'ವಯಸ್ಸು' ಇತರರಿಗೆ ತಂಡದಿಂದ ಕೈ ಬಿಡಲು ಒಂದು ಕಾರಣ: ಧೋನಿಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಇರ್ಫಾನ್ ಪಠಾಣ್?
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಉತ್ತಮ ಬೌಲಿಂಗ್ ಪ್ರದರ್ಶಿಸಿತಾದ್ರೂ, ಹೈದ್ರಾಬಾದ್ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡಿತು. ಐಪಿಎಲ್ ಇತಿಹಾಸದಲ್ಲಿ ಬಹುಶಃ ಎರಡನೇ ಬಾರೀ ಟೂರ್ನಿಯ ಆರಂಭದಲ್ಲಿ ಸಿಎಸ್‌ಕೆ ಈ ರೀತಿಯ ಕೆಟ್ಟ ಪ್ರದರ್ಶನ ತೋರುತ್ತಿದೆ ಅಂದರೆ ತಪ್ಪಾಗಲಾರದು.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಸತತ ಮೂರು ಸೋಲನ್ನು ಕಂಡಿರುವ ಧೋನಿ ಪಡೆ, ಸನ್‌ರೈಸರ್ಸ್ ವಿರುದ್ಧ ಗೆಲ್ಲುವ ಅವಕಾಶವಿದ್ರೂ ಮುಗ್ಗರಿಸಿತು. ಅದರಲ್ಲೂ ನಾಯಕ ಮಹೇಂದ್ರ ಸಿಂಗ್ ಕ್ರೀಸ್‌ನಲ್ಲಿ ಅಜೇಯವಾಗಿ ಉಳಿದ್ರೂ ಸತತ ಎರಡನೇ ಪಂದ್ಯ ಸಿಎಸ್‌ಕೆ ಸೋಲನ್ನ ಕಂಡಿದೆ.

ಸನ್‌ರೈಸರ್ಸ್ ನೀಡಿದ್ದು 165 ರನ್ ಟಾರ್ಗೆಟ್
ಮೊದಲು ಬ್ಯಾಟಿಂಗ್ ಇಳಿದ ಸನ್‌ರೈಸರ್ಸ್ ಹೈದ್ರಾಬಾದ್ ಪರ ಮನೀಶ್ ಪಾಂಡೆ 29 ರನ್, ಯುವ ಆಟಗಾರ ಪ್ರಿಯಮ್ ಗಾರ್ಗ್ 26 ಎಸೆತಗಳಲ್ಲಿ 51 ಗಳಿಸುವ ಮೂಲಕ ತಂಡಕ್ಕೆ ಉತ್ತಮವಾದ ಸ್ಕೋರ್ ತಲುಪಲು ಕಾರಣವಾದ್ರು. ಅಭಿಷೇಕ್ 31ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಈ ಯುವ ಆಟಗಾರರ ಬ್ಯಾಟಿಂಗ್‌ನಿಂದಾಗಿ ಸನ್‌ರೈಸರ್ಸ್ ಹೈದ್ರಾಬಾದ್ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು.

ಸಿಎಸ್‌ಕೆಗೆ ಕೈ ಕೊಟ್ಟ ಟಾಪ್ ಆರ್ಡರ್
165 ರನ್ ಗುರಿಯನ್ನು ಸುಲಭವಾಗಿ ತಲುಪಿಬಿಡಬಹುದು ಎಂದು ಕೊಂಡಿದ್ದ ಧೋನಿ ಪಡೆಗೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ನೆರವಾಗಲಿಲ್ಲ. ಫಾಫ್ ಡುಪ್ಲೆಸಿಸ್ 22 ರನ್ ಕೊಡುಗೆ ನೀಡಿದ್ರೆ, ಶೇನ್ ವ್ಯಾಟ್ಸನ್, ಅಂಬಟಿ ರಾಯಡು, ಕೇದಾರ್ ಜಾಧವ್ ಸಿಂಗಲ್ ಡಿಜಿಟ್‌ಗೆ ವಿಕೆಟ್ ಒಪ್ಪಿಸಿದ್ರು.
ಜಡ್ಡು-ಧೋನಿ ಜೋಡಿ ಚೆನ್ನೈ ತಂಡವನ್ನು ದಡ ಮುಟ್ಟಿಸಬಹುದು ಎಂದು ಅಂದುಕೊಂಡಿದ್ದವರಿಗೆ ನಿರಾಸೆ ಕಾದಿದ್ದು, ಜಡೇಜಾ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ ಔಟಾದ್ರೆ, ಗ್ರೇಟ್ ಫಿನಿಷರ್ ಧೋನಿ ಮತ್ತೊಂದು ಪಂದ್ಯದಲ್ಲಿ ಕ್ರೀಸ್‌ನಲ್ಲಿದ್ರೂ ತಂಡವನ್ನ ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗ್ಲಿಲ್ಲ.
ಐಪಿಎಲ್ 2020: ದುಬೈಗೆ ಬಂದಿಳಿಯಲಿದ್ದಾರೆ ಬೆನ್ ಸ್ಟೋಕ್ಸ್, ರಾಜಸ್ಥಾನ್ ರಾಯಲ್ಸ್‌ಗೆ ಆನೆ ಬಲ

ಕೊನೆಯ ಎರಡು ಓವರ್‌ಗಳಲ್ಲಿ ರನ್‌ಗಳಿಸಲು ಧೋನಿ ಪರದಾಟ
ಎಂ.ಎಸ್. ಧೋನಿ ಕೊನೆಯ ಎರಡು ಓವರ್‌ಗಳಲ್ಲಿ ರನ್‌ಗಳಿಸಲು ಅಷ್ಟೊಂದು ಪರದಾಡಿದ್ದನ್ನ ಹಿಂದೆ ನೋಡಿರುವುದು ಬಹಳ ವಿರಳ. ಸಿಎಸ್‌ಗೆಗಾಗಿ ಫಲಿತಾಂಶಗಳನ್ನು ಬದಲಾಯಿಸಲು ನಾಯಕ ತನ್ನ ಶಕ್ತಿ ಮೀರಿ ಉತ್ತಮವಾಗಿ ಪ್ರಯತ್ನಿಸುತ್ತಿದ್ದಾಗ, ಅವನು ಆಗಾಗ್ಗೆ ನಿರ್ಜಲೀಕರಣಗೊಳ್ಳುತ್ತಿದ್ದರು ಮತ್ತು ವಿಕೆಟ್‌ಗಳ ನಡುವೆ ಓಡುವಾಗ ಹೆಣಗಾಡುತ್ತಿದ್ದನು.
ಅವರ ಸ್ಥಿತಿಯನ್ನು ಕಂಡು ಕೋಚಿಂಗ್ ಸಿಬ್ಬಂದಿಗೂ ಒಮ್ಮೆ ಯೋಚನೆ ಮಾಡಬೇಕಾಗಿದ್ದಂತೂ ಸುಳ್ಳಲ್ಲ.
ಧೋನಿ ಪರಿಸ್ಥಿತಿ ನೋಡಿ ಟಾಂಗ್ ಕೊಟ್ರಾ ಇರ್ಫಾನ್ ಪಠಾಣ್
ಧೋನಿ ಎರಡು ಪಂದ್ಯಗಳಲ್ಲಿ ಕ್ರೀಸ್‌ನಲ್ಲಿದ್ರೂ ತಂಡವನ್ನ ಗೆಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ಅನೇಕರ ಟೀಕೆಗೆ ಕಾರಣವಾಗಿದೆ. ಅದರಲ್ಲೂ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಮಾಹಿ ಮ್ಯಾಜಿಕ್ ಮಂಕಾಗಿತ್ತು. ರನ್‌ಗಳಿಸಲು ಪರದಾಡುತ್ತಿದ್ದ ಧೋನಿ ಪರಿಸ್ಥಿತಿ ಕಂಡು ಕ್ರಿಕೆಟ್ ವಿಶ್ಲೇಷಕರೇ ಆಶ್ಚರ್ಯಗೊಂಡರು.
ಇದರ ನಡುವೆ ಪಂದ್ಯ ಮುಗಿದ ನಂತರ ದಿನದಲ್ಲಿ ಮಾಜಿ ಬೌಲರ್ ಇರ್ಫಾನ್ ಪಠಾಣ್ ಧೋನಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದೇ ಬಿಂಬಿತವಾಗ್ತಿದೆ. ಇದಕ್ಕೆ ಕಾರಣ ಅವರ ಒಂದು ಟ್ವೀಟ್.

ವಯಸ್ಸು ಇತರರಿಗೆ ತಂಡದಿಂದ ಕೈ ಬಿಡಲು ಒಂದು ಕಾರಣ: ಇರ್ಫಾನ್ ಪಠಾಣ್
ಹೌದು, ಇರ್ಫಾನ್ ಪಠಾಣ್‌ರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇರ್ಫಾನ್ ಐಪಿಎಲ್‌ನಿಂದ ಹೊರಬೀಳುವ ಮೊದಲು ಕೊನೆಯದಾಗಿ ಕಾಣಿಸಿಕೊಂಡಿದ್ದು, ಗುಜರಾತ್ ಲಯನ್ಸ್ ತಂಡದಲ್ಲಿ. ಅವರು ಆಡಿದ ಕೊನೆಯ ಸೀಸನ್‌ನಲ್ಲಿ ಇರ್ಫಾನ್‌ಗೆ ಸಿಕ್ಕ ಅವಕಾಶ ಬಹಳ ಕಡಿಮೆ. ಸಿಎಸ್‌ಕೆ ತಂಡದಲ್ಲಿ ಇದ್ದಾಗಲೂ ಹೆಚ್ಚು ಪಂದ್ಯಗಲಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇರ್ಫಾನ್‌ಗೂ ಬೆಂಚ್ ಕಾಯಲು ವಯಸ್ಸು ಕಾರಣವಾಗಿತ್ತಾ ಎಂಬುದು ಈಗ ಅನುಮಾನಕ್ಕೆ ಕಾರಣವಾಗಿದೆ.
39 ವಯಸ್ಸಿನ ಧೋನಿ ಈಗಲೂ ವೇಗವಾಗಿ ರನ್ ಕದಿಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರು ತಂಡವನ್ನು ಕೊಂಡೊಯ್ದ ರೀತಿ, ಮಾಹಿ ಐಪಿಎಲ್‌ನಲ್ಲೂ ಮಂಕಾಗುವ ಲಕ್ಷಣ ತೋರುತ್ತಿದೆ. ಹೀಗಾಗಿಯೇ ಇರ್ಫಾನ್ ಪರೋಕ್ಷವಾಗಿ ಧೋನಿಗೆ ವಯಸ್ಸಾಯ್ತು ಎಂದು ಹೇಳಿದ್ದಾರೆ ಎಂದು ಚರ್ಚೆಗೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications