ಬ್ಯಾಟಿಂಗ್ ಮಾಡುವ ವೇಳೆ, ಹೀಗೆ ಪದೇ ಪದೇ ಗೊಣಗುತ್ತಿದ್ದ ಅಜಿಂಕ್ಯ ರಹಾನೆ: ಕಾರಣ ಏನ್ ಗೊತ್ತಾ?

ಸೆಂಚುರಿಯನ್ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮೊದಲ ದಿನ ಉತ್ತಮ ಆರಂಭ ಪಡೆದಿರುವ ಟೀಂ ಇಂಡಿಯಾ, ಉತ್ತಮ ಮೊತ್ತ ಕಲೆಹಾಕುವ ಎಲ್ಲಾ ಮುನ್ಸೂಚನೆ ನೀಡಿದೆ. ಎರಡನೇ ದಿನದಾಟವು ಮಳೆಯಿಂದಾಗಿ ವಿಳಂಭವಾಗಿದ್ದರೂ, ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಬಡಿಸಿದೆ.
ಕೆ.ಎಲ್ ರಾಹುಲ್ ಭರ್ಜರಿ ಶತಕದ ಜೊತೆಗೆ ಮಯಾಂಕ್ ಅಗರ್ವಾಲ್ ಅರ್ಧಶತಕದ ಕೊಡುಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಕಾರಣವಾಗಿದೆ. ಕೊಹ್ಲಿ ಇನ್ನಿಂಗ್ಸ್ 35 ರನ್‌ಗೆ ಮುಕ್ತಾಯಗೊಂಡ್ರೆ, ಚೇತೇಶ್ವರ ಪೂಜಾರ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆದ್ರೆ ಸಾಕಷ್ಟು ಟೀಕೆಗಳ ನಡುವೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯ ರಹಾನೆ ತಾಳ್ಮೆಯ ಅಜೇಯ 40ರನ್‌ಗಳ ಕೊಡುಗೆ ಟೀಂ ಇಂಡಿಯಾವನ್ನ ಸುಭದ್ರ ಸ್ಥಿತಿಗೆ ತಲುಪಿಸಿತ್ತು.
81 ಎಸೆತಗಳನ್ನ ಎದುರಿಸಿದ ಅಜಿಂಕ್ಯಾ 8 ಸೊಗಸಾದ ಬೌಂಡರಿಗಳ ಜೊತೆಗೆ ಅಜೇಯ 40 ರನ್ ಕಲೆಹಾಕಿ ಓಪನರ್ ಕೆ.ಎಲ್ ರಾಹುಲ್‌ಗೆ ಉತ್ತಮ ಸಾಥ್ ನೀಡಿದ್ರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 131 ಎಸೆತಗಳಲ್ಲಿ 73 ರನ್ ಕಲೆಹಾಕಿದೆ.
ಬ್ಯಾಟಿಂಗ್ ವೇಳೆ ಪದೇ ಪದೇ ಈ ಮಾತನ್ನ ಹೇಳುತ್ತಿದ್ದ ರಹಾನೆ
ಟೀಕಾಕಾರರ ಬಾಯಿಗೆ ಆಹಾರವಾಗಿರುವ ಟೀಂ ಇಂಡಿಯಾ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕೆಂಬ ಪಣತೊಟ್ಟಿದ್ದರು. ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ತನ್ನ ಸ್ಥಾನ ಉಳಿಸುಕೊಳ್ಳುವಲ್ಲಿ ರಹಾನೆ ಇನ್ನಿಂಗ್ಸ್ ಬಹಳ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಪ್ರತಿ ಎಸೆತವನ್ನ ಅತ್ಯಂತ ಜಾಗರೂಕತೆಯಿಂದ ಎದುರಿಸುತ್ತಿದ್ದ ಅಜಿಂಕ್ಯ ರಹಾನೆ '' ವಾಚ್ ದಿ ಬಾಲ್'' ಎಂದು ತಮ್ಮಲ್ಲೇ ಗೊಣಗುತ್ತಿದ್ದರು.
ದಕ್ಷಿಣ ಆಫ್ರಿಕಾದ ಬೌಲರ್‌ಗಳಾದ ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಮಾರ್ಕೊ ಜಾನ್ಸೆನ್ ಹಾಗೂ ಇತರ ಬೌಲರ್‌ಗಳು ರನ್ ಅಪ್ ಮಾಡಿಕೊಂಡು ಬರುವಾಗ, ಚೆಂಡಿನ ಮೇಲೆ ಏಕಾಗ್ರತೆ ವಹಿಸಲು, ಚೆಂಡಿನ ಚಲನೆಯ ವೇಗವನ್ನ ಅರಿಯಲು ಅಜಿಂಕ್ಯ ರಹಾನೆ ತಮ್ಮಲ್ಲೇ ತಾವು ''ವಾಚ್ ದಿ ಬಾಲ್'' ಎಂದು ಗೊಣಗುತ್ತಿದ್ರು. ರಹಾನೆ ಪ್ರತಿ ಎಸೆತದಲ್ಲೂ ಹೀಗೆ ಪದೇ ಪದೇ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದ್ದು, ಅಜಿಂಕ್ಯ ರಹಾನೆ ಎಷ್ಟು ತಾಳ್ಮೆಯಿಂದ ಏಕಾಗ್ರತೆವಹಿಸಿ ಚೆಂಡನ್ನ ಎದುರಿಸುತ್ತಿದ್ರು ಎಂಬುದು ವೀಡಿಯೋದಲ್ಲಿ ಕಾಣಬಹುದಾಗಿದೆ.

2021ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 20ಕ್ಕೂ ಕಡಿಮೆ ಸರಾಸರಿ ಹೊಂದಿರುವ ರಹಾನೆ
ಅಜಿಂಕ್ಯ ರಹಾನೆ ಇಡೀ ವರ್ಷದಲ್ಲಿ ಅತ್ಯಂತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದಾರೆ. 2021ರಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿರುವ ಮುಂಬೈ ಬ್ಯಾಟ್ಸ್‌ಮನ್ 21 ಇನ್ನಿಂಗ್ಸ್‌ಗಳಲ್ಲಿ 19.57ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನೂ ಇವರ ಬ್ಯಾಟ್‌ನಿಂದ ಶತಕ ಸಿಡಿದು ಒಂದು ವರ್ಷವೇ ಕಳೆದು ಹೋಗಿದೆ.
2020 ಡಿಸೆಂಬರ್ ತಿಂಗಳಿನಲ್ಲಿ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ)ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜಿಂಕ್ಯ ರಹಾನೆ ಮೂರಂಕಿ ಗಡಿದಾಟಿದ್ರು.
ಇಂದಿನ ಪಂದ್ಯದ ಮೊದಲು 2021 ರಲ್ಲಿ ರಹಾನೆ ಭಾರತ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದರು ಮತ್ತು 19.57 ರ ಕಳಪೆ ಸರಾಸರಿಯಲ್ಲಿ ಕೇವಲ 411 ರನ್ ಗಳಿಸಲು ಸಾಧ್ಯವಾಗಿದೆ.
ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್‌ನ ರಹಸ್ಯವನ್ನು ಬಿಚ್ಚಿಟ್ಟ ದಿನೇಶ್ ಕಾರ್ತಿಕ್

ಇತ್ತೀಚೆಗೆ ಉಪನಾಯಕತ್ವ ಸಹ ಕಳೆದುಕೊಂಡ್ರು!
ಅಜಿಂಕ್ಯ ರಹಾನೆ ಕಳಪೆ ಫಾರ್ಮ್‌ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಆಯ್ಕೆ ವೇಳೆ ಟೆಸ್ಟ ಕ್ರಿಕೆಟ್‌ನ ಉಪನಾಯಕತ್ವ ಸ್ಥಾನವನ್ನು ಕಳೆದುಕೊಂಡ್ರು. ಹಿರಿಯ ಆಟಗಾರರ ಆಯ್ಕೆ ಸಮಿತಿಯು ಅಜಿಂಕ್ಯ ರಹಾನೆಯಿಂದ ಉಪನಾಯಕತ್ವವನ್ನ, ರೋಹಿತ್ ಶರ್ಮಾಗೆ ನೀಡಿದ್ದಾರೆ. ಈ ಮೂಲಕ ಅಜಿಂಕ್ಯ ರಹಾನೆ ತುಂಬಾ ಕಷ್ಟದಲ್ಲಿ ತಂಡದಲ್ಲಿ ಸ್ಥಾನ ಪಡೆದಂತಿದೆ.
ಡಕ್ಔಟ್ ಆಗಿ ಬಂದ ಪೂಜಾರಾ ಜೊತೆ ಮಾತನಾಡದೇ ಹೊರಟ ದ್ರಾವಿಡ್: ವಿಡಿಯೋ ವೈರಲ್

ಅವಕಾಶಕ್ಕಾಗಿ ಕಾಯುತ್ತಿರುವ ಶ್ರೇಯಸ್ ಹಾಗೂ ಹನುಮ ವಿಹಾರಿ
ನ್ಯೂಜಿಲೆಂಡ್ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಹಾಗೂ ಅರ್ಧಶತಕ ದಾಖಲಿಸಿದ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಮತ್ತೆ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. ಈತನ ಜೊತೆಗೆ ಉತ್ತಮ ಫಾರ್ಮ್‌ನಲ್ಲಿರುವ ಹನುಮ ವಿಹಾರಿ ಕೂಡ ಅಜಿಂಕ್ಯ ರಹಾನೆ ಜಾಗದಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯೊಡ್ಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications