್ ಗೆ 3 ವಿಕೆಟ್ ಉರುಳಿಸಿ ಕೋಲ್ಕತ್ತಾವನ್ನು ಕಾಡಿದ್ದರು. ರಶೀದ್ ಅಮೋಘ ಆಟವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರೂ ಶ್ಲಾಘಿಸಿದ್ದರು. 'ರಶೀದ್ ಖಾನ್ ವಿಶ್ವದಲ್ಲೇ ಶ್ರೇಷ್ಠ ಬೌಲರ್' ಎಂದು ಸಚಿನ್ ಟ್ವೀಟ್ ಮಾಡಿದ್ದರು.
ಸಚಿನ್ ಶ್ಲಾಘನೆ ಬಗ್ಗೆ ಪ್ರತಿಕ್ರಿಯಿಸಿರುವ ರಶೀದ್, 'ಸ್ನೇಹಿತನೊಬ್ಬ ಸಚಿನ್ ಹೊಗಳಿದ್ದ ಟ್ವೀಟನ್ನು ಸ್ಕ್ರೀನ್ ಶಾಟ್ ಕಳಿಸಿದ್ದ. ಅದನ್ನು ನೋಡಿ ನನಗೆ ಶಾಕ್ ಆಗಿತ್ತು. ಅದಕ್ಕೆ ಏನು ಪ್ರತಿಕ್ರಿಯಿಸುವುದೆಂದೇ ಗೊತ್ತಾಗದೆ ನಾನು ಒಂದೆರಡು ಗಂಟೆ ಯೋಚಿಸಿದೆ. ಕೊನೆಗೆ 'ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷರನ್ನು ಬಿಟ್ಟರೆ ಬಹುಶಃ ನಾನೇ ಹೆಚ್ಚು ಜನಪ್ರಿಯನಿರಬಹುದು' ಎಂದು ರಿಪ್ಲೆ ಮಾಡಿದೆ' ಎಂದರು.
'ಸಚಿನ್ ಅವರು ನನ್ನನ್ನು ಹೊಗಳಿ ಮಾಡಿದ ಟ್ವೀಟನ್ನು ಇಡೀ ಅಫ್ಘಾನಿಸ್ತಾನ ನೋಡಿದೆ. ಅಫ್ಘಾನಿಸ್ತಾನದಲ್ಲಿ ಸಚಿನ್ ನಿಜಕ್ಕೂ ತುಂಬಾ ತುಂಬಾ ಜನಪ್ರಿಯರು. ಅಂತವರು ಮೆಚ್ಚುಗೆ ವ್ಯಕ್ತಪಡಿದ್ದರ ಬಗ್ಗೆ ಹೆಚ್ಚಿನವರು ಅಚ್ಚರಿ ವ್ಯಕ್ತಪಡಿಸಿದ್ದರು' ಎಂದು ರಶೀದ್ ಖುಷಿ ಹಂಚಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications